ಅಂಬಿ ಸ್ವಗ್ರಾಮ ದೊಡ್ಡ ಅರಸಿನಕೆರೆಯಲ್ಲಿ ಸುಮಲತಾ, ನಿಖಿಲ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ದೊಡ್ಡ ಅರಸಿನಕೆರೆಯಲ್ಲಿ ನಡೆದಿದೆ.

ದೊಡ್ಡ ಅರಸಿನಕೆರೆಯಲ್ಲಿ ಸುಮಲತಾ ಅವರು ಮತದಾನ ಮಾಡಿದ ಬಳಿಕ ಅದೇ ಸ್ಥಳಕ್ಕೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಅವರು ಆಗಮಿಸಿದರು. ಈ ವೇಳೆ ಉಭಯ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಿಖಿಲ್​ ಎದುರೇ ಸುಮಲತಾ ಪರ ಬೆಂಬಲಿಗರು ಘೋಷಣೆ ಕೂಗಿದರು.

ತಕ್ಷಣವೇ ಪೋಲಿಸರು ಮಧ್ಯೆ ಪ್ರವೇಶಿಸಿ ಎರಡು ಕಡೆ ಬೆಂಬಲಿಗರನ್ನು ನಿಯಂತ್ರಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದರು. (ದಿಗ್ವಿಜಯ ನ್ಯೂಸ್​)