More

  ಜೆಎನ್​ಯು ಹಿಂಸಾಚಾರ| ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ ಪೊಲೀಸರು; ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್​ ಸೇರಿ ಒಂಭತ್ತು ಜನ ಶಂಕಿತರು

  ನವದೆಹಲಿ: ಜೆಎನ್​ಯು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಒಂಭತ್ತು ಶಂಕಿತರ ಫೋಟೋಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.

  ಜೆಎನ್​​ಯು ಕ್ಯಾಂಪಸ್ ಹಿಂಸಾಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಮತ್ತು ಇತರ 8 ಮಂದಿ ಶಂಕಿತರನ್ನು ದೆಹಲಿ ಪೊಲೀಸರು ಶುಕ್ರವಾರ ಹೆಸರಿಸಿದ್ದಾರೆ.

  ಪೊಲೀಸರ ಪ್ರಕಾರ, ಚುಂಚುನ್​​ ಕುಮಾರ್​, ಪಂಕಜ್​ ಮಿಶ್ರಾ, ಐಷೆ ಘೋಷ್, ವಾಸ್ಕರ್​ ವಿಜಯ್​, ಸುಚೇತಾ ತಾಲುಡ್ಕರ್​, ಪ್ರಿಯಾ ರಂಜನ್​, ದೋಲಾನ್​ ಸಾವಂತ್​, ಯೋಗೇಂದ್ರ ಭಾರಧ್ವಾಜ್​, ಮತ್ತು ವಿಕಾಸ್​ ಪಟೇಲ್​ ಎಂದು ಗುರುತಿಸಲಾಗಿದೆ.

  ಯೋಗೇಂದ್ರ ಭಾರಧ್ವಾಜ್​ ಮತ್ತು ವಿಕಾಸ್​ ಪಟೇಲ್​ ಎಬಿವಿಪಿಯವರಾದರೆ ಉಳಿದವರು ಎಡಪಂಥೀಯ ಸಂಘಟನೆಯವರು ಎಂದು ಡಿಸಿಪಿ ಡಾ. ಜಾಯ್​ ಟಿರ್ಕೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts