More

    ಡೀಪ್​ಫೇಕ್ ಕಡಿವಾಣಕ್ಕೆ ಹೊಸ ರೂಲ್ಸ್: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

    ನವದೆಹಲಿ: ಕಳೆದ ಕೆಲವು ದಿನಗಳಿಂದ ಎದುರಿಸುತ್ತಿರುವ ಡೀಪ್​ಫೇಕ್ ಫೋಟೋ, ವಿಡಿಯೋ ಮತ್ತು ಆಡಿಯೋ ಸಮಸ್ಯೆ ನಿವಾರಿಸಲು ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ತರಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್​ಫಾಮರ್್​ಗಳು, ನಾಸ್ಕಾಮ್ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಾಧ್ಯಾಪಕರು ಮುಂತಾದವರ ಜತೆ ಸಭೆ ನಡೆಸಿದ ಸಚಿವರು, ‘ಡೀಪ್​ಫೇಕ್​ಗಳಿಗೆ ಕಟ್ಟುನಿಟ್ಟಿನ ನಿಯಂತ್ರಣದ ಅಗತ್ಯವಿದೆ. ಅದಕ್ಕಾಗಿ ಶೀಘ್ರದಲ್ಲೇ ಕರಡು ನಿಯಮಗಳನ್ನು ತರಲಿದ್ದೇವೆ. ಅವುಗಳನ್ನು ರಚಿಸುವ ಹಾಗೂ ಅಪ್​ಲೋಡ್ ಮಾಡುವ ವ್ಯಕ್ತಿಗಳಿಗೆ ದಂಡ ವಿಧಿಸುತ್ತೇವೆ. ಡೀಪ್​ಫೇಕ್ ಯಾವುದು, ಒರಿಜಿನಲ್ ಯಾವುದೆಂಬುದನ್ನು ಜನರು ಗುರುತಿಸಬಹುದಾದ ಮಾರ್ಗಗಳು ಕೂಡ ನಿಯಮಾವಳಿಗಳಲ್ಲಿ ಇರಲಿವೆ’ ಎಂದು ತಿಳಿಸಿದ್ದಾರೆ.

    ಈ ನಿಯಂತ್ರಣವನ್ನು ಹೊಸ ನಿಯಮಗಳ ರೂಪದಲ್ಲಿ, ಹೊಸ ಕಾನೂನು ಅಥವಾ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿ ರೂಪದಲ್ಲಿ ತರಬಹುದು. ಇಂದಿನ ಸಭೆಯ ನಿರ್ಧಾರಗಳ ಕುರಿತ ಮುಂದಿನ ಕ್ರಮಗಳ ಬಗ್ಗೆ ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಸಭೆ ನಡೆಸಿ ರ್ಚಚಿಸಲಾಗುವುದು ಎಂದು ತಿಳಿಸಿದರು.

    ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ರಚಿಸಲಾದ ನಕಲಿ ಚಿತ್ರಗಳು ಮತ್ತು ವಿಡಿಯೊಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಪ್ರಧಾನಿ ಮೋದಿ ಕಳೆದ ವಾರ ದೇಶಕ್ಕೆ ಎಚ್ಚರಿಸಿದ್ದರು. ಗರ್ಬಾ ನೃತ್ಯದ ವೈರಲ್ ವಿಡಿಯೋವನ್ನು ಉಲ್ಲೇಖಿಸಿ, ‘ಶಾಲೆ ಬಿಟ್ಟಾಗಿನಿಂದ ನಾನು ಗರ್ಬಾ ನೃತ್ಯ ಆಡಿಲ್ಲ. ನಾನು ಕೂಡ ಡೀಪ್​ಫೇಕ್ ವಿಡಿಯೊಗೆ ಬಲಿಯಾಗಿದ್ದೇನೆ’ ಎಂದು ಹೇಳಿದ್ದರು.

    ಮೋದಿ ನೃತ್ಯದ್ದು ಡೀಪ್​ಫೇಕ್ ಅಲ್ಲ, ನಾನೇ!

    ವೈರಲ್ ಆಗಿರುವ ಗರ್ಬಾ ನೃತ್ಯದ ವೀಡಿಯೊದಲ್ಲಿ ಇರುವುದು ನಾನು. ಅದು ಪ್ರಧಾನಿ ಮೋದಿ ಅವರ ಡೀಪ್​ಫೇಕ್ ಅಲ್ಲ ಎಂದು ವಿಕಾಸ್ ಮಹಾಂತೇ ಎಂಬುವರು ಹೇಳಿದ್ದಾರೆ. ಮುಂಬೈ ಮೂಲದ ಇವರು ತಾನು ಉದ್ಯಮಿ ಮತ್ತು ಕಲಾವಿದ ಎಂದು ಪರಿಚಯಿಸಿಕೊಂಡಿದ್ದಾರೆ. ನಾನು ಮೋದಿ ಅವರನ್ನು ಹೋಲುವುದರಿಂದ ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಾರೆ. ಕಾರ್ಯಕ್ರಮಗಳಲ್ಲಿ ನಾನು ಮೋದಿಯವರ ಆಲೋಚನೆಗಳನ್ನು ತಿಳಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಬ್ರಿಟನ್​ನಲ್ಲಿರುವ ಪಂಕಜ್ ಸೋಧಾ ಎಂಬುವರ ಕುಟುಂಬ ದೀಪಾವಳಿ ಹಬ್ಬಕ್ಕೆಂದು ಆಹ್ವಾನಿಸಿದ್ದ ವೇಳೆ ತಾನು ಗರ್ಬಾ ನೃತ್ಯ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

    ಪ್ರಮುಖಾಂಶಗಳು

    ಡೀಪ್​ಫೇಕ್ ಕುರಿತು ಹೇಗೆ ತನಿಖೆ ಮಾಡಬೇಕು?

    ವೈರಲ್ ಆಗದಂತೆ ನೋಡಿಕೊಳ್ಳುವುದು ಹೇಗೆ?

    ಬಳಕೆದಾರರು ಹೇಗೆ ದೂರು ನೀಡಬಹುದು?

    ತಕ್ಷಣ ಹೇಗೆ ಕ್ರಮ ತೆಗೆದುಕೊಳ್ಳಬಹುದು?

    • ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts