More

  ಹೊಸ ವರ್ಷಾಚರಣೆ ಪಾರ್ಟಿಗೆ ಹೋದ ಯುವಕ ಕ್ವಾರಿ ಹೊಂಡಕ್ಕೆ ಬಿದ್ದು ಮೃತಪಟ್ಟ!

  ಸಕಲೇಶಪುರ: ತಾಲೂಕಿನ ಹೊಸಗದ್ದೆ ಮೀಸಲು ಅರಣ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆ ವೇಳೆ ಯುವಕನೊಬ್ಬ ನೀರಿನ ಹೊಂಡಕ್ಕೆ ಬಿದ್ದು ಮೃತ ಪಟ್ಟಿದ್ದಾನೆ.

  ಜಮ್ಮನಹಳ್ಳಿ ಗ್ರಾಮದ ಅರುಣ್ ಕುಮಾರ್ (28) ಮೃತ ಯುವಕ. ಗ್ರಾಮದ ನಾಗೇಶ್ ಎಂಬವನೊಂದಿಗೆ ಪಾರ್ಟಿ ಗೆ ತೆರಳಿದ್ದ ವೇಳೆ ಮೀಸಲು ಅರಣ್ಯದಲ್ಲಿನ ಕಲ್ಲುಕ್ವಾರಿಯಲ್ಲಿನ ಹೊಂಡಕ್ಕೆಬಿದ್ದು ಮೃತ ಪಟ್ಟಿದ್ದಾನೆ.

  ರಾತ್ರಿ ಕತ್ತಲಿನಲ್ಲಿ ಅವಘಡ ಸಂಭವಿಸಿದ್ದರಿಂದ ಆತನನ್ನು ರಕ್ಷಿಸಲು ಸ್ನೇಹಿತರು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

  ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts