Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಹ್ಯಾಂಗೋವರ್ ಮತ್ತು ಹೆಣ..!

Thursday, 12.07.2018, 3:03 AM       No Comments

ಬೆಂಗಳೂರು: ಮೂವರು ಹುಡುಗಿಯರು, ಮೂವರು ಹುಡುಗರು ಕಾಕ್​ಟೇಲ್ ಪಾರ್ಟಿಗೆ ತೆರಳುತ್ತಾರೆ. ಅಂದು ರಾತ್ರಿ ಫಾಮರ್್​ಹೌಸ್​ನಲ್ಲಿ ಉಳಿದುಕೊಳ್ಳುವ ಅವರಿಗೆ ಬೆಳಿಗ್ಗೆ ಎದ್ದಾಗ ಒಂದು ಅಚ್ಚರಿ ಕಾದಿರುತ್ತದೆ. ಆ ಮನೆಯ ಸೋಫಾ ಮೇಲೆ ಹುಡುಗಿಯೊಬ್ಬಳ ಹೆಣ ಬಿದ್ದಿರುತ್ತದೆ. ಆ ಕೊಲೆ ಹೇಗಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ರಾತ್ರಿ ಮದ್ಯಪಾನ ಮಾಡಿದ್ದ ಕಾರಣ ಅವರಿಗೆ ಏನೂ ಅರಿವಿಗೆ ಬಂದಿರುವುದಿಲ್ಲ. ಅಮಲು ಇಳಿದ ಬಳಿಕ ಸ್ವಲ್ಪ ಸ್ವಲ್ಪವೇ ನೆನಪಾಗುತ್ತಿದ್ದಂತೆಯೇ ಒಂದೊಂದೇ ವಿಷಯಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತವೆ. ಹೀಗೆ ರಿವರ್ಸ್ ಸ್ಕ್ರೀನ್​ಪ್ಲೇ ಮಾದರಿಯಲ್ಲಿ ಒಂದು ಕಥೆ ಹೆಣೆದುಕೊಂಡು ‘ಹ್ಯಾಂಗೋವರ್’ ಶೀರ್ಷಿಕೆಯ ಚಿತ್ರ ನಿರ್ದೇಶಿಸಿದ್ದಾರೆ ವಿಠಲ್ ಭಟ್. ಈ ಹಿಂದೆ ‘ಪ್ರೀತಿ ಕಿತಾಬು’ ಮೂಲಕ ಪ್ರೇಮ್ಹಾನಿ ಹೇಳಿದ್ದ ಅವರು, ಈಗ ಸಸ್ಪೆನ್ಸ್ ಥ್ರಿಲ್ಲರ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪಾತ್ರವರ್ಗದಲ್ಲಿ ಬಹುತೇಕ ಹೊಸಬರೇ ಬಣ್ಣ ಹಚ್ಚಿದ್ದು, ನಾಯಕರಾಗಿ ಭರತ್, ರಾಜ್ ಮತ್ತು ಚಿರಾಗ್ ಕಾಣಿಸಿಕೊಂಡಿದ್ದರೆ, ನಾಯಕಿ ಯರಾಗಿ ಮಹತಿ ಭಿಕ್ಷು, ಸಹನಾ ಪೊನ್ನಮ್ಮ ಮತ್ತು ನಂದಿನಿ ನಟರಾಜ್ ನಟಿಸಿದ್ದಾರೆ. ಒಂದು ಮುಖ್ಯ ಪಾತ್ರದಲ್ಲಿ ತೆಲುಗಿನ ಶಫಿ ಅಭಿನಯಿಸಿರುವುದು ‘ಹ್ಯಾಂಗೋವರ್’ ಬಳಗದ ಸಂತಸ ಹೆಚ್ಚಿಸಿದೆ. ಸದ್ಯ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಚಿತ್ರವನ್ನು ಸೆನ್ಸಾರ್ ಅಂಗಳಕ್ಕೆ ಕಳಿಸಿದ್ದಾರೆ ನಿರ್ದೇಶಕರು. ಈ ಗ್ಯಾಪ್​ನಲ್ಲೇ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ‘ಗೋಲ್ಡನ್ ಸ್ಟಾರ್’ ಗಣೇಶ್ ಟ್ರೇಲರ್ ಲಾಂಚ್ ಮಾಡಿ, ಶುಭಕೋರಿರುವುದು ತಂಡದ ಉತ್ಸಾಹ ಹೆಚ್ಚಿಸಿದೆ. ರಮನೀ ರೀಲ್ಸ್ ಬ್ಯಾನರ್ ಮೂಲಕ ರಾಕೇಶ್ ಡಿ. ಬಂಡವಾಳ ಹೂಡಿದ್ದಾರೆ. ಎರಡು ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದು, ‘ಬಹದ್ದೂರ್’ ಚೇತನ್ ಕುಮಾರ್ ಮತ್ತು ಕೃಷ್ಣ ಸಾಹಿತ್ಯ ರಚಿಸಿದ್ದಾರೆ. ಸುಪ್ರಿಯಾ ಲೋಹಿತ್, ಸಂಚಿತ್ ಹೆಗಡೆ, ಧೀರೇಂದ್ರ ದಾಸ್ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ. ಸಂಭಾಷಣೆ ಬರೆದಿರುವುದು ಗಣೇಶ್ ರಾಣೆಬೆನ್ನೂರು. ಯೋಗಿ ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

Back To Top