27.7 C
Bengaluru
Wednesday, January 22, 2020

ಮೊಬೈಲ್​ ನಂಬರ್ ಪೋರ್ಟಿಬಿಲಿಟಿಗೆ ಡಿಸೆಂಬರ್​ 16ರಿಂದ ಹೊಸ ಪದ್ಧತಿ; ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಟ್ರಾಯ್​

Latest News

ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶದಿಂದ ವಾಪಸಾದ ಬಳಿಕ ಸಚಿವ ಸಂಪುಟ ವಿಸ್ತರಣೆ: ಡಿಸಿಎಂ ಅಶ್ವತ್ಥ ನಾರಾಯಣ

ತುಮಕೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ವಿದೇಶದಿಂದ ಬಂಡ ಕೂಡಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್​ ತಿಳಿಸಿದರು. ಇಲ್ಲಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ...

ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡುವೆ ಎಂದ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ರೈತ ಪರ ಕಾಳಜಿಯ ಸಿದ್ಧಗಂಗಾಶ್ರೀಗಳ ಶಿಕ್ಷಣದ ನಿಸ್ವಾರ್ಥ ಸೇವೆಯಿಂದ ಜಗತ್ತೇ ನಾಡನ್ನು ನೋಡುವಂತಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ನಗರದ ಪಬ್ಲಿಕ್...

ಎಲ್ಲ ವರ್ಗದವರಿಗೂ ಲ್ಯಾಪ್​ಟಾಪ್ ವಿತರಿಸಲು ಎನ್​ಎಸ್​ಯುುಐ ಕಾರ್ಯಕರ್ತರ ಒತ್ತಾಯ

ಶಿವಮೊಗ್ಗ: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿರುವ ಉಚಿತ ಲ್ಯಾಪ್​ಟಾಪ್ ಯೋಜನೆಯನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂಂದು ಒತ್ತಾಯಿಸಿ ಎನ್​ಎಸ್​ಯುುಐ...

ಹೆಲ್ಮೆಟ್ ಧರಿಸಿದ್ದರೆ ಮಾತ್ರ ಪೆಟ್ರೋಲ್ ಹಾಕಿ : ಪಿಎಸ್‌ಐ ಸಣ್ಣ ವೀರೇಶ

ಮಸ್ಕಿ: ಅಪಘಾತಗಳನ್ನು ತಡೆಗಟ್ಟಲು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ಗಳನ್ನು ಧರಿಸಿಕೊಳ್ಳಬೇಕು. ಹೆಲ್ಮೆಟ್ ಧರಿಸಿದ್ದರೆ ಮಾತ್ರ ಪೆಟ್ರೋಲ್ ಹಾಕುವಂತೆ ಪಿಎಸ್‌ಐ ಸಣ್ಣ ವೀರೇಶ ಸೂಚಿಸಿದರು. ಪಟ್ಟಣದ...

ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಎದೆಯಲ್ಲಿ ದ್ವೇಷ ಭಾವನೆ ಕೆರಳಿಸಲು ಹುನ್ನಾರ

ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಮುಂದಿಟ್ಟುಕೊಂಡು ಕೆಲವರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಎದೆಯಲ್ಲಿ ದ್ವೇಷ ಭಾವನೆ ಕೆರಳಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್...

ನವದೆಹಲಿ: ಮೊಬೈಲ್​ ನಂಬರ್ ಪೋರ್ಟಿಬಿಲಿಟಿ(ಎಂಎನ್​ಪಿ) ಯನ್ನು ಸರಳ ಮತ್ತು ವೇಗಗೊಳಿಸುವ ಹೊಸ ವಿಧಾನ ಡಿಸೆಂಬರ್ 16 ರಿಂದ ಜಾರಿಗೆ ಬರಲಿದ್ದು, ಈ ಸಂಬಂಧ ಟೆಲಿಕಾಂ ರೆಗ್ಯುಲೆಟರಿ ಅಥಾರಿಟಿ ಆಫ್​​ ಇಂಡಿಯಾ (ಟ್ರಾಯ್​) ಮಂಗಳವಾರ ಸಾರ್ವಜನಿಕ ಸೂಚನೆ ಬಿಡುಗಡೆ ಮಾಡಿದೆ.

ಹೊಸ ಪದ್ಧತಿಯಲ್ಲಿ ಯೂನಿಕ್​ ಪೋರ್ಟಿಂಗ್​ ಕೋಡ್​ (ಯುಪಿಸಿ) ಉತ್ಪಾದಿಸಲು ಸ್ಥಳಿಯವಾಗಿ ಮೂರು ದಿನ ಮತ್ತು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಐದು ದಿನಗಳ ಸಮಯ ನಿಗದಿಗೊಳಿಸಲಾಗಿದೆ. ಕಾರ್ಪೋರೇಟ್​ ಸಂಪರ್ಕಗಳ ಫೋರ್ಟಿಂಗ್​ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟ್ರಾಯ್​ ತಿಳಿಸಿದೆ.

ಗ್ರಾಹಕ ಮೊಬೈಲ್​ ನಂಬರ್​ ಪೋರ್ಟ್​ ಆಗಲು ಅರ್ಹನಾಗಿದ್ದರೆ ಮಾತ್ರ ಯುಪಿಸಿ ಉತ್ಪಾದಿಸಬಹುದು. ಡಿಸೆಂಬರ್​ 16ರಿಂದ ಹೊಸ ಪದ್ಧತಿ ಜಾರಿಯಾಗಲಿದೆ ಎಂದು ಸೂಚನೆಯಲ್ಲಿ ತಿಳಿಸಲಿದೆ.

ಹೊಸ ಷರತ್ತುಗಳು ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದಿರುವ ಟ್ರಾಯ್​, ಪೋಸ್ಟ್​ಪೇಯ್ಡ್​ ಗ್ರಾಹಕರಾಗಿದ್ದಲ್ಲಿ ಹಳೇ ಕಂಪನಿಯ ಎಲ್ಲ ಬಾಕಿಗಳನ್ನು ಚುಕ್ತಗೊಳಿಸಿರಬೇಕು. ನಂತರ 90 ದಿನಗಳಲ್ಲಿ ಇನ್ನೊಂದು ಕಂಪನಿ ಜತೆ ತಮ್ಮ ನಂಬರ್​ನ್ನು ಸಕ್ರಿಯಗೊಳಿಸಿಕೊಳ್ಳಬೇಕು ಎಂದು ತಿಳಿಸಿದೆ.

ಯುಪಿಸಿ ಸಂಖ್ಯೆಯು 4 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆದರೆ ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಇದರ ಅವಧಿ ಒಂದು ತಿಂಗಳಾಗಿರುತ್ತದೆ.

ಈಗಾಗಲೇ ಚಾಲ್ತಿಯಲ್ಲಿರುವ ಮೊಬೈಲ್​ ನಂಬರ್​ ಪೋರ್ಟಿಬಿಲಿಟಿ ಪದ್ಧತಿಯು 16 ಡಿಸೆಂಬರ್​ ನಂತರ ಬದಲಾಗಲಿದೆ. ಡಿಸೆಂಬರ್​ 10 ರಿಂದ 15ರವರೆಗೆ ಈ ಸೌಲಭ್ಯ ಇರುವುದಿಲ್ಲ. ಅಲ್ಲದೆ, ಈಗಾಗಲೇ ಚಂದಾದಾರರು ಎಂಎನ್​ಪಿ ಮನವಿ ಸಲ್ಲಿಸಿದ್ದರೆ ಅದರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಟ್ರಾಯ್​ ತಿಳಿಸಿದೆ. (ಪಿಟಿಐ)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...