25.1 C
Bangalore
Friday, December 6, 2019

ಮಂಗಳೂರಿನಿಂದ ಬೆಂಗಳೂರಿಗೆ ಶೀಘ್ರದಲ್ಲೇ ಹೊಸ ರಾತ್ರಿ ರೈಲು

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಮಂಗಳೂರು: ಮಂಗಳೂರು ಸೆಂಟ್ರಲ್- ಯಶವಂತಪುರ (ಬೆಂಗಳೂರು) ನಡುವೆ ವಾರದಲ್ಲಿ ಮೂರು ದಿನ ರಾತ್ರಿ ಹೊಸ ರೈಲು ಆರಂಭಿಸಲು ನೈಋತ್ಯ ರೈಲ್ವೆಯು ರೈಲ್ವೆ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ಸೂಚನೆ ಲಭ್ಯವಾಗಿದೆ.

ಇಲಾಖೆ ಮೂಲ ಪ್ರಕಾರ ಫೆ.20ರ ಒಳಗೆ ಹೊಸ ರೈಲು ಆರಂಭಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳುವಂತೆ ರೈಲ್ವೆ ಸಚಿವಾಲಯಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಪ್ರಸ್ತಾವಿತ ವೇಳಾಪಟ್ಟಿಯಂತೆ ಯಶವಂತಪುರದಿಂದ ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ಸಾಯಂಕಾಲ 4.30ಕ್ಕೆ ಪ್ರಯಾಣ ಆರಂಭಿಸಲಿರುವ ರೈಲು ಮರುದಿನ ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಮಂಗಳೂರಿನಿಂದ ಹೊರಡುವ ರೈಲು ಶನಿವಾರ, ಸೋಮವಾರ, ಬುಧವಾರಗಳಂದು ರಾತ್ರಿ 7 ಗಂಟೆಗೆ ಹೊರಟು ಮುಂಜಾನೆ 4.30ಕ್ಕೆ ಯಶವಂತಪುರ ತಲುಪುತ್ತದೆ.

ಸಮಯ ಬದಲಾವಣೆ: ಹೊಸ ರೈಲು ಸಂಚಾರ ಆರಂಭವಾಗುತ್ತಿರುವುದು ರೈಲ್ವೆ ಯಾತ್ರಿ ಸಂಘಗಳಿಗೆ ಹರ್ಷ ತಂದರೂ ವೇಳಾಪಟ್ಟಿ ಸಮಾಧಾನ ತಂದಿಲ್ಲ. ಅದನ್ನು ಜನಸ್ನೇಹಿಯಾಗಿ ಬದಲಾಯಿಸುವಂತೆ ಕೋರಿಕೆ ಕೇಳಿಬಂದಿದೆ.

ಈಗಿನ ವೇಳಾಪಟ್ಟಿ ಪ್ರಕಾರ ಬೆಂಗಳೂರಿನಿಂದ ಹೊರಟು ಮಂಗಳೂರು ತಲುಪುವ ರೈಲು ಸಂಚಾರಕ್ಕೆ ಸುಮಾರು 12 ಗಂಟೆ ಅವಧಿ ಬೇಕು. ಅಲ್ಲದೆ, ರೈಲು ಹೊರಡುವ ಮತ್ತು ತಲುಪುವ ಸಮಯ ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಇದರ ಬದಲು ರಾತ್ರಿ 10.30ಗೆ ಯಶವಂತಪುರದಿಂದ ಹೊರಟು ಬೆಳಗ್ಗೆ 8 ಗಂಟೆಗೆ ಮಂಗಳೂರು ತಲುಪಲು ಸಾಧ್ಯವಾದರೆ ಸುಬ್ರಹ್ಮಣ್ಯ, ಬಂಟ್ವಾಳ, ಮಂಗಳೂರು ಸಹಿತ ಕರಾವಳಿಯ ಇತರ ನಿಲ್ದಾಣಗಳಲ್ಲಿ ಇಳಿಯುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ರೈಲ್ವೆ ಯಾತ್ರಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ಅಭಿಪ್ರಾಯ. ಆದರೆ ಈ ವೇಳೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್ ಲಭ್ಯ ಇರುವುದಿಲ್ಲ ಎನ್ನುವುದು ಇಲಾಖೆ ನೀಡುವ ಕಾರಣ. ಪ್ರಸ್ತುತ ಮಂಗಳೂರು- ಬೆಂಗಳೂರು ನಡುವೆ ಒಂದು ಮಾತ್ರ ರಾತ್ರಿ ರೈಲು ಸಂಚರಿಸುತ್ತಿದೆ.

ಹೊಸ ರೈಲು ಪ್ರಥಮ ಹಂತದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸಲಿದ್ದು, ಕೆಲ ತಿಂಗಳಿನಲ್ಲೇ ಇದನ್ನು ದಿನಂಪ್ರತಿ ಓಡಿಸುವ ಕುರಿತು ಚಿಂತನೆ ಇದೆ. ಸಾರ್ವಜನಿಕರ ಆವಶ್ಯಕತೆ ಹಾಗೂ ಫ್ಲಾಟ್‌ಫಾರ್ಮ್ ಲಭ್ಯತೆ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ದೃಷ್ಟಿಯಿಂದ ವೇಳಾಪಟ್ಟಿ ಪರಿಷ್ಕರಣೆ ಬೇಡಿಕೆ ಪರಿಗಣಿಸಲಾಗುವುದು.
|ನಳಿನ್ ಕುಮಾರ್ ಕಟೀಲ್, ಸಂಸದ

ಹಗಲು ರೈಲು ಒಂಬತ್ತು ಗಂಟೆ ಅವಧಿಯಲ್ಲಿ ಸಂಚರಿಸುವ ಮಾರ್ಗದಲ್ಲಿ ವೇಳಾಪಟ್ಟಿಯಂತೆ ಹೊಸ ರೈಲು 12 ಗಂಟೆ ತೆಗೆದುಕೊಳ್ಳಲಿದೆ. ರೈಲ್ವೆ ಜನಸ್ನೇಹಿಯಾಗುವ ದೃಷ್ಟಿಯಿಂದ ವೇಳಾಪಟ್ಟಿ ಪರಿಷ್ಕರಣೆಯಾಗಬೇಕು. ಡಿಆರ್‌ಎಂ ಅವರಿಗೆ ಕೂಡ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.
|ಜಿ.ಕೆ. ಭಟ್, ರೈಲ್ವೆ ಹೋರಾಟಗಾರ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...