ಮಹಿಳಾ ಸುರಕ್ಷೆತೆಗೆ ಬಂತು ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ

ಉಡುಪಿ: ಉಡುಪಿ ಹಾಗೂ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳಾ ಸುರಕ್ಷತೆಗಾಗಿ ನಗರ ಮಹಿಳಾ ಠಾಣೆಗೆ ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ ಸೇರ್ಪಡೆಗೊಳಿಸಲಾಗಿದ್ದು, ಎಸ್‌ಪಿ ನಿಶಾ ಜೇಮ್ಸ್ ನೂತನ ವಾಹನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಓಬವ್ವ ಪಡೆ, ಸಾಗರದಲ್ಲಿ ಕೆಳದಿ ಚೆನ್ನಮ್ಮ ಪಡೆ ಸ್ಥಾಪಿಸಲಾಗಿದ್ದು, ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸಕ್ತ ಜಿಲ್ಲೆಯಲ್ಲಿ ನಗರ ಮಹಿಳಾ ಠಾಣೆಯಲ್ಲಿ ರಾಣಿ ಅಬ್ಬಕ್ಕ ಪಡೆ ಕಾರ್ಯ ನಿರ್ವಹಿಸಲಿದ್ದು, ಬೆಳಗ್ಗೆ ಮತ್ತು ಸಂಜೆ ಶಾಲಾ, ಕಾಲೇಜು ಆವರಣ, ಉದ್ಯಾನವನ, ಸಿಟಿ ಬಸ್‌ಸ್ಟಾೃಂಡ್, ಸರ್ವೀಸ್ ಬಸ್‌ಸ್ಟಾೃಂಡ್, ಮಣಿಪಾಲ ಬಸ್‌ಸ್ಟಾೃಂಡ್ ಮೊದಲಾದೆಡೆ ಗಸ್ತು ತಿರುಗಲಿದೆ.
ಎಸ್‌ಐ ರೇಖಾ ನಾಯಕ್, ಟ್ರಾಫಿಕ್ ಎಸ್‌ಐ ಸಮೀನಾ, ಎಎಸ್‌ಐ ಮುಕ್ತಾಬಾಯಿ, ಅಧಿಕಾರಿ ಕಲ್ಪನಾ ಬಾಂಗ್ಲೆ, ಕಾನೂನು ಸಲಹಾ ಅಧಿಕಾರಿ ಮುಮ್ತಾಜ್ ಮೊದಲಾದವರು ಉಪಸ್ಥಿತರಿದ್ದರು.

ಚುಡಾಯಿಸಿದರೆ ಹುಷಾರ್!: ಮಹಿಳೆಯರಿಗೆ ಹಾಗೂ ಯುವತಿಯರಿಗೆ ಕಿರುಕುಳ, ಮಹಿಳೆಯರನ್ನು ಚುಡಾಯಿಸುವ ಪ್ರಕರಣಗಳು ಕಂಡುಬಂದರೆ ಗಸ್ತು ನಿರತ ಪೊಲೀಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ವಾಹನದಲ್ಲಿ ಪಿಎಸ್‌ಐ ಸಹಿತ ಮೂರು ಮಂದಿ ಸಿಬ್ಬಂದಿ ಇರಲಿದ್ದಾರೆ. ಜಿಲ್ಲೆಯ ಬೇರೆ ಠಾಣೆಗಳಿಂದಲೂ ಬೇಡಿಕೆ ಬಂದರೆ ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು.

Leave a Reply

Your email address will not be published. Required fields are marked *