VIDEO | ಐಪಿಎಲ್‌ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ!

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗುವ ಮುನ್ನ ಸನ್ಯಾಸಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಐಪಿಎಲ್ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್‌ನ ಪ್ರಚಾರ ಜಾಹೀರಾತಿನಲ್ಲಿ ಧೋನಿ, ಕೇಶಮುಂಡನ ಮಾಡಿಸಿಕೊಂಡಿರುವ ಸನ್ಯಾಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಪಿಎಲ್ ಜಾಹೀರಾತಿನ ಸಣ್ಣ ಝಲಕ್ ಮಾತ್ರ ಬಿಟ್ಟುಕೊಟ್ಟಿರುವ ಸ್ಟಾರ್ ಸ್ಪೋರ್ಟ್ಸ್, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಧೋನಿ ಮೈದಾನದಲ್ಲಿ … Continue reading VIDEO | ಐಪಿಎಲ್‌ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ!