ಜನಪದರ ಬದುಕಿನ ಹಾದಿ ವೌಲ್ಯಯುತ

ನಿಡಗುಂದಿ: ತತ್ತ್ವಬದ್ಧ ಬದುಕಿಗೆ ಸದಾ ಹಂಬಲಿಸುವ ಜನಪದರ ಬದುಕಿನ ಹಾದಿ ವೌಲ್ಯಯುತವಾದದ್ದು ಎಂದು ಸಾಹಿತಿ ಫ.ಗು. ಸಿದ್ದಾಪುರ ಹೇಳಿದರು.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಮತ್ತು ಹೆಬ್ಬಾಳದ ನಿರ್ಮಲಾ ಪ್ರಕಾಶನ ಆಶ್ರಯದಲ್ಲಿ ಜರುಗಿದ ಕೃತಿ ಲೋಕಾರ್ಪಣೆ ಮತ್ತು ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಮಲ್ಲೇಶಿ ಕಡಬಗಾವಿ ವಿರಚಿತ ಜವಾರಿ ಹುಡುಗನ ಭಾವ ಲಹರಿ ಕೃತಿ ಪರಿಚಯಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದ ಪಯಣ ಕಷ್ಟದ ಕೆಲಸವಾಗಿದ್ದು ಸತತ ಅಧ್ಯಯನದಿಂದ ಮಾತ್ರ ಉನ್ನತಿ ಕಾಣಲು ಸಾಧ್ಯ ಎಂದರು.
ಕವನ ಸಂಕಲನ ಲೋಕಾರ್ಪಣೆಗೊಳಿಸಿದ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಸಾಹಿತ್ಯಕ್ಕೆ ಲೋಕದ ಅಂಕು ಡೊಂಕು ತಿದ್ದುವ ಶಕ್ತಿಯಿದೆ. ಸಾಹಿತಗಳಾದವರು ಸಾಮಾಜಿಕ ಹೊಣೆಗಾರಿಕೆಯ ಪರಿಕಲ್ಪನೆಯಲ್ಲಿ ಕೃತಿಗಳನ್ನು ರಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ವಿಶ್ರಾಂತ ಪ್ರಾಧ್ಯಾಪಕ ಐ.ಎಸ್.ಕುಂಬಾರ ಮಾತನಾಡಿ, ಆಶೆ ಈಡೇರುವಂತಹ ಸಮಾನತೆ ರೂಪಿಸುವ ಸಾಹಿತ್ಯ ರಚನೆಯಾಗಲಿ ಎಂದರು.
ಗ್ರಾಪಂ ಅಧ್ಯಕ್ಷೆ ರೇಣುಕಾ ಕುಂಬಾರ ಕಾರ್ಯಕ್ರಮ ಉದ್ಘಾಇಟಸಿದರು. ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಕಜಾಪ ನಿಡಗುಂದಿ ತಾಲೂಕಾಧ್ಯಕ್ಷ ವೈ.ಎಸ್. ಗಂಗಶೆಟ್ಟಿ, ಚಂದನಗೌಡ ಪಾಟೀಲ, ಗುರುಪಾದಯ್ಯ ಹಿರೇಮಠ, ಎಸ್.ಬಿ.ದಾಸರ, ಈರಮ್ಮ ಮಠಪತಿ, ಬೌರಮ್ಮ ಕುಂಬಾರ, ಅಶೋಕ ಹೋಗೋಡಿ, ಪ್ರಭು ಇಂಗಳೇಶ್ವರ, ಚನ್ನು ಆಕಳವಾಡಿ ಇತರರಿದ್ದರು.
ಹಾಸ್ಯ ಕಲಾವಿದ, ಶಿಕ್ಷಕ ಪ್ರಕಾಶ ಚಲವಾದಿ ಅವರಿಂದ ಜಾನಪದ ಹಾಸ್ಯ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭ ಕಜಾಪ ಹೆಬ್ಬಾಳ ಗ್ರಾಮ ಘಟಕದ ರಚಿಸಿ ಬಸಪ್ಪ ಕುಂಬಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

Leave a Reply

Your email address will not be published. Required fields are marked *