ಇಬ್ಬರು ಐಸಿಸ್ ಶಂಕಿತ ಉಗ್ರರ ಸೆರೆ

ಹೈದರಾಬಾದ್: ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಭಾನುವಾರ ಹೈದರಾಬಾದ್​ನಲ್ಲಿ ಬಂಧಿಸಿದೆ. ಹಫೀಜ್​ಬಾಬಾ ನಗರದ ಅಬ್ದುಲ್ಲಾ ಬಸಿಥ್ (24) ಮತ್ತು ಚಂದ್ರಯಾನಗುಟ್ಟಾದ ಮೊಹಮ್ಮದ್ ಅಬ್ದುಲ್ ಖಾದೀರ್ (19) ಬಂಧಿತರು. ಉಗ್ರ ಸಂಘಟನೆ ಐಸಿಸ್ ಜಾಲವನ್ನು ಹೈದರಾಬಾದ್​ನಲ್ಲಿ ವಿಸ್ತರಿಸಲು ಈ ಇಬ್ಬರಿಗೆ ಪ್ರಮುಖ ಜವಾಬ್ದಾರಿ ವಹಿಸಲಾಗಿತ್ತೆಂದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರು 2016ರಿಂದಲೂ ಹೈದರಾಬಾದ್​ನಲ್ಲಿ ಐಸಿಸ್ ನೆಲೆಯೂರಲು ಯುವಕರನ್ನು ಪ್ರಚೋದಿಸುತ್ತಿರುವ ಬಗ್ಗೆ ಎನ್​ಐಎ ತನಿಖೆ ನಡೆಸುತ್ತಿದೆ.