ನವದೆಹಲಿ: ವೈರಸ್ಗಳ ತವರು ಚೀನಾದಲ್ಲಿ ಆಗಾಗ ಹೊಸ ವೈರಸ್‌ಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಲ್ಲಿ ಪತ್ತೆಯಾದ ವೈರಸ್‌ಗಳು ಇಡೀ ಜಗತ್ತನ್ನೇ ಬೆಚ್ಚಿಬೀಳಿಸುತ್ತಿವೆ. ಇದಕ್ಕೆ ಕರೊನಾಗಿಂತಲೂ ಉತ್ತಮ ಉದಾಹರಣೆ ಮತ್ತೊಂದಿಲ್ಲ. ಇದೀಗ ಡ್ರ್ಯಾಗನ್ ದೇಶದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆಯಾಗಿದೆ.
ಹೊಸದಾಗಿ ಪತ್ತೆಯಾಗಿರುವ ವೈರಸ್ಗೆ ವೆಟ್‌ಲ್ಯಾಂಡ್ ವೈರಸ್ (WELV) ಎಂದು ಹೆಸರಿಡಲಾಗಿದೆ. ಈ ವೈರಸ್ ಉಣ್ಣೆ ಹುಳು ಕಡಿತದಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ಸೋಂಕಿಗೆ ಒಳಗಾದವರು ಗಂಭೀರ ಅನಾರೋಗ್ಯವನ್ನು ಎದುರಿಸುವ ಸಾಧ್ಯತೆ ಇದೆ. ವಿಶೇಷವಾಗಿ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಉಂಟಾಗುತ್ತವೆ. ಈ ವೈರಸ್ ಮನುಷ್ಯನ ಮೆದುಳನ್ನೇ ಗುರಿಯಾಗಿಸುತ್ತದೆ.
2019ರ ಜೂನ್ ತಿಂಗಳಲ್ಲಿ ಜಿನ್‌ಝೌ ನಗರದ 61 ವರ್ಷದ ವ್ಯಕ್ತಿಯೊಬ್ಬರು ಒಳ ಮಂಗೋಲಿಯಾದ ಜೌಗು ಪ್ರದೇಶದಲ್ಲಿ ಉಣ್ಣೆ ಹುಳದ ಕಡಿತಕ್ಕೆ ಒಳಗಾದ ಬಳಿಕ ಜ್ವರ, ತಲೆನೋವು ಮತ್ತು ವಾಂತಿಯನ್ನು ಅನುಭವಿಸಿದರು. ಬಳಿಕ ಅವರನ್ನು ಪರೀಕ್ಷೆ ಮಾಡಿದಾಗ ವೈರಸ್ ಇರುವುದು ಪತ್ತೆಯಾಯಿತು. ಈ ರೋಗಿಗೆ ಮೊದಲು ಆ್ಯಂಟಿಬಯಾಟಿಕ್‌ಗಳನ್ನು ನೀಡಿದರೂ ಯಾವುದೇ ಫಲಿತಾಂಶ ಸಿಗಲಿಲ್ಲ. ಏಕೆಂದರೆ ಇದು ಬ್ಯಾಕ್ಟೀರಿಯಾದಿಂದ ಬರುವ ರೋಗವಲ್ಲ, ವೈರಸ್‌ನಿಂದ ಬರುವ ಕಾಯಿಲೆ ಎಂಬುದು ಗೊತ್ತಾಯಿತು.
ರಕ್ತ ಪರೀಕ್ಷೆಯಲ್ಲಿ ಇದು ಹೊಸ ರೀತಿಯ ವೈರಸ್ ಎಂದು ಕಂಡುಬಂದಿದೆ. ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರದಂತಹ ರೋಗಗಳನ್ನು ಉಂಟುಮಾಡುವ ವೈರಸ್‌ಗಳು ಸಹ ಈ ಕುಟುಂಬಕ್ಕೆ ಸೇರಿವೆ. ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚೀನಾದಲ್ಲಿ ಈಗಾಗಲೇ 17 ಜನರು ಈ ವೆಟ್‌ಲ್ಯಾಂಡ್ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ. ಜ್ವರ, ತಲೆಸುತ್ತು, ತಲೆನೋವು, ಕೀಲು ನೋವು ಹಾಗೂ ಸುಸ್ತು ಮುಂತಾದ ಲಕ್ಷಣಗಳು ಸಾಮಾನ್ಯವಾಗಿವೆ. ಕೋಮಾದಂತಹ ನರಮಂಡಲದ ಲಕ್ಷಣಗಳು ಸಹ ಕಂಡುಬರುತ್ತವೆ.
ಖುಷಿಯ ಸಂಗತಿ ಏನೆಂದರೆ, ಚಿಕಿತ್ಸೆ ಪಡೆದ ನಂತರ ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ವೈರಸ್ ತುಂಬಾ ಅಪಾಯಕಾರಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಉತ್ತರ ಚೀನಾದಲ್ಲಿ ಪ್ರಾಣಿಗಳು ಮತ್ತು ಮನುಷ್ಯರಲ್ಲಿಯೂ WELV ವೈರಸ್ ಕಂಡುಬಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವೈರಸ್ ಕುರುಹುಗಳು ಕುದುರೆಗಳು, ಹಂದಿಗಳು ಮತ್ತು ಇಲಿಗಳಂತಹ ಪ್ರಾಣಿಗಳಲ್ಲಿಯೂ ಕಂಡುಬಂದಿವೆ.
WELV ಹೊಸದಾಗಿ ಕಂಡುಹಿಡಿದ ವೈರಸ್ ಆಗಿದ್ದರೂ, ಮಾನವರು ಮತ್ತು ಪ್ರಾಣಿಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯದಿಂದಾಗಿ ಇದು ಆರೋಗ್ಯಕ್ಕೆ ಅಪಾಯವಾಗಿದೆ. ವೈರಸ್ ಹೇಗೆ ಹರಡುತ್ತದೆ ಮತ್ತು ಅದರ ಪರಿಣಾಮಗಳು ಏನು ಎಂಬುದರ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. (ಏಜೆನ್ಸೀಸ್)
ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆರಂಭಿಸಿದ ವೈದ್ಯರು! ವೈರಲ್ ಆಗ್ತಿದೆ ಡಾಕ್ಟರ್ ಬರೆದ ಈ ಪ್ರಿಸ್ಕ್ರಿಪ್ಷನ್
ದೈತ್ಯ ದೇಹದ WWE ಸೂಪರ್ ಸ್ಟಾರ್ಗೆ ಏನಾಯ್ತು? ಗುರುತೇ ಸಿಗದಷ್ಟು ಬದಲಾದ ಬಟಿಸ್ಟಾ!