21.5 C
Bengaluru
Friday, January 24, 2020

ಪಂಚುಗಳ ಮಿಂಚು ಸಿಲ್ಲಿ ಲಲ್ಲಿ

Latest News

ಏರಿಕೆಯಾಗದ ಫಾಸ್ಟ್​ಟ್ಯಾಗ್​ ಪಾವತಿ ಕಡ್ಡಾಯಗೊಳಿಸಿದರೂ ಪ್ರಯೋಜನವಿಲ್ಲ; ನಗದು ಪಾವತಿಯೇ ಹೆಚ್ಚು! 

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್​ಟ್ಯಾಗ್​ ಮೂಲಕ ಟೋಲ್ ಪಾವತಿ ಕಡ್ಡಾಯಗೊಳಿಸಿದರೂ ಶುಲ್ಕ ಸಂಗ್ರಹ ಪ್ರಮಾಣ ಏರಿಕೆಯಾಗಿಲ್ಲ. ಫಾಸ್ಟ್​ಟ್ಯಾಗ್​ಗಿಂಥ ಮೊದಲು ಸಂಗ್ರಹವಾಗುತ್ತಿದ್ದಷ್ಟೇ ನಗದು ರೂಪದಲ್ಲಿ ಶುಲ್ಕ...

ಗಣರಾಜ್ಯೋತ್ಸವ| ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಇಲ್ಲ!

ಬೀಜಿಂಗ್: ಚೀನಾದಲ್ಲಿರುವ ಇಂಡಿಯನ್ ಎಂಬೆಸ್ಸಿಯಲ್ಲಿ ಈ ವರ್ಷ ಗಣರಾಜ್ಯೋತ್ಸವ ಆಚರಣೆ ಇಲ್ಲ. ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಈ ಕುರಿತು ಪ್ರಕಟಣೆಯನ್ನೂ ಹೊರಡಿಸಿದೆ. ಚೀನಾದಾದ್ಯಂತ...

ಅರಿವಿನ ಕೊರತೆಯೇ ದೌರ್ಜನ್ಯಕ್ಕೆ ಕಾರಣ!

* ಸಿವಿಲ್ ಹಿರಿಯ ನ್ಯಾಯಾಧೀಶ ಅರ್ಜುನ ಮಲ್ಲೂರ್ ಬೇಸರ ವಿಜಯವಾಣಿ ಸುದ್ದಿಜಾಲ ಬಳ್ಳಾರಿ ವ್ಯವಸ್ಥೆ...

ಹನ್ನೊಂದು ಎಐಎಡಿಎಂಕೆ ಶಾಸಕರ ಅನರ್ಹತೆ ಕುರಿತ ಅರ್ಜಿ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ನವದೆಹಲಿ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ವಿರುದ್ಧವಾಗಿ ಮತ ಚಲಾಯಿಸಿದ 11 ಎಐಎಡಿಎಂಕೆ ಶಾಕಸರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ...

ಕುವೆಂಪು ಆಶಯಗಳನ್ನು ಅಳವಡಿಸಿಕೊಂಡು ವಿಶ್ವಮಾನವರಾಗಿ; ಪಿಇಎಸ್ ವಿವಿ ಕುಲಾಧಿಪತಿ ದೊರೆಸ್ವಾಮಿ 

ಬೆಂಗಳೂರು:  ಜಗತ್ತಿನ ಪ್ರತಿಯೊಬ್ಬರೂ ವಿಶ್ವಮಾನವರಾಗ ಬೇಕು ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಆಶಯವಾಗಿತ್ತು ಎಂದು ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ತಿಳಿಸಿದ್ದಾರೆ. ಕರ್ನಾಟಕ ವಿಶ್ವ ಮಾನವ...

ಹತ್ತು ವರ್ಷಗಳ ಹಿಂದೆ ಹಾಸ್ಯಪ್ರಿಯರನ್ನು ನಗಿಸಿ ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ ‘ಸಿಲ್ಲಿ ಲಲ್ಲಿ’ ಮತ್ತೆ ಕಿರುತೆರೆಯ ಮೇಲೆ ಮೇ 20 ರಂದು ರಾತ್ರಿ 9.00 ಗಂಟೆಗೆ ಕಲರ್ ಸೂಪರ್ ಚಾನಲ್​ನಲ್ಲಿ ಪ್ರಸಾರವಾಗಲಿದೆ.

ದಿನಕ್ಕೆ ಒಂದು ಕತೆಯಂತೆ ವಿವಿಧ ಘಟನೆಗಳ ಮೂಲಕ ರಂಜಿಸುವ ‘ಸಿಲ್ಲಿ ಲಲ್ಲಿ’ ಈ ಮೊದಲು ಪ್ರಸಾರವಾದಾಗ ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಇಲ್ಲಿ ಇರುವ ಪಾತ್ರಗಳು ಒಟ್ಟು ಒಂಬತ್ತು. ಇವರನ್ನು ನವರತ್ನಗಳು ಎನ್ನಿ, ನವಗ್ರಹಗಳು ಎನ್ನಿ ಅಥವಾ ನವರಸಗಳನ್ನು ನೀಡುವ ಕಲಾವಿದರು ಎನ್ನಿ. ಇಲ್ಲಿ ಮುಖ್ಯ ಪಾತ್ರ ಡಾ. ವಿಠಲ್​ರಾವ್ ಎಂ.ಬಿ.ಬಿ.ಎಸ್. ಇವರ ಕ್ಲಿನಿಕ್​ಗೆ ಯಾರೇ ಬಂದರೂ ಡಾಕ್ಟರ್ ಕೇಳುವುದು ‘ಐ ಆಮ್ ವಿಠಲ್ ರಾವ್, ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ, ವಾಟ್ಸ್ ಯುವರ್ ಪ್ರಾಬ್ಲಂ? ಓಪನ್ ಯುವರ್ ಮೌತ್ ಅಂಡ್ ಷೋ ಮಿ ಯುವರ್ ಲಾಂಗ್ ಟಂಗ್’! ಇದು ಮ್ಯಾನರಿಸಂ ಡೈಲಾಗ್. ಕಂತೆಗೆ ತಕ್ಕ ಬೊಂತೆ ಎಂಬಂತೆ ಕಾಂಪೌಂಡರ್ ಗೋವಿಂದ ‘ಅರ್ಥವಾಯ್ತು’ ಎನ್ನುತ್ತಾ ಡಾಕ್ಟರ್ ಪರಿಸ್ಥಿತಿಯನ್ನು, ರೋಗಿಗಳ ಗ್ರಹಚಾರವನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿರುತ್ತಾನೆ.

ಇನ್ನು ನರ್ಸ್ ಮೇಡ್ ಲಲ್ತಾಗೆ ಮನೆಯಲ್ಲೂ ಕೆಲಸ, ಕ್ಲಿನಿಕ್​ನಲ್ಲೂ ಕೆಲಸ. ಈಕೆ ಸಹಾಯಕಿ. ಡಾಕ್ಟರ್ ಸ್ಟೆಥಸ್ಕೋಪ್ ಮೇಲಿರುವ ಧೂಳನ್ನು ಒರೆಸಿ ಕೊಡುವವಳು ಇವಳೇ. ಮನೆಯಲ್ಲಿ ಯಜಮಾನಮ್ಮ ಇದ್ದಾಳೆ. ಹೆಸರು ಲಲಿತಾಂಬ. ‘ಲಲ್ತಾ ಅಂತ ಡಾಕ್ಟರ್ ಕರೆದಾಗ ಮನೆ ಯಜಮಾನಿ ಲಲ್ತಾ ಜತೆಗೆ ‘ಎನ್ನೆಮ್ಮೆಲ್ ಸಹ ಓಗೊಡುತ್ತಾಳೆ. ಇಬ್ಬರದ್ದೂ ಒಂದೇ ಹೆಸರು. ಹೆಸರಿನ ಕನ್​ಫ್ಯೂಷನ್​ನಲ್ಲಿ ಡಾಕ್ಟರ್​ಗೆ ಸಿಟ್ಟು ಬಂದು ಇದರಿಂದ ಇತರರಿಗೆ ತೊಂದರೆಯಾಗುತ್ತದೆ.

ಇನ್ನು ಕೆಲಸಕ್ಕೋಸ್ಕರ ಪರದಾಡುತ್ತಿರುವ ಸೋದರ ಪಲ್ಲಿ ಕಾದಂಬರಿಯನ್ನು ಬರೆಯುವ ಹುಚ್ಚಿರುವ ಸೋದರಿ ಸಿಲ್ಲಿ, ವಿಶಿಷ್ಟ ರೀತಿಯಲ್ಲಿ ಹಾಸ್ಯವನ್ನು ಉಣಬಡಿಸುತ್ತಾರೆ. ನೆರೆಮನೆಯ ದಂಪತಿಯಾದ ರಂಗನಾಥ್ ಮತ್ತು ವಿಶಾಲು ಡಾಕ್ಟರ್ ಮೇಲೆ ಪ್ಯಾರಾಸೈಟುಗಳಾಗಿ ಬದುಕುತ್ತಿದ್ದಾರೆ. ಯಾವುದೇ ಕೆಲಸವನ್ನು ವಹಿಸಿದರೂ ‘ಒಂದಿಷ್ಟು ಹಣ ಕೊಡಿ, ಎಲ್ಲಾ ನಾನು ಮಾಡ್ತೀನಿ’ ಎನ್ನುತ್ತಾನೆ ರಂಗನಾಥ. ಲಲ್ತಾ ಮೇಡಂ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡಿದರೂ ‘ಚಪ್ಪಾಳೆ’ ಎಂದು ಸಭಿಕರನ್ನು ವಿಶಾಲು ಹುರಿದುಂಬಿಸುತ್ತಾಳೆ. ಇವರಿಗೆ ಇರುವ ಬೆಪ್ಪು ಮಗಳಾದ ಗುಡ್ ಫಾರ್ ನಥಿಂಗ್ ‘ಸೂಜಿ’ ಇವಿಷ್ಟು ಪಾತ್ರಗಳು ಪ್ರಮುಖವಾಗಿವೆ.

ಡಾಕ್ಟರ್ ವಿಠಲ್​ರಾವ್ ತನ್ನ ಗುರುವಾಗಿದ್ದ

ಡಾ. ಬೇವಿನಳ್ಳಿ ಚಂದ್ರಶೇಖರ್​ಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ನಿಮ್ಮನ್ನು ನೆಟ್ಟಗೆ ನಿಲ್ಲಿಸುತ್ತೇನೆ ಎಂದು ಹೇಳಿದ್ದ. ಅದರಂತೆಯೇ ನೆಟ್ಟಗೆ ನಿಲ್ಲಿಸಿದ್ದಾನೆ. ಸ್ಕೆಲಿಟನ್ ರೂಪದಲ್ಲಿ! ಆದರೂ ಬಿಎಚ್​ಸಿಗೆ ತನ್ನ ಶಿಷ್ಯನ ಮೇಲೆ ಸಿಟ್ಟಿಲ್ಲ. ಸ್ಕೆಲಿಟನ್ ಆಗಿ ತೂಗಾಡುತ್ತ ಡಾಕ್ಟರ್​ಗೆ ವಿವಿಧ ಸಲಹೆಗಳನ್ನು ಗುರು ಕೊಡುತ್ತಾನೆ. ಈತನ ಮಾತು ಡಾಕ್ಟರ್ ಮಾತ್ರ ಕೇಳಿಸುತ್ತದೆ. ಸಮಾಜ ಸೇವಕಿ ಲಲಿತಾಂಬ ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಆಗಬೇಕೆಂಬ ಕನಸನ್ನು ಹೊತ್ತಿದ್ದಾಳೆ. ಯಾರೇ ಸಿಕ್ಕರೂ ‘ನನ್ನ ನಂಬಿ, ನನ್ನ ನಂಬಿ ಎಂದು ನಮಸ್ಕಾರ ಮಾಡುವ ಈಕೆಯನ್ನು ಡಾಕ್ಟರ್ ಮುದ್ದು ಮಾತಲ್ಲಿ ‘ನಂಬಿ ಡಾರ್ಲಿಂಗ್’ ಎಂದೇ ಕರೆಯುತ್ತಾನೆ. ಸಿಹಿಕಹಿ ಚಂದ್ರು ಅವರು ನಿರ್ದೇಶಿಸುತ್ತಿರುವ ಈ ಸುಂದರ ಹಾಸ್ಯ ಧಾರಾವಾಹಿಗೆ ಎಂ.ಎಸ್. ನರಸಿಂಹಮೂರ್ತಿ ಕಚಗುಳಿ ಇಡುವ ಸಂಭಾಷಣೆಯನ್ನು ಬರೆದಿದ್ದಾರೆ. ಮನಸ್ಸಿಗೆ ಮುದ ನೀಡುವ ಎಲ್ಲಾ ವರ್ಗದ ಜನ, ಎಲ್ಲಾ ವರ್ಗದ ಪ್ರೇಕ್ಷಕರೂ ಆನಂದಿಸಬಹುದಾದ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಹತ್ತು ವರ್ಷಗಳ ನಂತರ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದೆ. ನುರಿತ ಹೊಸ ಕಲಾವಿದರನ್ನು ಹೊಂದಿರುವ ಈ ತಂಡ ವೀಕ್ಷಕರಿಗೆ ನಗೆಯ ರಸದೌತಣ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...