ಕೋವಿಡ್ ಹೊಸ ತಳಿ ಹಾವಳಿ; ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಪತ್ತೆ

ನವದೆಹಲಿ: ಗುರುವಾರ ಒಂದು ದಿನದ ಅವಧಿಯಲ್ಲಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕತೆಯ 1,300 ಪ್ರಕರಣಗಳು ದೃಢಪಟ್ಟಿದೆ. ಇದು ಕಳೆದ 140 ದಿನಗಳಲ್ಲೇ ಅತಿ ಹೆಚ್ಚಿನ ದೈನಿಕ ಪಾಸಿಟಿವ್ ಪ್ರಕರಣ ಆಗಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಅವಧಿಯಲ್ಲಿ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್-19ರ ಎಕ್ಸ್​ಬಿಬಿ1.16 ತಳಿಯ 349 ಸ್ಯಾಂಪಲ್​ಗಳು ಕರ್ನಾಟಕ ಸಹಿತ ದೇಶದ ನಾನಾ ಭಾಗಗಳಲ್ಲಿ ಪತ್ತೆಯಾಗಿವೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು … Continue reading ಕೋವಿಡ್ ಹೊಸ ತಳಿ ಹಾವಳಿ; ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಪತ್ತೆ