More

    ನ್ಯೂಜಿಲೆಂಡ್‌ನಲ್ಲಿ ಪುರಾತನ ಮರ ದ ಪಳೆಯುಳಿಕೆ ಪತ್ತೆ

    ಚಿತ್ರದುರ್ಗ: ನ್ಯೂಜಿಲೆಂಡ್‌ನ ಉತ್ತರಕ್ಕೆ ನಾಗಾವಾ ಎಂಬ ದ್ವೀಪದಲ್ಲಿ ಕಯೂರಿ ಎಂಬ ಹೆಸರಿನ ಮರ ದ ಪಳೆಯುಳಿಕೆ ಪತ್ತೆಯಾಗಿದೆ.

    ದ್ವೀಪದಲ್ಲಿ ಜಿಯೋಥರ್ಮಲ್ ಪವರ್ ಘಟಕದ ಸ್ಥಾಪನೆಗೆ ಬುನಾದಿ ತೆಗೆದಾಗ ಸುಮಾರು 26 ಅಡಿ ಭೂಮಿಯ ಕೆಳಭಾಗದಲ್ಲಿ ಮಣ್ಣಿನ ಪದರದಲ್ಲಿ ಮರ ಲಭ್ಯವಾಗಿದೆ. ಇದರ ಉದ್ದ 65 ಅಡಿ, ವ್ಯಾಸ 8 ಅಡಿ ಇದೆ.

    ಮರದ ವಯಸ್ಸು 1,500 ವರ್ಷ ಹಾಗೂ 41 ಸಾವಿರದಿಂದ 42,500 ವರ್ಷಗಳ ಅವಧಿಯಲ್ಲಿನ ಮರವೆಂದು ಕಾರ್ಬನ್ ಡೇಟಿಂಗ್ ಮಾಪನದಿಂದ ಮಾಹಿತಿ ದಾಖಲಿಸಲಾಗಿದೆ.

    ಈ ಮರ ದ ವಿಶೇಷ ಏನೆಂದರೆ ತಿರುಳಿನ ಸುರುಳಿಯಲ್ಲಿ ಭೂಮಿಯ ಆಯಸ್ಕಾಂತದ ಕ್ಷೇತ್ರವು ಬದಲಾವಣೆ ಆಗುತ್ತಿರುವುದನ್ನು ವಿಜ್ಞಾನಿಗಳು ದಾಖಲು ಮಾಡಿದ್ದಾರೆ.

    ಇದಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.

    ಇಲ್ಲಿ ಈ ಹಿಂದೆ ಸಾಕಷ್ಟು ಜ್ವಾಲಾಮುಖಿಗಳು ಸಂಭವಿಸಿವೆ. ಈ ಪ್ರದೇಶದ ಸುತ್ತಮುತ್ತ ಸಾಕಷ್ಟು ಬಿಸಿನೀರಿನ ಬುಗ್ಗೆಗಳಿರುವುದನ್ನು ಕಾಣಬಹುದು.

    ಭಾರತದ ಹಿಮಾಲಯ ಪರ್ವತದ ಶ್ರೇಣಿಯು ಭೂಕಂಪಗಳ ವಲಯವೆಂದು ಈಗಾಗಲೇ ಗುರುತಿಸಿಕೊಂಡಿದೆ.

    ಕೇದಾರನಾಥ್, ಬದರಿನಾಥ್ ಸ್ಥಳಗಳಲ್ಲಿ ಈಗಲೂ ಬಿಸಿನೀರಿನ ಬುಗ್ಗೆಗಳು ಇದ್ದು, ಇಲ್ಲಿಯೂ ಸಾಕಷ್ಟು ಗಿಡಮರಗಳು ಮತ್ತು ಪ್ರಾಣಿಗಳ ಪಳೆಯುಳಿಕೆ ಪತ್ತೆಯಾಗಿವೆ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ.ಪರಶುರಾಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts