ಚೆನ್ನೈ: ಕರೊನಾದಿಂದಾಗಿ ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ, ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದ ತಮಿಳುನಾಡಿನಲ್ಲೀಗ, ಕೊಂಚ ಆಶಾಭಾವ ಮೂಡಿದೆ.
ಅದಕ್ಕಿಂತ ಮುಖ್ಯವಾಗಿ ರಾಜಧಾನಿ ಚೆನ್ನೈನಲ್ಲಿ ಹೊಸ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಕೋವಿಡ್ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಅವಧಿಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಚೆನ್ನೈಗೆ ಹೋಲಿಸಿದಲ್ಲಿ ಇತರ ಹಾಟ್ಸ್ಪಾಟ್ಗಳಲ್ಲಿ ಈ ಅವಧಿಯಲ್ಲಿ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ಉದಾಹರಣೆಗೆ ರಾಯಪುರಂ ಹಾಗೂ ತೊಂಡಿಯಾರ್ ಪೇಟ್ ಕ್ರಮವಾಗಿ ಈ ಅವಧಿ 140 ಹಾಗೂ 28 ದಿನಗಳಾಗಿವೆ. ಇನ್ನಿ ಇಡೀ ನಗರವನ್ನು ಪರಿಗಣಿಸುವುದಾದರೆ ಈ ಸಮಯ 63 ದಿನಗಳದ್ದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ; ಎಂಟು ನಗರಗಳಲ್ಲಿ ಜಾರಿಯಲ್ಲಿದೆ ದೇಶೀಯ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್; ಹೇಗಿದೆ ವ್ಯಾಕ್ಸಿನ್ ಪಡೆದವರ ಆರೋಗ್ಯ?
ಸಾವಿನ ಸಂಖ್ಯೆಯಲ್ಲಿ ಏರಿಕೆ: ಹೊಸ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂದುಕೊಳ್ಳುತ್ತಿರುವಾಗಲೇ, ಸಾವಿನ ಸಂಖ್ಯೆ ಎರುತ್ತಿರುವುದು ಚಿಂತೆಗೀಡು ಮಾಡಿದೆ. ಕಳೆದ ಐದು ದಿನಗಳಲ್ಲಿ 500 ಜನರು ಮೃತಪಟ್ಟಿದ್ದರೆ, ಸೋಮವಾರ 109 ಜನರು ಕೋವಿಡ್ಗೆ ಬಲಿಯಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗಲು ಕೋವಿಡ್ನೊಂದಿಗೆ ಇತರ ದೀರ್ಘಕಾಲದ ಕಾಯಿಲೆಯಿಂದ ನರಳುತ್ತಿರುವುದೇ ಆಗಿದೆ ಎಂದು ಹೇಳಲಾಗಿದೆ.
ತಮಿಳುನಾಡಿನಲ್ಲಿ 2.68 ಲಕ್ಷ ಕೋವಿಡ್ ರೋಗಿಗಳಿದ್ದರೆ, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 55,152 ಆಗಿದೆ. ಆದರೆ, ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ 75 ಸಾವಿರ ದಾಟಿದೆ.
ಬೈರುತ್ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!