Thursday, 22nd November 2018  

Vijayavani

ಶುಗರ್ ಫ್ಯಾಕ್ಟರಿ ಮಾಲೀಕರ ಪ್ರತ್ಯೇಕ ಸಭೆ-ಸಭೆ ಬಳಿಕ ಸಿಎಂ ಗೃಹ ಕಚೇರಿಗೆ ಸಕ್ಕರೆ ಧಣಿಗಳ ಆಗಮನ        ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಡೌಟ್-ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಬ್ಯುಸಿ-ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರು        ದಿಢೀರ್ ಪಾತಾಳ ಕಂಡ ಈರುಳ್ಳಿ ಬೆಲೆ-ರೈತರ ಸಂಕಷ್ಟದ ಬಗ್ಗೆ ಪಿಎಂಗೆ ಟ್ವೀಟ್​ ಮಾಡಿದ ಬೆಳೆಗಾರ        ‘ಬಡವರ ಬಂಧು’ ಯೋಜನೆಗೆ ಸಿಎಂ ಚಾಲನೆ-ಆಯ್ದ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ವಿತರಣೆ        ಹಾಸನದಲ್ಲಿ ಮಿತಿಮೀರಿದ ಕಾಡಾನೆ ಹಾವಳಿ-ಸಿಎಂ ಎಚ್ಡಿಕೆಗೆ ಮನವಿ ಮಾಡಿದ ಸಕಲೇಶಪುರದ ಬಾಲಕಿ ವಿಸ್ಮಯ        10 ಕಿಮೀ ಉದ್ದ ಕೆಂಪು-ಬಿಳಿ ರೈಲ್ವೆ ಟ್ರ್ಯಾಕ್-ದೇಶದಲ್ಲೇ ಮಾದರಿ ಧಾರವಾಡದ ಮುಗದ ರೈಲ್ವೆ ನಿಲ್ದಾಣ-ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್​​​       
Breaking News

VIDEO: ಒಂದೇ ಓವರ್​ನಲ್ಲಿ 43 ರನ್ ಸಿಡಿಸಿದ ಕಿವೀಸ್​ ಜೋಡಿ!

Thursday, 08.11.2018, 6:40 AM       No Comments

ಹ್ಯಾಮಿಲ್ಟನ್: ನ್ಯೂಜಿಲೆಂಡ್​ನ ಇಬ್ಬರು ಬ್ಯಾಟ್ಸ್​ಮನ್​ಗಳು ಒಗ್ಗೂಡಿ ಏಕದಿನ ಪಂದ್ಯದ ಒಂದೇ ಓವರ್​ನಲ್ಲಿ 43 ರನ್ ದೋಚುವ ಮೂಲಕ ಹೊಸ ವಿಶ್ವದಾಖಲೆ ನಿರ್ವಿುಸಿದ್ದಾರೆ. ನಾರ್ಥರ್ನ್ ಡಿಸ್ಟ್ರಿಕ್ಟ್ಸ್​ ತಂಡದ ಜೋಯಿ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಬುಧವಾರ ನಡೆದ ಫೋರ್ಡ್ ಟ್ರೋಫಿ ಪಂದ್ಯದಲ್ಲಿ ಎದುರಾಳಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ತಂಡದ ಬೌಲರ್ ಮಧ್ಯಮ ವೇಗಿ ವಿಲ್ಲೆಮ್ ಲುಡಿಕ್ ಓವರ್​ನಲ್ಲಿ ಈ ಸಾಧನೆ ಮಾಡಿದರು.

ದಕ್ಷಿಣ ಆಫ್ರಿಕಾ ಮೂಲದ 21 ವರ್ಷದ ಲುಡಿಕ್, ಈ ಓವರ್​ನಲ್ಲಿ ಕ್ರಮವಾಗಿ 4, 6 (ನೋಬಾಲ್), 6 (ನೋಬಾಲ್), 6, 1, 6, 6, 6 ರನ್ ಬಿಟ್ಟುಕೊಟ್ಟರು. ಇದು ಲಿಸ್ಟ್ ಎ ಏಕದಿನ ಕ್ರಿಕೆಟ್​ನ ಒಂದೇ ಓವರ್​ನಲ್ಲಿ ಸಿಡಿದ ಸರ್ವಾಧಿಕ ರನ್​ಗಳಾಗಿವೆ. 2013ರ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಬಾಂಗ್ಲಾದೇಶದ ಅಲಾವುದ್ದೀನ್ ಬಾಬು 39 ರನ್ ಬಿಟ್ಟುಕೊಟ್ಟಿದ್ದು ಹಿಂದಿನ ದಾಖಲೆ.

ಜಿಂಬಾಬ್ವೆಯ ಎಲ್ಟನ್ ಚಿಗುಂಬುರ ಈ ಪೈಕಿ 36 ರನ್ ಕಸಿದಿದ್ದರೆ, 1 ನೋಬಾಲ್ ಮತ್ತು 2 ವೈಡ್​ನಿಂದ ಬಂದಿತ್ತು. ಲುಡಿಕ್ ಎಸೆದ ಪಂದ್ಯದ 46ನೇ ಓವರ್​ನ ಮೊದಲ 5 ಎಸೆತಗಳಲ್ಲಿ ಹ್ಯಾಂಪ್ಟನ್ 4, 6, 6, 6, 1 ರನ್ ಸಿಡಿಸಿದರು. ಇದರಲ್ಲಿ 2, 3ನೇ ಎಸೆತಗಳು ನೋಬಾಲ್ ಆಗಿದ್ದವು. ಇದರಿಂದ ಲುಡಿಕ್ ಮೊದಲ 3 ಕ್ರಮಬದ್ಧ ಎಸೆತಗಳಲ್ಲೇ 25 ರನ್ ಬಿಟ್ಟುಕೊಟ್ಟಿದ್ದರು. ಕೊನೇ 3 ಎಸೆತಗಳಲ್ಲಿ ಕಾರ್ಟರ್ ಸತತ ಸಿಕ್ಸರ್ ಸಿಡಿಸಿದರು. ತಾನೆಸೆದ ಮೊದಲ 9 ಓವರ್​ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದ ಲುಡಿಕ್, 10 ಓವರ್ ಅಂತ್ಯಕ್ಕೆ ಒಟ್ಟು 85 ರನ್ ಬಿಟ್ಟುಕೊಟ್ಟಿದ್ದರು.

Leave a Reply

Your email address will not be published. Required fields are marked *

Back To Top