More

    ಕಲರ್ಸ್ ಕನ್ನಡದಲ್ಲಿ ಗೀತಾ ಧಾರಾವಾಹಿ

    ಬೆಂಗಳೂರು: ಹೊಸ ವರ್ಷಕ್ಕೆ ಪ್ರೇಕ್ಷಕರಿಗೆ ಹೊಸತನ್ನು ನೀಡಲು ಮುಂದಾಗಿರುವ ‘ಕಲರ್ಸ್ ಕನ್ನಡ’ ಮನರಂಜನಾ ವಾಹಿನಿ, ಅದರ ಮೊದಲ ಕಂತಾಗಿ ಹೊಸ ಧಾರಾವಾಹಿಯೊಂದರ ಪ್ರಸಾರಕ್ಕೆ ಸಜ್ಜಾಗಿದೆ. ‘ಗೀತಾ’ ಶೀರ್ಷಿಕೆಯ ಈ ಧಾರಾವಾಹಿ ಜನವರಿ 6ರಿಂದ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

    ಛಲಗಾತಿ ಹುಡುಗಿ, ದುರಂಹಕಾರಿ ಹುಡುಗನ ಕಥಾಹಂದರದ ಈ ಧಾರಾವಾಹಿಯಲ್ಲಿ ಕಥಾನಾಯಕಿ ಗೀತಾ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿರುತ್ತಾಳೆ. ಇಲ್ಲಿ ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್ ಪಾತ್ರ ಕೂಡ ಪ್ರಮುಖವಾದದ್ದಾಗಿರುತ್ತದೆ. ಕಾಲೇಜಿನಲ್ಲಿ ಗೀತಾ-ವಿಜಯ್ ಮುಖಾಮುಖಿ ಆಗಿ ಆಮೇಲೆ ಅವರಿಬ್ಬರ ಜೀವನ ಹೇಗೆ ಪರಸ್ಪರ ಸಂಧಿಸುತ್ತದೆ ಎಂಬುದೇ ಕಥಾನಕ. ಹೂ ಮಾರುವ ಹುಡುಗಿ ಗೀತಾ ಓದಿನಲ್ಲಿ ತುಂಬ ಚುರುಕು.

    ಆದರೆ ಕಾಪಿ ಹೊಡೆದು ಬರೆಯುವ ವಿಜಯ್ಗೆ ಪ್ರಥಮ ಸ್ಥಾನ, ಗೀತಾಗೆ ಎರಡನೇ ಸ್ಥಾನ. ಹೀಗಾಗಿ ವಿಜಯ್ ಉತ್ತರಪ್ರತಿಕೆ ಸುಟ್ಟು ಗೀತಾ ಆತನ ಕೆಂಗಣ್ಣಿಗೆ ತುತ್ತಾಗಿ ಅಪವಾದಕ್ಕೂ ಗುರಿಯಾಗುತ್ತಾಳೆ. ಕೊನೆಯಲ್ಲಿ ಅವನ ತಂತ್ರವನ್ನೇ ಪ್ರತಿತಂತ್ರವಾಗಿಸಿ ಹೇಗೆ ಪಾಠ ಕಲಿಸುತ್ತಾಳೆ ಎಂಬುದು ಧಾರಾವಾಹಿಯ ಗಮನಾರ್ಹ ಅಂಶ. ‘ಪುಟ್ಟಗೌರಿ ಮದುವೆ’ ಸೇರಿ ಹಲವಾರು ಬ್ಲಾಕ್ ಬಸ್ಟರ್ ಧಾರಾವಾಹಿಗಳನ್ನು ನೀಡಿರುವ ಕೆ.ಎಸ್.ರಾಮ್ ಈ ಧಾರಾವಾಹಿಯ ನಿರ್ವಣ-ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನೀನಾಸಂ

    ಅಶ್ವತ್ಥ್, ಹರೀಶ್, ಶರ್ವಿುತಾ ಗೌಡ, ಮನದೀಪ್ ರಾಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಗೀತಾ’ ಜನವರಿ 6ರಿಂದ ಸೋಮ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

    ಕಥೆ ಬಹುತೇಕ ಕಾಲೇಜಿನಲ್ಲಿಯೇ ನಡೆಯುವುದು ಈ ಧಾರಾವಾಹಿಯ ವಿಶೇಷ. ಜತೆಗೆ ಹೊಸ ರೀತಿಯ ನಿರೂಪಣೆ ಇರುವುದರಿಂದ ಇದು ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಕಲರ್ಸ್ ಕನ್ನಡದ ವೀಕ್ಷಕರ ನಿರೀಕ್ಷೆಗೆ ತಕ್ಕಂತೆ ‘ಗೀತಾ’ ಇರಲಿದೆ. ಇದು ಛಲಗಾತಿಯೊಬ್ಬಳ ಹೋರಾಟದ ಕಥೆ. 

    | ಪರಮೇಶ್ವರ್ ಗುಂಡ್ಕಲ್ ಬಿಜಿನೆಸ್ ಹೆಡ್, ಕನ್ನಡ ಕ್ಲಸ್ಟರ್, ವಯಾಕಾಂ18 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts