ನಿಡಸೋಸಿ ಮಠದಿಂದ ಧಾರ್ಮಿಕ, ಸಾಂಸ್ಕೃತಿಕ ಕ್ರಾಂತಿ

ಸಂಕೇಶ್ವರ: ಗಡಿಭಾಗದಲ್ಲಿ ನಿಡಸೋಸಿ ಮಠ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ರಾಂತಿ ಮಾಡಿದೆ ಎಂದು ಸಂಕೇಶ್ವರ ಕರವೀರ ಶಂಕರಾಚಾರ್ಯ ಮಠದ ಜಗದ್ಗುರು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಶ್ರೀಗಳು ಹೇಳಿದ್ದಾರೆ.

ಸೋಮವಾರ ಸಂಜೆ ಸಮೀಪದ ನಿಡಸೋಸಿಯ ಜಗದ್ಗುರು ಸಿದ್ದಸಂಸ್ಥಾನ ಮಠದ ಬೆಳ್ಳಿ ರಥೋತ್ಸವದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಡಸೋಸಿ ಶ್ರೀಮಠದಿಂದ ದುರದುಂಡೀಶ್ವರ ಶಿವಯೋಗಿಗಳ ಮೂರ್ತಿ ಹೊತ್ತ ರಥೋತ್ಸವ ನಿಡಸೋಸಿ ಗೇಟ್ ತಲುಪಿತು. ಗೇಟದಲ್ಲಿರುವ ಮಹಾದ್ವಾರದ ಬಳಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ರಥೋತ್ಸವದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಶಿವರಾತ್ರಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಕಕಮರಿಯ ಶಿವಲಿಂಗೇಶ್ವರ ಶ್ರೀಗಳು, ಮಾಜಿ ಸಚಿವ ಎ.ಬಿ.ಪಾಟೀಲ, ಜಗದೀಶ ಕವಟಗಿಮಠ ಸೇರಿ ಇತರರು ಇದ್ದರು. ಮಂಗಳವಾರ ಮಾ.5ರಂದು ಮಹಾಪ್ರಸಾದ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಬುಧವಾರ ಜಂಗೀ ಕುಸ್ತಿ ಜರುಗಲಿದೆ.