ಪರಿಸರಸ್ನೇಹಿ ಇಂಧನ ಹೂಡಿಕೆ, ಉತ್ಪಾದನೆಗೆ ನೂತನ ನೀತಿ

blank

ಬೆಂಗಳೂರು: ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ (ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ಯಥೇಚ್ಛ ಅವಕಾಶಗಳಿವೆ. ಈ ದೃಷ್ಟಿಯಿಂದ ಸೂಕ್ತ ನೀತಿಯನ್ನು ರೂಪಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಖನಿಜ ಭವನದಲ್ಲಿ ಆಯೋಜಿಸಿದ್ದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ಸರಕಾರದ ವಿಷನ್ ಗ್ರೂಪ್‌ಗಳ ಚೊಚ್ಚಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬೃಹತ್ ಕೈಗಾರಿಕೆ ಇಲಾಖೆ ಮತ್ತು ಇಂಧನ ಇಲಾಖೆ ಎರಡೂ ಜತೆಗೂಡಿ ಈ ಗುರಿ ಸಾಧಿಸಬೇಕಿದೆ. ಸಾಧಿಸಬೇಕಾಗಿದೆ. ಅದಕ್ಕಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ಉದ್ಯಮಿಗಳು ಮತ್ತು ಆಸಕ್ತ ಹೂಡಿಕೆದಾರರ ಸಭೆಯನ್ನು ಸದ್ಯದಲ್ಲೇ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಣಿತ ಉದ್ಯಮಿಗಳು ಗ್ರೀನ್ ಎನರ್ಜಿ ಕ್ಷೇತ್ರದಲ್ಲಿರುವ ಸಾಧ್ಯತೆ, ಅಗತ್ಯ, ಬೇಡಿಕೆ, ನೀತಿ-ನಿರೂಪಣೆ, ರಿಯಾಯಿತಿ ಇತ್ಯಾದಿಗಳನ್ನು ಕುರಿತು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಈ ವಲಯವನ್ನು ಬೆಳೆಸಬೇಕೆಂಬುದು ಸರ್ಕಾರದ ಮುಕ್ತ ನಿಲುವಾಗಿದೆ ಎಂದರು.

‘ಅವಾಡಾ ಕಂಪನಿಯ ಸಿಇಒ ಕಿಶೋರ್ ನಾಯರ್ ಮಾತನಾಡಿ, ‘ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ನಾವು ರಾಜ್ಯ ಸರ್ಕಾರದ ಜತೆ 45 ಸಾವಿರ ಕೋಟಿ ರೂ. ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸರ್ಕಾರವು ಸೂಕ್ತ ಪ್ರೋತ್ಸಾಹಕ ಭತ್ಯೆ ಮತ್ತು ನೀತಿ ಜಾರಿಗೆ ತಂದರೆ ನಾವು ಎಲೆಕ್ಟ್ರೋಲೈಟ್ ಮತ್ತು ಬ್ಯಾಟರಿ ಉತ್ಪಾದನೆಯ ಕಡೆಗೆ ಗಮನ ಹರಿಸಬಹುದು. ಜತೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದ್ದರಿಂದ, ಪರಿಸರಸ್ನೇಹಿ ಮೆಥನಾಲ್ ಮತ್ತು ಪರಿಸರಸ್ನೇಹಿ ಜಲಜನಕ(ಗ್ರೀನ್ ಹೈಡ್ರೋಜನ್)ದ ಉತ್ಪಾದನೆಗೂ ಆದ್ಯತೆ ಕೊಡಬಹುದು. ರಾಜಾಸ್ಥಾನ ಮತ್ತು ಮಹಾರಾಷ್ಟ್ರ ಈಗಾಗಲೇ ಈ ಸಂಬಂಧ ನೀತಿಗಳನ್ನು ಜಾರಿಗೆ ತಂದಿವೆ ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ‘ಉದ್ಯಮಿಗಳು 5-6 ಮಿಲಿಯನ್ ಡಾಲರ್ ಹಣ ಮತ್ತು 5 ಗಿಗಾವ್ಯಾಟ್ ವಿದ್ಯುತ್ತಿನ ಅಗತ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ಜೊತೆಗೆ ಇದಕ್ಕೆ ಮಂಗಳೂರು ಬಂದರಿನ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ಸೂಕ್ತ ತಾಣವಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಇದನ್ನು ಈಡೇರಿಸಿದರೆ ಪರಿಸರಸ್ನೇಹಿ ಅಮೋನಿಯಾ ಮತ್ತು ಜಲಜನಕಗಳ ಉತ್ಪಾದನೆ ಸುಗಮವಾಗಲಿದೆ. ಈ ಬಗ್ಗೆ ಸರಕಾರವು ಸಕಾರಾತ್ಮಕ ಭಾವನೆ ಹೊಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ‘ಗ್ರೀನ್ ಇಂಡಸ್ಟ್ರಿಯಲ್ ಪಾರ್ಕುಗಳನ್ನು ಸ್ಥಾಪಿಸಿದರೆ ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಬಹುದು ಎನ್ನುವ ಸಲಹೆಯೂ ಬಂದಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ನೀತಿ ಇರುವುದು ಗೊತ್ತಾಗಿದೆ. ಇಂತಹ ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ತಿನ ಪೂರೈಕೆ ಸುಗಮವಾಗಿ ಇರಬೇಕಾಗುತ್ತದೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶಗಳಿಗೆ ನದಿ ಮೂಲಗಳಿಂದ ಅಗತ್ಯ ಪ್ರಮಾಣದ ನೀರನ್ನು ಪೂರೈಸುವ ಉಪಕ್ರಮವನ್ನು ಈಗಾಗಲೇ ಘೋಷಿಸಿದೆ. ಪರಿಸರಸ್ನೇಹಿ ಜಲಜನಕ ಮತ್ತು ಸೌರಕೋಶ ಉತ್ಪಾದನಾ ಘಟಕಗಳಿಗೆ ಈಗಾಗಲೇ ಜಿಎಸ್‌ಟಿಯಲ್ಲಿ ಸಾಕಷ್ಟು ರಿಯಾಯಿತಿಕೊಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಸಿಮೆಂಟ್, ಉಕ್ಕು ವಲಯದತ್ತಲೂ ಗಮನ

ಕೋರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್ ಗ್ರೂಪಿನ ಸಭೆಯನ್ನೂ ನಡೆಸಿದ ಸಚಿವರು, ರಾಜ್ಯದಲ್ಲಿ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಗೆ ಇರುವ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಜತೆಗೆ, ಈ ಸಂಬಂಧ ಸರ್ಕಾರ ಕೈಗೊಳ್ಳಬೇಕಾಗಿರುವ ನಾನಾ ಉಪಕ್ರಮಗಳ ಸ್ವರೂಪ ಹೇಗಿರಬೇಕೆಂದು ಉದ್ಯಮಿಗಳ ಸಲಹೆ ಪಡೆಯಲಾಗಿದೆ ಎಂದರು.

ಗ್ರೀನ್ ಎನರ್ಜಿ ವಿಷನ್ ಗ್ರೂಪ್ ಸಭೆಯಲ್ಲಿ ರೆನ್ಯೂ ಪವರ್ ಅಧ್ಯಕ್ಷ ವಿವೇಕ್ ಸಿಂಘ್ಲಾ, ಎಮ್ವೀ ಸೋಲಾರ್‌ನ ಸ್ಥಾಪಕ ಡಿ ವಿ ಮಂಜುನಾಥ, ಆ್ಯಮ್-ಪ್ಲಸ್ ಸಿಇಒ ಶರದ್ ಪುಂಗಾಲಿಯಾ, ಜಿಂದಾಲ್ ಸ್ಟೀಲ್ ವರ್ಕ್ಸ್ ಸಿಇಒ ಜಯಂತ್ ಆಚಾರ್ಯ ವರ್ಚುಯಲ್ ರೂಪದಲ್ಲಿ ಪಾಲ್ಗೊಂಡಿದ್ದರು.
ಕೋರ್ ಮ್ಯಾನುಫ್ಯಾಕ್ಚರಿಂಗ್ ವಿಷನ್ ಗ್ರೂಪ್ ಸಭೆಯಲ್ಲಿ ಬಲ್ದೋಟ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್, ಸಂಡೂರು ಮ್ಯಾಂಗನೀನ್ ಅಂಡ್ ಐರನ್ ಓರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಬಹಿರಜಿ ಘೋರ್ಷಡೆ, ಅಲ್ಟ್ರಾ ಟೆಕ್ ಮುಖ್ಯಸ್ಥ ರಾಜನಾರಾಯಣನ್ ಉಪಸ್ಥಿತರಿದ್ದರು.

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…