ಈವರೆಗೆ ಏನು, ಎತ್ತ? ಸುದ್ದಿ ಮುಖ್ಯಾಂಶಗಳು

 1. ಮಡಿಕೇರಿಯಲ್ಲಿ ನಿರ್ಮಾಲಾ ಸೀತಾರಾಮನ್ – ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಮೀಟಿಂಗ್ – ಕೊಡಗಿಗೆ ಕೇಂದ್ರದಿಂದ ಅಧ್ಯಯನ ತಂಡ
 2. ಎಲ್​ಕೆಜಿಗೆ ಲಕ್ಷ ಲಕ್ಷ ಫೀಸ್ ಕಟ್ತೀರಾ – ಮೆಡಿಕಲ್ ಸೀಟ್​ಗೆ 34 ಸಾವಿರ ಹೆಚ್ಚುವರಿ ಫೀ ಕೊಡಲು ಆಗಲ್ವಾ – ಸಚಿವ ಡಿಕೆಶಿ ಉಡಾಫೆ ಮಾತು
 3. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ – 8ಕ್ಕೂ ಹೆಚ್ಚು ಗ್ರಾಮಗಳ ಮನೆಗಳಲ್ಲಿ ಬಿರುಕು –  ಮನೆ ಒಳಗಿನ ಪಾತ್ರೆ ,ವಸ್ತುಗಳನ್ನು ಹೊರಗಿಟ್ಟ ಗ್ರಾಮಸ್ಥರು
 4. ಶಿರಾಡಿ ಘಾಟ್ ತುರ್ತು ದುರಸ್ಥಿ ಕೈಗೊಳ್ಳಲು ಡಿವಿಎಸ್​ ಆಗ್ರಹ – ಆದಷ್ಟು ಬೇಗ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ – ಲೋಕೋಪಯೋಗಿ ಸಚಿವ ರೇವಣ್ಣಗೆ ಸದಾನಂದಗೌಡ ಪತ್ರ
 5. ಆಂಧ್ರದ ಸತ್ತಾರಪಲ್ಲಿ ಸಮೀಪ ರಸ್ತೆ ಅಪಘಾತ – ಮದುವೆ ದಿಬ್ಬಣದ ವಾಹನಕ್ಕೆ ಬೊಲೋರೋ ವಾಹನ ಡಿಕ್ಕಿ, 6 ಜನ ಸಾವು –  10ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
 6. ಕುಸಿದ ಕೊಡಗಿಗೆ ನಿರ್ಮಲಾ ಭೇಟಿ – ಮಡಿಕೇರಿಯಲ್ಲಿ ಸಂತ್ರಸ್ತರ ನೋವು ಆಲಿಸಿದ ರಕ್ಷಣಾ ಸಚಿವೆ – ಪರಿಹಾರ ಕೇಂದ್ರಕ್ಕೆ ತೆರಳಿ ಸಾಂತ್ವನ
 7. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ – ಸಿಇಟಿ ಕೌನ್ಸೆಲಿಂಗ್​​ನಲ್ಲಿ ಭಾಗಿಯಾಗದವರಿಗೆ ಮತ್ತೆ ಅವಕಾಶವಿಲ್ಲ- ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್​ ಹೇಳಿಕೆ
 8. ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ವಿಳಂಬ – ಸ್ವಪಕ್ಷೀಯ ಶಾಸಕರಿಂದಲೇ ಅಸಮಾಧಾನ – ಸಾಲಮನ್ನಾ ಆದೇಶ ಬೇಗ ಹೊರಡಿಸಲು ಒತ್ತಡ
 9. ಲೋಕಸಭಾ ಕದನಕ್ಕೆ ರಾಜ್ಯದಲ್ಲಿ ಬಿಜೆಪಿಯಿಂದ ಯುಪಿ ಪ್ಲಾನ್​ – ಉತ್ತರಪ್ರದೇಶ ಮಾದರಿಯಲ್ಲಿ ಟಿಕೆಟ್​​ ಹಂಚಿಕೆ – ಹೊಸ ಮುಖಗಳಿಗೆ ಮಣೆ, ಕೆಲ ಹಾಲಿ ಸಂಸದರಿಗೆ ಕೊಕ್
 10. ಕರಾವಳಿಯಲ್ಲಿ ಇಲ್ಲ ಲಕ್ಷ್ಮಿ ಹಬ್ಬದ ಸಂಭ್ರಮ – ಹೆದ್ದಾರಿ ಬಂದ್​ನಿಂದ ಬಾರದ ಭಕ್ತರ ದಂಡು – ಕುಕ್ಕೆಯಲ್ಲಿ ದೇವಸ್ಥಾನ ಖಾಲಿ ಖಾಲಿ
 11. ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ – ಗೊರವನಹಳ್ಳಿ ಲಕ್ಷ್ಮಿಗೆ ವಿಶೇಷ ಪೂಜೆ ಪುನಸ್ಕಾರ – ಮಂಡ್ಯದಲ್ಲಿ 5 ಲಕ್ಷ ನೋಟುಗಳಿಂದ ಅಲಂಕಾರ
 12. ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಮೊರೆತ – ಅನಂತ್​ನಾಗ್​ನ ಕೊಕೆರ್​ನಾಗ್​ನಲ್ಲಿ ಅಡಗಿ ಕುಳಿತ ಉಗ್ರರು – ಸೇನೆಯಿಂದ ಗುಂಡಿನ ಸುರಿಮಳೆ
 13. ಥಾಣೆ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿಗೆ ಹೆರಿಗೆ ನೋವು – 23 ವರ್ಷದ ಯುವತಿಯಿಂದ ಪ್ರಸವ – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
  ರೈಲ್ವೆ ನಿಲ್ದಾಣದಲ್ಲೇ ಹೆರಿಗೆ!
 14. ತಮಿಳುನಾಡಲ್ಲಿ ಮತ್ತೆ ಉತ್ತರಾಧಿಕಾರಿ ಜಗಳ – ಕರುಣಾನಿಧಿ ಪುತ್ರ ಅಳಗಿರಿಯಿಂದ ಡಿಎಂಕೆ ಮುಖಂಡರ ಸಭೆ – ಸೆಪ್ಟಂಬರ್​ 5ಕ್ಕೆ ರ್ಯಾಲಿ ನಡೆಸಲು ನಿರ್ಧಾರ
 15. ಕಾವೇರಿ ರಭಸಕ್ಕೆ ಹೊಚ್ಚಿಹೋಯ್ತು ತಮಿಳುನಾಡು ಡ್ಯಾಂ – ಕೊಲ್ಲಿ ಅಣೆಕಟ್ಟೆಯ ಏಳು ಗೇಟ್​ ಪೀಸ್​ ಪೀಸ್​- ನದಿಪಾತ್ರದ ಜನರಿಗೆ ಎಚ್ಚರಿಕೆಯ ಮುನ್ಸೂಚನೆ
 16. ಚಿಕ್ಕ ಮಕ್ಕಳಾಯ್ತು ಈಗ ಶಾಸಕರ ಸರದಿ – ಸಿಎಂ ಸಾಹೇಬರೇ ನೆರೆಪೀಡಿತ ಕಾಫಿನಾಡಿಗೂ ಬನ್ನಿ – ಫೇಸ್​ಬುಕ್​​ನಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಆಹ್ವಾನ
 17. ಹೊಸ ಲುಕ್ ನಲ್ಲಿ ಗೋಲ್ಡನ್ ಕ್ವೀನ್ ಅಮೂಲ್ಯ – ಕುತ್ತಿಗೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ ಅಮ್ಮು – ಗಂಡನ ಜೊತೆ ವಿದೇಶಕ್ಕೆ ಹೋಗಿದ್ದಾಗ ಟ್ಯಾಟೂ ಹಾಕಿಸಿಕೊಂಡ ಅಮೂಲ್ಯ
 18. ಹರಿಪ್ರಿಯಾರಿಂದ ಹೊಸ ಮಾದರಿಯಲ್ಲಿ ಪ್ರಮೋಷನ್ – ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರಕ್ಕೆ ಪ್ರಚಾರ – ನಕುಲ್​​ ಪಾತ್ರವನ್ನು ಡ್ರಾಯಿಂಗ್ ರಚಿಸಿ ಪ್ರಮೋಟ್​​​
 19. ಅಮ್ಮನ ಪಾತ್ರದಲ್ಲಿ ಬೆಳ್ಳಿತೆರೆ ನಿರೂಪಕಿ ಅಪರ್ಣ – ‘ಗ್ರಾಮಾಯಣ’ದಲ್ಲಿ ವಿನಯ್​​ ರಾಜಕುಮಾರ್​​​ಗೆ ತಾಯಿ ಪಾತ್ರದಲ್ಲಿ ನಟನೆ – ಮತ್ತೆ ಚಿತ್ರರಂಗಕ್ಕೆ ಕಮ್​​ ಬ್ಯಾಕ್ ಆದ ನಿರೂಪಕಿ
 20. 6 ವರ್ಷಗಳ ನಂತರ ಮತ್ತೇ ಕನ್ನಡಕ್ಕೆ ಜಯಪ್ರದ – ಸುವರ್ಣ ಸುಂದರಿ ಚಿತ್ರದಲ್ಲಿ ನಟನೆ – ಮೋಷನ್​​ ಪೋಸ್ಟರ್​​ ಕೂಡ ರಿಲೀಸ್​​
 21. ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ ನಲ್ಲಿ ಬೆಳ್ಳಿ – 15ರ ಹರೆಯದ ಶೂಟರ್ ಶಾರ್ದುಲ್ ವಿಹಾನ್​ಗೆ ಪದಕ – 73 ಅಂಕಗಳೊಡನೆ ಬೆಳ್ಳಿಗೆ ಮುತ್ತಿಕ್ಕಿದ್ದ ವಿಹಾನ್
 22. ಅಂಕಿತಾ ರೈನಾ ಏಷ್ಯನ್​ ಗೇಮ್ಸ್​ನಲ್ಲಿ ಕಂಚು – ಮಹಿಳೆಯರ ಟೆನ್ನಿಸ್​ ಸಿಂಗಲ್ಸ್ ವಿಭಾಗದಲ್ಲಿ ಮೆಡಲ್ – ಸಾನಿಯಾ
  ಮಿರ್ಜಾ ನಂತರ ಸಿಂಗಲ್ಸ್​ನಲ್ಲಿ ಪದಕ ಗೆದ್ದ ಸಾಧನೆ
 23. ಭಾರತದ ಪುರುಷರ ರೋಯಿಂಗ್ ತಂಡಕ್ಕೆ ಚಿನ್ನ – ಮೂರು ಪದಕಗಳು ಭಾರತದ ಪಾಲು – ಟೀಂ ಇವೆಂಟ್​ನಲ್ಲಿ ಭಾರತಕ್ಕೆ ಚಿನ್ನದ ಪದಕ
 24. ಪ್ರವಾಹದಲ್ಲಿ ಗಾಯಗೊಂಡ ಪ್ರಾಣಿಗಳಿಗೆ ವಿರೂಷ್ಕಾ ಜೋಡಿ ನೆರವು – ಕೇರಳದ ಎನ್‌ಜಿಓ ಜೊತೆ ಕೈಜೋಡಿಸಿದ ಜೋಡಿ – ಪ್ರಾಣಿಗಳಿಗೆ ಬೇಕಾದ ಎಲ್ಲಾ ಧನ ಸಹಾಯಕ್ಕೆ ನಿರ್ಧಾರ