ಧೋನಿ ಜತೆ ಫುಟ್​ಬಾಲ್​ ಆಡಿದ ಪಿಗ್ಗಿಯ ಭಾವಿ ಪತಿ!

ಮುಂಬೈ: ಭಾರತಕ್ಕೆ ಅಘೋಷಿತ ಪ್ರವಾಸ ಕೈಗೊಂಡಿರುವ ನಿಕ್​ ಜೊನಸ್​ ಭಾವಿ ಪತ್ನಿ, ನಟಿ ಪ್ರಿಯಾಂಕ ಛೋಪ್ರಾ ಜತೆ ಡಿನ್ನರ್​ ಡೇಟ್​ನೊಂದಿಗೆ ಕಾಣಿಸಿಕೊಂಡಿದ್ದಷ್ಟೇ ಅಲ್ಲದೆ, ಬಾಲಿವುಡ್​ ಸ್ಟಾರ್​ಗಳ ಜತೆ ಫುಟ್ಬಾಲ್​ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ “ಬೇಬಿ ಇನ್​ ಬಾಂಬೆ” ಕ್ಯಾಪ್ಷನ್​ ಜತೆ, ನಿಕ್​ ಫುಟ್​ಬಾಲ್​ ಆಡಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರತದ ಅಳಿಯ ದೇಶದಲ್ಲಿ ಸಮಯ ಕಳೆಯುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ ನಟರಾದ ರಣ್​ಬೀರ್​ ಕಪೂರ್​, ಆದಿತ್ಯ ರಾಯ್​ ಕಪೂರ್​, ಕುನಾಲ್​ ಖೇಮು, ಶಬೀರ್​ ಅಹ್ಲುವಾಲಿಯಾ ಪ್ರಿಯಾಂಕ ಶೇರ್​ ಮಾಡಿರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ನಟರಷ್ಟೇ ಅಲ್ಲದೆ, ಟೀಂ ಇಂಡಿಯಾದ ಮಹೇಂದ್ರ ಸಿಂಗ್​ ಧೋನಿ ಕೂಡ ಎಲ್ಲರೊಟ್ಟಿಗೆ ಫುಟ್​ಬಾಲ್​ ಆಡಿದ್ದಾರೆ. ಈ ವೇಳೆ ಭಾವಿ ಪತಿಗೆ ಪ್ರಿಯಾಂಕ ಛೋಪ್ರಾ ಅವರು ಸಾಥ್​ ನೀಡಿದರು. (ಏಜೆನ್ಸೀಸ್​)