ವಿಡಿಯೋ | ಬಾನಂಗಳದಲ್ಲಿ ಪಟಾಕಿ ಚಿತ್ತಾರದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್

ಆಕ್ಲೆಂಡ್(ನ್ಯೂಜಿಲೆಂಡ್​​): ಹೊಸ ವರ್ಷದ ಸಂಭ್ರಮಕ್ಕೆ ಭಾರತದಲ್ಲಿ ಕ್ಷಣಗಣನೆ ಆರಂಭವಾಗಿದ್ದರೆ, ಅತ್ತ ನ್ಯೂಜಿಲೆಂಡ್​​ನ ಮಹಾನಗರ ಆಕ್ಲೆಂಡ್​​ನಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಪ್ರಪಂಚದ ಪ್ರಮುಖ ನಗರಗಳಲ್ಲಿ ಒಂದಾದ ಆಕ್ಲೆಂಡ್ 2019ನೇ ಇಸವಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಇಲ್ಲಿನ ಜನರು ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಆಕ್ಲೆಂಡ್​ನಲ್ಲಿರುವ ಸ್ಕೈ​ ಟವರ್​ ಹಾಗೂ ಹಾರ್ಬರ್​ ಸೇತುವೆ ಬಳಿ ಸಾಕಷ್ಟು ಜನರು ನೆರೆದಿದ್ದರು. ಸ್ಕೈ​ ಟವರ್​ನಲ್ಲಿನ ಪರದೆಯ ಮೇಲೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಹೊಸ ವರ್ಷ ಬರುತ್ತಿದ್ದಂತೆಯೇ ಬಾನಂಗಳದಲ್ಲಿ ಪಟಾಕಿಯನ್ನು ಸಿಡಿಸಿ, ವರ್ಣ ಚಿತ್ತಾರಗಳ ಮೂಲಕ 2019ನ್ನು ಬರಮಾಡಿಕೊಂಡು ಸಂಭ್ರಮಿಸಿದರು.

ದ್ವೀಪಗಳಾದ ಸಮೋಹ ಹಾಗೂ ಕಿರಿಬತ್ತಿಯೂ ಕೂಡ ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಸಂಭ್ರಮಿಸುವ ಮೂಲಕ ಬರಮಾಡಿಕೊಂಡಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *