ಎಚ್.ಡಿ. ಕೋಟೆ: ಸಮಾಜದಲ್ಲಿರುವ ಅಂಕು ಡೊಂಕುಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಪತ್ರಿಕಾ ರಂಗದಿಂದ ನಡೆಯುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕು ಪತ್ರಕರ್ತರ ಸಂಘದಿಂದ ಕಾರಾಪುರದಲ್ಲಿರುವ ಜಂಗಲ್ ಲಾಡ್ಜ್ ರೆಸಾರ್ಟ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದಂತೆ ಪತ್ರಿಕಾ ರಂಗವೂ ಕೂಡ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದರು.
ತಾಲೂಕಿನಲ್ಲಿ ಹಲವು ಸಮಸ್ಯೆಗಳು ಪತ್ರಕರ್ತರ ಮೂಲಕ ಬೆಳಕಿಗೆ ಬಂದಿದ್ದು, ಸಮಸ್ಯೆಗಳ ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಸಂಘದ ಕಚೇರಿ ನಿರ್ಮಾಣಕ್ಕೆ ನಿವೇಶನ ಒದಗಿಸಲು ಕ್ರಮವಹಿಸುವುದಾಗಿ ಹೇಳಿದರು. ಅಧ್ಯಕ್ಷ ಬೀಚನಹಳ್ಳಿ ಮಂಜು ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎನ್. ನಂದಿನಿ, ಸಹನಾ, ಸಿಂಚನಾ, ವಸಂತಾ ಹಾಗೂ ಉತ್ತೀರ್ಣರಾದ ಪತ್ರಕರ್ತರ ಮಕ್ಕಳಾದ ಎಚ್.ಡಿ. ಭರತ್, ಎಸ್.ಪಿ. ಸಮರ್ಥ್ ಹಾಗೂ ಹಿರಿಯ ಪತ್ರಕರ್ತ ಮಂಜುಕೋಟೆ ಅವರನ್ನು ಗೌರವಿಸಲಾಯಿತು.
ಅಂತರಸಂತೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಹಾಸ, ಮುಖಂಡ ಪ್ರದೀಪ್, ಸಂಘದ ಉಪಾಧ್ಯಕ್ಷ ಯಡತೊರೆ ಮಹೇಶ್, ಪ್ರಧಾನ ಕಾರ್ಯದರ್ಶಿ ನಾಗರಾಮ, ಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜುಕೋಟೆ, ರಂಗರಾಜು, ಸುರೇಶ್, ರೇಣುಕಾ, ಪುರುಷೋತ್ತಮ್, ದಾಸೇಗೌಡ, ಚಂದ್ರು, ರವಿಕುಮಾರ್, ವಾಸುಕಿ ನಾಗೇಶ್, ಪುಟ್ಟರಾಜು, ಕನ್ನಡಪ್ರಮೋದ್, ಸುರೇಶ್, ನಾಗೇಶ್, ಚಿಕ್ಕಣ್ಣೇಗೌಡ, ರಂಗರಾಜು, ಆನಂದ ಇದ್ದರು.