ಬೆಂಗಳೂರು: ಸ್ಮಾರ್ಟ್ ನೀರಾವರಿ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ “ನೇಟಾಫಿಮ್ ಇಂಡಿಯಾ ಕಂಪನಿ‘ ಹೊಸ ನೀರಾವರಿ ತಂತ್ರಜ್ಞಾನ “ತೂಫಾನ್‘ ಉತ್ಪನ್ನ ಬಿಡುಗಡೆ ಮಾಡಿದೆ. ಇದು ಎಲ್ಲ ರೈತರಿಗೂ ನೆರವಾಗಲಿದೆ. ಉತ್ಪನ್ನದ ಮೂಲಕ ಕಂಪನಿ 2025ರ ವೇಳೆಗೆ 25 ಸಾವಿರ ಹೆಕ್ಟೇರ್ ಪ್ರದೇಶದ 35 ಸಾವಿರ ರೈತರನ್ನು ತಲುಪುವ ಗುರಿ ಹೊಂದಿದೆ. ಈ ವಿಭಾಗದಲ್ಲಿ ತೂಫಾನ್ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ಅಡಚಣೆರಹಿತ ತಂತ್ರಜ್ಞಾನದಿಂದಾಗಿ ನೀರು ಮತ್ತು ಪೋಷಕಾಂಶ ಗರಿಷ್ಠ ಮಟ್ಟದಲ್ಲಿ ಬೆಳೆಗಳಿಗೆ ದೊರೆಯುವಂತೆ ಮಾಡಲಿದೆ.
ಡ್ರಿಪ್ ಲೈನ್ ಶೇ .40ರಷ್ಟು ಹೆಚ್ಚು ಬಲಿಷ್ಠವಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎನ್ಪಿಸಿ ಡ್ರಿಪ್ಲೈನ್ಗಳಿಗೆ ಹೋಲಿಸಿದರೆ ತೂಫಾನ್ ಶೇ .20ರಷ್ಟು ಅಗ್ಗವಾಗಿದೆ.ಎಲ್ಲರಿಗೂ ಲಭ್ಯವಾಗುವ ಉತ್ತಮ ನೀರಾವರಿ ವ್ಯವಸ್ಥೆ ಮಾತ್ರವಲ್ಲದೆ ಇದರ ಖರೀದಿ ಪ್ರಕ್ರಿಯೆಯೂ ಸರಳವಾಗಿದೆ. ಅಗ್ಗದ ಹನಿ ನೀರಾವರಿ ತಂತ್ರಜ್ಞಾನ ಸಣ್ಣ ಮತ್ತು ದೊಡ್ಡ ಪ್ರಮಾಣದ ರೈತರಿಗೆ, ಸಬ್ಸಿಡಿ ಅರ್ಹತೆಯೂ ದೊರೆಯಲಿದೆ. ಡ್ರಿಪ್ಲೈನ್ ತ್ವರಿತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ. ಒಂದೇ ದಿನ ಹತ್ತು ಎಕರೆ ಪ್ರದೇಶದಲ್ಲಿ ಇದನ್ನು ಅಳವಡಿಸಬಹುದು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 115 ಕೋಟಿ ಲಾಭ
ಕಂಪನಿ ಎಂಡಿ ರಣಧೀರ್ ಚೌಹಾನ್ ಮಾತನಾಡಿ, ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಸಣ್ಣ ನೀರಾವರಿ ವ್ಯವಸ್ಥೆ ಒದಗಿಸುವುದು ನಮ್ಮ ಉದ್ದೇಶ. ರೈತರಿಗೆ ನಿರಂತರವಾಗಿ ಇಳುವರಿ ದೊರೆಯುವುದು ಮಾತ್ರವಲ್ಲದೆ ನಿರ್ವಹಣೆ ವೆಚ್ಚವೂ ಕಡಿಮೆಯಾಗುವಂತೆ ಖಾತ್ರಿ ಮಾಡಲಿದೆ. ಭಾರತೀಯ ಕೃಷಿ ವ್ಯವಸ್ಥೆ ಸ್ವರೂಪವನ್ನು ಅರ್ಥ ಮಾಡಿಕೊಂಡಿದ್ದು, ಬೆಳೆಗಾರರ ಬದಲಾಗುವ ಅಗತ್ಯತೆಗಳಿಗೆ ಸ್ಪಂದಿಸಲು ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಭಾರತದ ಕೃಷಿ ಪ್ರಗತಿಯ ಭಾಗವಾಗಲು ಹೆಮ್ಮೆಯಾಗಿದೆ ಎಂದರು.