More

  ನೂತನ ಸಂಸತ್ ಭವನ ಭಾರತದ ಹೆಮ್ಮೆ

  ಧಾರವಾಡ: ದೇಶ ಸ್ವತಂತ್ರವಾದ ಮೇಲೆ ಹೊಸ ಸಂಸತ್ ಭವನ ಈಗ ಉದ್ಘಾಟನೆ ಆಗುತ್ತಿದೆ. ಇದು ಇಡೀ ದೇಶ ಹೆಮ್ಮೆ ಪಡುವಂಥ ಸಂಗತಿ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
  ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷರು ದೇಶಕ್ಕೆ ಸ್ವಾತಂತ್ರ‍್ಯ ಕೊಟ್ಟು ಹೋದÀರು. ಆಗ ಅಽಕಾರ ಹಸ್ತಾಂತರ ಮÁಡಿದ್ದರು. ಆ ಸಂದರ್ಭದಲ್ಲಿ ನಂದಿ ಲಾಂಛನವಿರುವ ಸುವರ್ಣ ದಂಡ ಕೊಟ್ಟಿದ್ದರಂತೆ. ಅದು ಈಗ ಬೆಳಕಿಗೆ ಬಂದಿದೆ ಎಂದರು.
  ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿ ಬೇಕು. ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ ಅಹಂ ಅದಂಡಹ್ಯ ಎನ್ನುತ್ತಿದ್ದನು. ನನ್ನ ಮೇಲೆ ಯÁವ ದಂಡನೆ ಇರುವುದಿಲ್ಲ, ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು. ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡವನ್ನು ತೋರಿಸುತ್ತಿದ್ದರು. ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು. ಅದನ್ನು ಮೀರಿ ಧರ್ಮ ಮÁರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು. ಅಂತಹ ಧರ್ಮ ದಂಡ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ. ಇದು ಶುಭ ಸಂಕೇತ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts