More

    ರಾತ್ರಿ ವೇಳೆ ಹೊಸ ವಿಮಾನ ಸೇವೆ ಆರಂಭಿಸಲು ಚರ್ಚೆ

    ಕಲಬುರಗಿ: ಸ್ಥಳೀಯ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಇರುವುದರಿಂದ ಹೊಸದಾಗಿ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಹಾರಾಟ ಆರಂಭಿಸುವ ಕುರಿತು ಸಂಸದ ಡಾ.ಉಮೇಶ ಜಾಧವ್ ಅವರು ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಲ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

    ನವದೆಹಲಿ ಕಚೇರಿಯಲ್ಲಿ ಬನ್ಸಲ್ ಅವರನ್ನು ಭೇಟಿ ಮಾಡಿದ ಸಂಸದ ಡಾ.ಜಾಧವ್ ಕಲಬುರಗಿ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ. ಅನುಮತಿ ಸಹ ಸಿಕ್ಕಿದೆ. ಸದ್ಬಳಕೆ ಮಾಡಿಕೊಳ್ಳಲು ಹೊಸ ವಿಮಾನಗಳ ಹಾರಾಟ ಇಲ್ಲವೆ ತಂಗಲು ವಿಮಾನಗಳನ್ನು ಕಳುಹಿಸುವಂತೆ ಕೋರಿದರು.

    ಕಳೆದೊಂದು ವರ್ಷದಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿರುವ ಬಗ್ಗೆ ಸಮಾಲೋಚನೆ ನಡೆಸಿದ ಅವರು, ಕಲಬುರಗಿಯಿಂದ ಹಿಂಡಾನ್(ದೆಹಲಿ) ವಿಮಾನ ಸೇವೆ ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವಾಲಯ ಕಾರ್ಯದರ್ಶಿ ಬನ್ಸಲ್ ಅವರು ಜೂ.೧೫ರೊಳಗೆ ವಿವಿಧ ವಿಮಾನ ಕಂಪನಿ ಅಧಿಕಾರಿಗಳ ಸಭೆ ಕರೆದು ಕಲಬುರಗಿಯಿಂದ ದೇಶದ ಹಲವು ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉದ್ಯಮಿ ಕಿರಣ ಶೆಟಕಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts