ಹೊಸ ಐಟಿ ಮಸೂದೆ ಮಂಡನೆ; ಉಭಯ ಸದನಗಳು ಮಾ.10ಕ್ಕೆ ಮುಂದೂಡಿಕೆ

Nirmala Sitharaman

ನವದೆಹಲಿ: ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಗುರುವಾರ ಮಂಡಿಸಿದರು. ಮಸೂದೆ ಮಂಡನೆಗೆ ವಿರೋಧ ಪಕ್ಷಗಳ ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದರು. ಆದರೆ, ಧ್ವನಿಮತದ ಮೂಲಕ ಮಸೂದೆ ಮಂಡನೆಗೆ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಹಿನ್ನೆಲೆಯಲ್ಲಿ ಸಚಿವೆ ‘ಆದಾಯ ತೆರಿಗೆ ಕಾಯ್ದೆ, 2025’ ಅನ್ನು ಮಂಡಿಸಿದರು. ಈ ವೇಳೆ ಕರಡು ಮಸೂದೆಯನ್ನು ಸದನದ ಆಯ್ಕೆ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು. ಈ ನಡುವೆ, ಜ.30ರಿಂದ ನಡೆಯುತ್ತಿದ್ದ ಬಜೆಟ್ ಅಧಿವೇಶನದ ಉಭಯ ಸದನಗಳ ಮೊದಲ ಹಂತದ ಕಲಾಪ ಮುಕ್ತಾಯಗೊಂಡಿದ್ದು, ಮಾ.10ಕ್ಕೆ ಮುಂದೂಡಿಕೆಯಾಗಿದೆ.

ಆಯ್ಕೆ ಸಮಿತಿ ಮುಂದಿನ ಅಧಿವೇಶನದ ಮೊದಲ ದಿನ ತನ್ನ ವರದಿಯನ್ನು ಸಲ್ಲಿಸಲಿದೆ. ಹೊಸ ಕಾಯ್ದೆಯಲ್ಲಿ ಅಸೆಸ್​ವೆುಂಟ್ ಇಯರ್ ಎಂಬುದನ್ನು ಕೈಬಿಟ್ಟು ಟ್ಯಾಕ್ಸ್ ಇಯರ್ ಎಂಬ ಪದವನ್ನು ಬಳಸಲಾಗಿದೆ. ಆರು ದಶಕಗಳಷ್ಟು ಹಳೆಯ ಕಾಯ್ದೆಗಳಲ್ಲಿದ್ದ ಹಲವು ಸೆಕ್ಷನ್​ಗಳನ್ನು ತೆಗೆದುಹಾಕಲಾಗಿದೆ.

92 ಕೋಟಿ ಜನರಿಗೆ ಸಾಮಾಜಿಕ ಭದ್ರತೆ: ದೇಶದ ಜನಸಂಖ್ಯೆಯ ಶೇ.65 ರಷ್ಟು ಅಂದರೆ 92 ಕೋಟಿ ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದೆ. ದಶಕದ ಹಿಂದೆ ಪಿಂಚಣಿ ಪಡೆಯುತ್ತಿದ್ದ ಶೇ.18 ರಷ್ಟು ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶೇ.48 ರಷ್ಟು ಜನರಿಗೆ ಸಾಮಾಜಿಕ ಭದ್ರತೆ ಒದಗಿಸಿದೆ. 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ವಯ 60 ಕೋಟಿ ಜನರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ 92 ಕೋಟಿ ಜನರು ಸಾಮಾಜಿಕ ಭದ್ರತೆ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ಕೇಂದ್ರ ಕಾರ್ವಿುಕ ಸಚಿವ ಮನ್ಸುಖ್ ಮಾಂಡವೀಯ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ 173 ಸಂಸದರಿಂದ ಚರ್ಚೆ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಂದ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಎರಡೂ ಸದನಗಳನ್ನು ಮಾರ್ಚ್ 10 ರವರೆಗೆ ಮುಂದೂಡಲಾಯಿತು. ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ಚರಣ ಜನವರಿ 31 ರಂದು ಆರಂಭವಾಗಿತು. ಗುರುವಾರ ಸದನವನ್ನು ಮಾರ್ಚ್ 10 ರವರೆಗೆ ಮುಂದೂಡಲಾಗಿದೆ. ಮಾರ್ಚ್ 10 ರಿಂದ ಏಪ್ರಿಲ್ 4 ರವರೆಗೆ ಬಜೆಟ್ ಅಧಿವೇಶನದ ಎರಡನೇ ಚರಣ ನಡೆಯಲಿದೆ.ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ 173 ಸಂಸದರು ಪಾಲ್ಗೊಂಡಿದ್ದು, 17 ಗಂಟೆ 23 ನಿಮಿಷ ಚರ್ಚೆ ನಡೆಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ 170 ಸಂಸದರು ಪಾಲ್ಗೊಂಡಿದ್ದರು. ಈ ಚರ್ಚೆ 16 ಗಂಟೆ 13 ನಿಮಿಷ ನಡೆದಿತ್ತು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

2028ಕ್ಕೆ ಮಾನವಸಹಿತ ಗಗನಯಾತ್ರೆ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದ್ದು 2028ರ ವೇಳೆಗೆ ಮಾನವ ಸಹಿತ ಎರಡು ಯಾತ್ರೆಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.ಗಗನಯಾನ ಯೋಜನೆಯಲ್ಲಿ ಒಟ್ಟು 2 ಮಾನವಸಹಿತ ಮತ್ತು 6 ಮಾನವರಹಿತ ಗಗನಯಾತ್ರೆಯನ್ನು ಯೋಜಿಸಲಾಗಿದೆ. ಇದಕ್ಕಾಗಿ 20,193 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಈ ಯೋಜನೆಯಲ್ಲಿ ಭಾರತೀಯ ಅಂತರಿಕ್ಷ ಸ್ಟೇಷನ್ ನಿರ್ವಣವೂ ಸೇರಿದೆ. 2019 ರಲ್ಲಿ ಗಗನಯಾನ ಯೋಜನೆಯನ್ನು ಘೋಷಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಪ್ರಗತಿ ಕಂಡು ಬಂದಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಗಗನಯಾನಕ್ಕೆ ಬಳಸುವ ನೌಕೆಯನ್ನು ಪರೀಕ್ಷೆ ಮಾಡಲಾಗಿದೆ.

2031ಕ್ಕೆ ಕೈಗಾದ 6ನೇ ಘಟಕ ಕಾರ್ಯಾರಂಭ ಗುರಿ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕದ ನಿರ್ವಣದ ಗುತ್ತಿಗೆಯನ್ನು ಮೇಘಾ ಇಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ ವಹಿಸಲಾಗಿದೆ. 21 ಸಾವಿರ ಕೋಟಿ ವೆಚ್ಚದಲ್ಲಿ ಎರಡೂ ಘಟಕಗಳ ನಿರ್ಮಾಣ ಕಾರ್ಯ ನಡೆಯಲಿದ್ದು, 2030-31 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಎರಡೂ ಘಟಕಗಳು ತಲಾ 700 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಈ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಕೈಗಾದಲ್ಲಿ 2280 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಪ್ರಸ್ತುತ 4 ಘಟಕಗಳಲ್ಲಿ ತಲಾ 220 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

18.4 ಲಕ್ಷ ಜನರಿಗೆ ಉದ್ಯೋಗ: 2019-20 ರಿಂದ ಇದುವರೆಗೆ 42 ಸಾವಿರ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದ್ದು 18.4 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ‘2022 ರ ಅಕ್ಟೋಬರ್ 22 ರಂದು ರೋಜ್​ಗಾರ್ ಮೇಳಕ್ಕೆ ಚಾಲನೆ ನೀಡಿದ್ದರು. ಕೇಂದ್ರ ಮಟ್ಟದಲ್ಲಿ 14 ಮೇಳಗಳನ್ನು 45-50 ನಗರಗಳಲ್ಲಿ ಆಯೋಜಿಸಲಾಗಿದೆ. ಇದಲ್ಲದೆ, ಕಾರ್ವಿುಕ ಇಲಾಖೆ ಸಹ ಹಲವು ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಹೇಳಿದರು.

ಹೊಸ ಐಟಿ ಮಸೂದೆ ಬದಲಾವಣೆಗಳು

  • ಐಟಿ ಕಾಯ್ದೆ 823 ಪುಟಗಳಿಂದ 622 ಪುಟಗಳಿಗೆ ಇಳಿಕೆ
  • 800 ಸೆಕ್ಷನ್​ಗಳಿಂದ 536 ಸೆಕ್ಷನ್​ಗಳಿಗೆ ಇಳಿಕೆ ?51 ಅಧ್ಯಾಯಗಳು 23 ಅಧ್ಯಾಯಗಳಿಗೆ ಇಳಿಕೆ ?14 ಷೆಡ್ಯೂಲ್16 ಕ್ಕೆ ಏರಿಕೆ ?ಅಸೆಸ್​ವೆುಂಟ್ ಇಯರ್ ಬದಲು ತೆರಿಗೆ ವರ್ಷ ಪದ ಬಳಕೆ ?ನಾಟ್ ವಿಥ್​ಸ್ಟಾ್ಯಂಡಿಂಗ್ ಬದಲು ಇರ್ರೆಸ್ಪೆಕ್ಟೀವ್ ಆಫ್ ಎನಿಥಿಂಗ್ ಪದ ಬಳಕೆ

ಬಳಕೆಯಲ್ಲಿರುವ ತೆರಿಗೆ ಕಾನೂನುಗಳು

  • 1922 -ಭಾರತೀಯ ಆದಾಯ ತೆರಿಗೆ ಕಾನೂನು ಜಾರಿಗೆ
  • 1953 -ಎಸ್ಟೇಟ್ ಡ್ಯೂಟಿ

ಕಾನೂನು ಸೇರ್ಪಡೆ

  • 1957- ಸಂಪತ್ತು ತೆರಿಗೆ ಕಾಯ್ದೆ ಜಾರಿ ?1958 – ಉಡುಗೊರೆ ತೆರಿಗೆ ಕಾಯ್ದೆ ಜಾರಿ ?1961-ಆದಾಯ ತೆರಿಗೆ ಕಾಯ್ದೆ 1961ಕ್ಕೆ ಅನುಮೋದನೆ 1962ರ ಏಪ್ರಿಲ್​ನಿಂದ ಜಾರಿ

ವಿರಾಟ್​ಗೆ ನಾಯಕತ್ವದ ಅಗತ್ಯವಿಲ್ಲ; ರಜತ್ RCB ಕ್ಯಾಪ್ಟನ್ ಆದ ಬೆನ್ನಲ್ಲೇ ಫ್ರಾಂಚೈಸಿ ಡೈರೆಕ್ಟರ್ ಹೇಳಿಕೆ ವೈರಲ್​

ಡಾಲಿ Dhananjay ಮದುವೆಗೆ ವಿಭಿನ್ನವಾಗಿ ಶುಭಕೋರಿದ ಅಂಚೆ ಇಲಾಖೆ; ನಿಮ್ಮ ಪ್ರೀತಿಗೆ ಶರಣು ಎಂದ ಮಧುಮಗ

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…