More

    VIDEO| ನ್ಯೂಜಿಲೆಂಡ್​ನಲ್ಲಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಆಕಾಶ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು!

    ವೆಲ್ಲಿಂಗ್ಟನ್​​: ಆಸ್ಟ್ರೇಲಿಯಾದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಈವರೆಗೂ 24 ಮಂದಿ ಪ್ರಾಣ ಹಾನಿ ಸೇರಿದಂತೆ 2000 ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಸಾಕಷ್ಟು ಜಮೀನು ಮತ್ತು ವನ್ಯಜೀವಿ ಸಂಕುಲ ಕೂಡ ಕಾಡ್ಗಿಚ್ಚಿಗೆ ನಲುಗಿ ಹೋಗಿರುವುದಾಗಿ ವರದಿಯಾಗಿದೆ.

    ಇದರ ಮಧ್ಯೆ ಭಾನುವಾರ ಮಳೆರಾಯನ ಆಗಮನದಿಂದ ಆಸ್ಟ್ರೇಲಿಯಾದ ಕೆಲಭಾಗ ನಿಟ್ಟುಸಿರು ಬಿಟ್ಟಿವೆ. ಆದರೆ. ಒಣ ಮತ್ತು ಬೆಚ್ಚನೆಯ ವಾತಾವರಣದಿಂದಾಗಿ ಮತ್ತಷ್ಟು ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಬೆಂಕಿಯ ಕೆನ್ನಾಲಿಗೆ ಕೇವಲ ಆಸ್ಟ್ರೇಲಿಯಾವನ್ನು ಮಾತ್ರ ಆವರಿಸಿಲ್ಲ. ಬದಲಾಗಿ ಬೆಂಕಿಯ ಹೊಗೆ ಸುಮಾರು 2000 ಕಿ.ಮೀವರೆಗೂ ಚಲಿಸಿದ್ದು, ಆಕ್ಲೆಂಡ್​ ನಗರ ಸೇರಿದಂತೆ ನ್ಯೂಜಿಲೆಂಡ್​ ಕೆಲ ಭಾಗಗಳಲ್ಲೂ ಹೊಗೆ ಆವರಿಸಿದೆ.

    ನ್ಯೂಜಿಲೆಂಡ್​ ಆಕಾಶ ಕತ್ತಲೆ ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗಿದ್ದು, ಗಾಳಿಯ ಗುಣಮಟ್ಟವೂ ಕ್ಷೀಣಿಸುತ್ತಿರುವುದಾಗಿ ಹವಾಮಾನ ವರದಿಗಳು ನೀಡಿವೆ. ಉತ್ತರ ದ್ವೀಪಗಳ ಮೇಲ್ಭಾಗದಲ್ಲಿ ಹೊಗೆ ಪದರ ದಪ್ಪವಾಗಿದ್ದು, ಸೋಮವಾರದೊತ್ತಿಗೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.

    ಇತ್ತ ನೆಟ್ಟಿಗರು ನ್ಯೂಜಿಲೆಂಡ್​ ಕಂಡುಬಂದಿರುವ ಕಿತ್ತಳೆ ಬಣ್ಣದ ಆಕಾಶದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts