2019 ರ ಮುನ್ನೋಟ

ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಕಳೆದ ವರ್ಷದ ಘಟನಾವಳಿಗಳ ಅವಲೋಕನದ ಬೆನ್ನಿಗೆ ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ…

ಕನ್ನಡ ಮತ್ತು ಸಂಸ್ಕೃತಿ

# ಜ. 4-6: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 84ನೇ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್​ನಿಂದ ಆಯೋಜನೆ

# ಜ. 6: ಚಿತ್ರಸಂತೆ, ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜನೆ

# ಜ. 12, 13: ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ಐತಿಹಾಸಿಕ ಹಂಪಿ ಉತ್ಸವ

# ಜ. 18-20: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಟ್ಟಡದಲ್ಲಿ 7ನೇ ಆವೃತ್ತಿಯ ಧಾರವಾಡ ಸಾಹಿತ್ಯ ಸಂಭ್ರಮ

# ಜ. 19, 20: ಮೈಸೂರಿನಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ

# ಜನವರಿ-ಫೆಬ್ರವರಿ: ರಾಷ್ಟ್ರೀಯ ನಾಟಕ ಶಾಲೆಯಿಂದ (ಎನ್​ಎಸ್​ಡಿ) ನಾಟಕೋತ್ಸವ ಆಯೋಜನೆ

# ಫೆಬ್ರವರಿ: ಉಡುಪಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

# ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 2019ರ ಫೆ.20ರಿಂದ 24ರವರೆಗೆ ಏಷ್ಯಾದಲ್ಲೇ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ’ ಆಯೋಜನೆ.

ಶೈಕ್ಷಣಿಕ ವಲಯ

# ದ್ವಿತೀಯ ಪಿಯು ಪರೀಕ್ಷೆ- ಮಾ.1ರಿಂದ 18

# ಎಸ್ಸೆಸ್ಸೆಲ್ಸಿ ಪರೀಕ್ಷೆ- ಮಾ.21ರಿಂದ ಏ.4

# ಕಾಮೆಡ್ ಕೆ- ಏಪ್ರಿಲ್ ಮೂರನೇ ವಾರ

ರಾಜ್ಯದ ಪ್ರಮುಖ ಜಾತ್ರೋತ್ಸವ

ಜನವರಿ

# 4-10: ಶಿವಮೊಗ್ಗದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಸ್ವಾಮೀಜಿಯವರ 1,059ನೇ ಜಯಂತ್ಯುತ್ಸವ

# 4: ಸಿಂಧನೂರು ತಾಲೂಕು ಸೋಮಲಾಪುರದ ಶ್ರೀ ಅಂಬಾಭವಾನಿ ಜಾತ್ರೆ

# 10,11: ಹಾರಕೂಡದ ಶ್ರೀ ಚನ್ನಬಸವ ಶಿವಯೋಗಿಗಳ ಜಾತ್ರೋತ್ಸವ

# 12: ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮಹಾರಥೋತ್ಸವ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

# 13: ಯಾದಗಿರಿ ತಾಲೂಕು ಮೈಲಾಪುರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ

# 14: ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ಬ್ರಹ್ಮರಥೋತ್ಸವ

# 16: ಮೈಸೂರು ಜಿಲ್ಲೆ ಕೆ.ಆರ್.ನಗರದ ಚುಂಚನಕಟ್ಟೆ ಶ್ರೀರಾಮ ದೇವರ ರಥೋತ್ಸವ

# 18: ಬನದ ಹುಣ್ಣಿಮೆ, ಬೆಳಗಾವಿ ಸವದತ್ತಿ ಯಲ್ಲಮ್ಮನಗುಡ್ಡ/ ದೇವಿ ಜಾತ್ರೆ

# 22: ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಜಾತ್ರೆ

# 26: ಬೀದರ್ ಜಿಲ್ಲೆ ಹುಮನಾಬಾದ್​ನಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ

ಫೆಬ್ರವರಿ

# 1-6: ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಜಾತ್ರೆ

# 9-18: ಧರ್ಮಸ್ಥಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ

# 14,15: ಹೊನ್ನಾಳಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವ

# 14-19: ಯಾದಗಿರಿ ಜಿಲ್ಲೆ ತಿಂಥಣಿಯಲ್ಲಿ ಶ್ರೀ ಮೌನೇಶ್ವರರ ಜಾತ್ರೋತ್ಸವ

# 19: ಕೆಜಿಎಫ್ ತಾಲೂಕು ಗುಟ್ಟಹಳ್ಳಿಯ ಬಂಗಾರ ತಿರುಪತಿಯ ವೆಂಕಟೇಶ್ವರಸ್ವಾಮಿ ಜಾತ್ರೆ, ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದಲ್ಲಿ ಭರತ ಹುಣ್ಣಿಮೆ ಆಚರಣೆ, ಹರಿಹರದಲ್ಲಿ ಹರಿಹರೇಶ್ವರ ರಥೋತ್ಸವ

# 22: ಹೂವಿನ ಹಡಗಲಿ ತಾಲೂಕು ಮೈಲಾರ ಕಾರ್ಣಿಕ

# 28: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವ

ಮಾರ್ಚ್

# 4: ಮಹದೇಶ್ವರಬೆಟ್ಟದಲ್ಲಿ ಮಹಾ ರಥೋತ್ಸವ, ಉತ್ತರ ಕನ್ನಡದ ಗೋಕರ್ಣ ಮಹಾಬಲೇಶ್ವರ ರಥೋತ್ಸವ

# 5: ತುಮಕೂರಿನ ಸಿದ್ಧಗಂಗೆ ಜಾತ್ರೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಜಾತ್ರೆ, ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಗ್ರಾಮದ ಭೋಗ ನಂದೀಶ್ವರ ಜಾತ್ರೆ

# 6: ಮುಳಬಾಗಲು ತಾಲೂಕಿನ ಅವಣಿಯಲ್ಲಿ ಶ್ರೀರಾಮಲಿಂಗೇಶ್ವರ ರಥೋತ್ಸವ, ಹೂವಿನ ಹಡಗಲಿಯ ಕುರುವತ್ತಿ ಬಸವೇಶ್ವರ ರಥೋತ್ಸವ

# 7: ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆ

# 19: ನಂಜನಗೂಡಿನಲ್ಲಿ ಗೌತಮ ಪಂಚಮಹಾರಥೋತ್ಸವ

# 22: ಚಳ್ಳಕೆರೆ ತಾಲೂಕು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ

# 25: ಕಲಬುರಗಿಯ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ಜಾತ್ರೋತ್ಸವ

ಏಪ್ರಿಲ್

# 5-11: ಹರಪನಹಳ್ಳಿ ತಾಲೂಕು ಉಚ್ಚಂಗೆಮ್ಮ ದೇವಿ ಜಾತ್ರೆ

# 15: ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿ ದೊಡ್ಡ ರಥೋತ್ಸವ

# 17: ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ-ರಥೋತ್ಸವ

# 19: ಗದಗ ತೋಂಟದಾರ್ಯ ಮಹಾರಥೋತ್ಸವ

ಆಗಸ್ಟ್

# 24: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ

# 26: ಹುಬ್ಬಳ್ಳಿ ಮೂರುಸಾವಿರ ಮಠದ ಮಹಾರಥೋತ್ಸವ

ಅಕ್ಟೋಬರ್

# 8: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವ ‘ಮಂಗಳೂರು ದಸರಾ ಮೆರವಣಿಗೆ’

# 28: ಗದಗ ಜಿಲ್ಲೆಯ ಇಟಗಿಯ ಭೀಮಾಂಬಿಕಾ ದೇವಿ ಜಾತ್ರೆ

# ಚಾಮುಂಡಿಬೆಟ್ಟದಲ್ಲಿ ದಸರಾ ವೇಳೆ ರಥೋತ್ಸವ ನಡೆಯಲಿದೆ (ದಿನಾಂಕ ನಿಗದಿಯಾಗಬೇಕಿದೆ)

ನವೆಂಬರ್

# 25: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ

ಡಿಸೆಂಬರ್

# 2: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

# 12: ಉಡುಪಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಕೋಟೇಶ್ವರ ರಥೋತ್ಸವ, ಕೊಡಿಹಬ್ಬ

# ಜ. 3-5: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸ್ಮಾರ್ಟ್ ಗ್ರಿಡ್ ಮತ್ತು ಸ್ಮಾರ್ಟ್ ಸಿಟಿ ಅಪ್ಲಿಕೇಷನ್ ಅಂತಾರಾಷ್ಟ್ರೀಯ ಸಮ್ಮೇಳನ, ಕೊಯಮತ್ತೂರು

# ಜ. 15ರಿಂದ ಮಾ.4: ಅರ್ಧ ಕುಂಭಮೇಳ, ಪ್ರಯಾಗರಾಜ್ (ಅಲಹಾಬಾದ್)

ರಾಮಮಂದಿರ ತೀರ್ಪು

#  ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ಜನವರಿಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಆರಂಭ

#  ಕುತೂಹಲ ಕೆರಳಿಸಿದ ಸಂಭಾವ್ಯ ತೀರ್ಪು

ಕೇಂದ್ರ ಬಜೆಟ್

# ಫೆಬ್ರವರಿ 1 ರಂದು ಕೇಂದ್ರ ಮಧ್ಯಂತರ ಬಜೆಟ್ ಮಂಡನೆ

# ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರಪೂರ ಘೊಷಣೆ ಸಾಧ್ಯತೆ

ಮಲ್ಯ ಹಸ್ತಾಂತರ

# ಮಲ್ಯ ಹಸ್ತಾಂತರಕ್ಕೆ ಲಂಡನ್ ಕೋರ್ಟ್ ಸಮ್ಮತಿ

# ಈ ವರ್ಷವೇ ಭಾರತಕ್ಕೆ ಬರುವರೇ ಎಂಬ ಕುತೂಹಲ

ಲೋಕಸಭಾ ಚುನಾವಣೆ

# ಏಪ್ರಿಲ್/ಮೇ: 17ನೇ ಲೋಕಸಭಾ ಚುನಾವಣೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಜಮ್ಮು- ಕಾಶ್ಮೀರ ವಿಧಾನಸಭೆಗಳಿಗೂ ಚುನಾವಣೆ

# ಅಕ್ಟೋಬರ್: ಹರಿಯಾಣ ವಿಧಾನಸಭಾ ಚುನಾವಣೆ

# ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವಧಿ 2019ರ ಚುನಾವಣೆ ನಂತರ ಮುಕ್ತಾಯ. ಕರ್ನಾಟಕದಲ್ಲೂ ಪಕ್ಷದ ರಾಜ್ಯಾಧ್ಯಕ್ಷರ ಅವಧಿ ಪೂರ್ಣ

# ಡಿ.26ರಂದು ಕಂಕಣ ಸೂರ್ಯಗ್ರಹಣ, ದಕ್ಷಿಣ ಭಾರತೀಯರಿಗೆ ಅಪರೂಪದ ಗ್ರಹಣ.

​ಟೆಕ್

# ಜ. 24: ಟೂಲ್​ಟೆಕ್, ಬೆಂಗಳೂರು

# ಜ. 3-7: 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್, ಜಲಂಧರ್

# ಜ. 4-5: ಅಂತಾರಾಷ್ಟ್ರೀಯ ಮತ್ತು ಅಂತರ್​ಶಿಸ್ತೀಯ ಅಧ್ಯಯನ ಸಮ್ಮೇಳನ, ಬೆಂಗಳೂರು

# ಜ. 14: ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

# ಜ. 13-17: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ

# ಫೆ. 18-22: ಅಂತಾರಾಷ್ಟ್ರೀಯ ಮಷಿನ್ ಟೂಲ್ಸ್ ಮತ್ತು ಆಟೋಮೊಬೈಲ್ಸ್ ಪ್ರದರ್ಶನ, ಚೆನ್ನೈ

# ಫೆ. 22-24: ಅಂತಾರಾಷ್ಟ್ರೀಯ ಸಸ್ಯ ಪ್ರದರ್ಶನ, ಪುಣೆ

# ಫೆ. 20: ವಿಶ್ವ ಕೆಮಿಸ್ಟ್ ವಸ್ತುಪ್ರದರ್ಶನ, ಮುಂಬೈ

# ಫೆ.16: ನೈಜೀರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ

# ಏ.17: ಇಂಡೋನೇಷ್ಯಾದಲ್ಲಿ 12ನೇ ಸಾರ್ವತ್ರಿಕ ಚುನಾವಣೆ

# ಏ.20: ಅಫ್ಘಾನಿಸ್ತಾನ ಅಧ್ಯಕ್ಷರ ಚುನಾವಣೆ

# ಮೇ 23-26: ಐರೋಪ್ಯ ಒಕ್ಕೂಟದ ಪಾರ್ಲಿಮೆಂಟ್ ಚುನಾವಣೆ

# ನ.5: ಅಮೆರಿಕದ ಮೂರು ರಾಜ್ಯಗಳ ಗವರ್ನರ್ ಮತ್ತು ವಿವಿಧ ರಾಜ್ಯಗಳ ಶಾಸನಸಭೆಗೆ ಚುನಾವಣೆ

# ಏ.30: ಜಪಾನ್ ದೊರೆ ಅಕಿಹಿಟೊ ರಾಜಪದವಿ ಪರಿತ್ಯಾಗ. 2 ಶತಮಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಂಹಾಸನದಿಂದ ಇಳಿಯುತ್ತಿರುವ ಜಪಾನ್ ಮಹಾರಾಜ

# ಅ.26 – ಪ್ಲಾಸ್ಟಿಕ್ ಸ್ಟ್ರಾ, ಕಾಟನ್ ಬಡ್ಸ್​ಗಳ ಮಾರಾಟ ಮತ್ತು ಬಳಕೆಗೆ ಬ್ರಿಟನ್​ನಲ್ಲಿ ನಿಷೇಧ ಸಾಧ್ಯತೆ.


ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್

# ಜ.3-7: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯ ಕೊನೇ ಪಂದ್ಯ

# ಜ.12-18: ಆಸ್ಟ್ರೇಲಿಯಾದಲ್ಲಿ 3 ಏಕದಿನ ಸರಣಿ

# ಜ.23-ಫೆ.10: ನ್ಯೂಜಿಲೆಂಡ್ ಪ್ರವಾಸ 5 ಏಕದಿನ, 3 ಟಿ20 ಪಂದ್ಯಗಳು

# ಫೆ.24-ಮಾ.13: ಭಾರತದಲ್ಲಿ ಆಸೀಸ್ ವಿರುದ್ಧ 5 ಏಕದಿನ, 2 ಟಿ20

# ಜುಲೈ-ಆಗಸ್ಟ್: ವೆಸ್ಟ್ ಇಂಡೀಸ್ ಪ್ರವಾಸ: 2 ಟೆಸ್ಟ್, 3 ಏಕದಿನ, 3 ಟಿ20

# ಅಕ್ಟೋಬರ್-ನವೆಂಬರ್: ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್

# ನವೆಂಬರ್: ಭಾರತದಲ್ಲಿ ಬಾಂಗ್ಲಾದೇಶ ವಿರುದ್ಧ: 2 ಟೆಸ್ಟ್, 3 ಟಿ20

# ಡಿಸೆಂಬರ್: ಭಾರತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20

ದೇಶೀಯ ಕ್ರಿಕೆಟ್

# ಜ.15-ಫೆ.6: ರಣಜಿ ನಾಕೌಟ್, ಫೈನಲ್

# ಫೆ.11-15: ಇರಾನಿ ಟ್ರೋಫಿ

# ಫೆ.21-ಮಾ.14: ಮುಷ್ತಾಕ್ ಅಲಿ ಟಿ20

# ಅ.: 2019-20ರ ದೇಶೀಯ ಕ್ರಿಕೆಟ್ ಋತು

# ಐಪಿಎಲ್-12: ಮಾರ್ಚ್ 29-ಮೇ 19

ಫುಟ್​ಬಾಲ್

# ಜ.5-ಫೆ.1: ಎಎಫ್​ಸಿ ಏಷ್ಯನ್ ಕಪ್ =ಜೂ.1: ಚಾಂಪಿಯನ್ಸ್ ಲೀಗ್ ಫೈನಲ್ (ಸ್ಪೇನ್)

# ಜೂ.7-ಜು.7: ಫಿಫಾ ಮಹಿಳೆಯರ ವಿಶ್ವಕಪ್ (ಫ್ರಾನ್ಸ್)

ವಿವಿಧ ಲೀಗ್​ಗಳು

# ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್: 4ನೇ ಆವೃತ್ತಿ ಫೈನಲ್: ಜನವರಿ 13

# ಪ್ರೊ ವಾಲಿಬಾಲ್: ಫೆಬ್ರವರಿಯಲ್ಲಿ ಚೊಚ್ಚಲ ಆವೃತ್ತಿ

# ಪ್ರೊ ಕಬಡ್ಡಿ ಲೀಗ್: 6ನೇ ಆವೃತ್ತಿ ಫೈನಲ್: ಜ.5; ಅ.-ಡಿ.: 7ನೇ ಆವೃತ್ತಿ

# ಇಂಡಿಯನ್ ಸೂಪರ್ ಲೀಗ್: 5ನೇ ಆವೃತ್ತಿ ಫೈನಲ್ ಮಾರ್ಚ್​ನಲ್ಲಿ. ಸೆಪ್ಟೆಂಬರ್​ನಿಂದ 6ನೇ ಆವೃತ್ತಿ

ಟೆನಿಸ್ ಗ್ರಾಂಡ್ ಸ್ಲಾಂಗಳು

# ಜ.14-27: ಆಸ್ಟ್ರೇಲಿಯನ್ ಓಪನ್

# ಮೇ 26-ಜೂ.9: ಫ್ರೆಂಚ್ ಓಪನ್

# ಜು.1-14: ವಿಂಬಲ್ಡನ್

# ಆ.26-ಸೆ.9: ಯುಎಸ್ ಓಪನ್ ಬ್ಯಾಡ್ಮಿಂಟನ್

# ಮಾ.6-10: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್

# ಮಾ.26-31: ಇಂಡಿಯಾ ಓಪನ್

# ಆ.6-11: ಹೈದರಾಬಾದ್ ಓಪನ್

# ಆ.19-25: ವಿಶ್ವ ಚಾಂಪಿಯನ್​ಷಿಪ್

# ನವೆಂಬರ್: ಸಯ್ಯದ್ ಮೋದಿ ಇಂಟರ್​ನ್ಯಾಷನಲ್

ಅಥ್ಲೆಟಿಕ್ಸ್

# ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್: ಏ. 21-24

# ಸೆ.28-ಅ.6: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್

ಎಲ್ಲಿ: ಇಂಗ್ಲೆಂಡ್

ಯಾವಾಗ: ಮೇ 30-ಜುಲೈ 15

ತಂಡಗಳು: 10

ಜನವರಿ-ಡಿಸೆಂಬರ್: 2020ರ ಟೋಕಿಯೊ ಒಲಿಂಪಿಕ್ಸ್​ಗೆ ವಿವಿಧ ಕ್ರೀಡೆಗಳ ಅರ್ಹತಾ ಟೂರ್ನಿಗಳು.

ವಿಶ್ವ ಚಾಂಪಿಯನ್​ಷಿಪ್​ಗಳು

# ಏ.21-28: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್​ಷಿಪ್

# ಸೆ.16-25: ವಿಶ್ವ ವೇಟ್​ಲಿಫ್ಟಿಂಗ್ ಚಾಂಪಿಯನ್​ಷಿಪ್


ವರ್ಷ ತೆರೆಕಾಣುವ ಸಿನಿಮಾಗಳು

ಕನ್ನಡ

 • ರುಸ್ತುಂ (ಶಿವರಾಜ್​ಕುಮಾರ್)
 • ಕುರುಕ್ಷೇತ್ರ, ಯಜಮಾನ (ದರ್ಶನ್)
 • ಪೈಲ್ವಾನ್, ಕೋಟಿಗೊಬ್ಬ 3 (ಸುದೀಪ್)
 • ಶ್ರೀಮನ್ನಾರಾಯಣ (ರಕ್ಷಿತ್ ಶೆಟ್ಟಿ)
 • ಪೊಗರು (ಧ್ರುವ ಸರ್ಜಾ)
 • ನಟಸಾರ್ವಭೌಮ, ಯುವರತ್ನ (ಪುನೀತ್ ರಾಜ್​ಕುಮಾರ್)

ತೆಲುಗು

 • ಸಾಹೋ (ಪ್ರಭಾಸ್)
 • ಸೈರಾ ನರಸಿಂಹರೆಡ್ಡಿ (ಚಿರಂಜೀವಿ)
 • ಆರ್​ಆರ್​ಆರ್ (ಜೂ.ಎನ್​ಟಿಆರ್, ರಾಮ್ರಣ್)
 • ಎನ್​ಟಿಆರ್ ಕಥಾನಾಯಕುಡು (ಬಾಲಕೃಷ್ಣ)
 • ಮಹರ್ಷಿ (ಮಹೇಶ್ ಬಾಬು)

ತಮಿಳು

 • ಪೆಟ್ಟಾ (ರಜನಿಕಾಂತ್)
 • ವಿಶ್ವಾಸಂ (ಅಜಿತ್​ಕುಮಾರ್)

ಹಿಂದಿ

 • ಕೇಸರಿ (ಅಕ್ಷಯ್ಕುಮಾರ್)
 • ಮಣಿಕರ್ಣಿಕಾ (ಕಂಗನಾ ರಣಾವತ್)
 • ಭಾರತ್ (ಸಲ್ಮಾನ್ ಖಾನ್)

ಆಸ್ಕರ್ ಆವಾರ್ಡ್

# ಫೆಬ್ರವರಿ 25ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ

# ಭಾರತೀಯ ಸಿನಿಮಾಗಳ ಎಂಟ್ರಿ ಬಗ್ಗೆ ನಿರೀಕ್ಷೆ


# ಒನ್​ಪ್ಲಸ್ 7 – ಒನ್​ಪ್ಲಸ್ ಕಂಪನಿಯಿಂದ ಭಾರತಕ್ಕೆ 5ಜಿ ಅಂತರ್ಜಾಲ ವೇಗಕ್ಕೆ ಸಜ್ಜಾಗಿರುವ ಮೊದಲ ಸ್ಮಾರ್ಟ್​ಫೋನ್ ಬಿಡುಗಡೆ.

# ಶಿಯಾಮಿ ಎಂಐ ಮಿಕ್ಸ್ 3 – ಮಧ್ಯಮ ವರ್ಗದ ಜನಪ್ರಿಯ ಸ್ಮಾರ್ಟ್​ಫೋನ್ ಎಂಬ ಖ್ಯಾತಿಯ ಶಿಯಾಮಿ ರೆಡ್​ವಿು ವತಿಯಿಂದ 5ಜಿ ಸಜ್ಜಿತ 10ಜಿಬಿ ರ್ಯಾಮ್ ಸಾಮರ್ಥ್ಯದ ಫೋನ್ ಬಿಡುಗಡೆ.

# ಸ್ಯಾಮ್ಂಗ್ ಗ್ಯಾಲಕ್ಸಿ ಎಸ್10 – ಗ್ಯಾಲಕ್ಸಿ ಸರಣಿಯ ಫೋನ್​ಗಳ 10ನೇ ವರ್ಷಾಚರಣೆ ಹಿನ್ನೆಲೆ 4 ಹೊಸ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಸ್ಯಾಮ್ಂಗ್ ಪರಿಚಯಿಸಲಿದೆ. 5ಜಿ ಸಜ್ಜಿತ, ಹಿಂಬದಿಯ ಮೂರು ಕ್ಯಾಮೆರಾ (12,16,13 ಮೆಗಾ ಪಿಕ್ಸಲ್) ಹಾಗೂ ಎರಡು ಮುಂಬದಿ ಕ್ಯಾಮೆರಾ, 6.1 ಇಂಚ್ ಪರದೆ, 12 ಜಿಬಿ ರ್ಯಾಮ್

# ಜಾವಾ ಪೆರಾಕ್ – ಜನವರಿಯಲ್ಲಿ ಮಾರುಕಟ್ಟೆಗೆ ಪ್ರವೇಶ, -ಠಿ;1.80 -ಠಿ;1.90 ಲಕ್ಷವರೆಗೆ ನಿರೀಕ್ಷಿತ ಬೆಲೆ.

# ಹೀರೋ ಲೀಪ್ ಹೈಬ್ರಿಡ್ – ಏಪ್ರಿಲ್​ನಲ್ಲಿ ಮಾರುಕಟ್ಟೆಗೆ, ಪೆಟ್ರೋಲ್ ಚಾಲಿತ 124ಸಿಸಿ ಇಂಜಿನ್ ಜತೆಗೆ 10.7 ಬಿಎಚ್​ಪಿ ಸಾಮರ್ಥ್ಯದ ಲೀಥಿಯಮ್ ಐಯಾನ್ ಬ್ಯಾಟರಿ ಚಾಲಿತ ಸ್ಕೂಟರ್ – -ಠಿ;74000 -ಠಿ;1.10 ಲಕ್ಷ ನಿರೀಕ್ಷಿತ ಬೆಲೆ.

# ಟಾಟಾ 45 ಎಕ್ಸ್ – ಮಾರ್ಚ್​ಗೆ ಮಾರುಕಟ್ಟೆ ಪ್ರವೇಶ – -ಠಿ;8 ಲಕ್ಷ ಆರಂಭಿಕ ಬೆಲೆ – ಅತ್ಯಾಧುನಿಕ ಲುಕ್ ಇರುವ ಹ್ಯಾಚ್​ಬ್ಯಾಕ್​ಗಳಿಗೆ ನಾಂದಿ ಹಾಡಲಿದೆ ಈ ಕಾರು ಎಂಬ ನಿರೀಕ್ಷೆ.

# ಕಿಯಾ ಎಸ್​ಪಿ (ಎಸ್​ಯುುವಿ) – ದಕ್ಷಿಣ ಅಮೆರಿಕದ ಕಾರು ಉತ್ಪಾದನೆ ದೈತ್ಯ ಕಿಯಾ ಮೋಟಾರ್ಸ್​ನಿಂದ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಚೊಚ್ಚಲ ಕಾರು — -ಠಿ;12 -ಠಿ;16 ಲಕ್ಷ ನಿರೀಕ್ಷಿತ ಬೆಲೆ