ಮಂಡ್ಯ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ 56.47 ಕೋಟಿ ರೂ. ಒಡೆಯ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ 56.47 ಕೋಟಿ ರೂ. ಒಡೆಯ ಎಂದು ಘೋಷಿಸಿಕೊಂಡಿದ್ದಾರೆ.

ಚುನಾವಣಾ ಅಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿದ ಚುನಾವಣಾ ಅಫಿಡವಿಟ್​ನಲ್ಲಿ ನಿಖಿಲ್​ ತಮ್ಮ ಆಸ್ತಿ ವಿವರಗಳನ್ನು ನಮೂದಿಸಿದ್ದು, ತಮ್ಮ ಬಳಿ 17.53 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 22.53 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.

ಜತೆಗೆ ತಾವು 2.40 ಕೋಟಿ ರೂ. ಸಾಲ ಮಾಡಿಕೊಂಡಿದ್ದು, ತನಗೆ ವಾರ್ಷಿಕ 71.47 ಲಕ್ಷ ರೂ. ಆದಾಯವಿದೆ. 200 ಗ್ರಾಮ್ ಚಿನ್ನ ಇದೆ. 3,11,49,255 ರೂ. ಮೌಲ್ಯದ ರೇಂಜ್​ ರೋವರ್​ ಕಾರು, 23,03,250 ರೂ. ಮೌಲ್ಯದ ಮಿನಿಟಿ ವ್ಯಾನ್​ ಇದೆ. 10,77,773 ರೂ. ಹೂಡಿಕೆ ಮಾಡಿದ್ದೇನೆ ಎಂದು ನಿಖಿಲ್​ ತಿಳಿಸಿದ್ದಾರೆ.