More

    ನಕಲಿ ದಾಖಲೆ ಸಲ್ಲಿಸಿದ ನಿರ್ಭಯಾ ಅಪರಾಧಿ ಪರ ವಕೀಲಗೆ ದೆಹಲಿ ಬಾರ್​ ಕೌನ್ಸಿಲ್​ ನೋಟಿಸ್​, ಕೋರ್ಟ್​ ಸೂಚನೆ ಮೇರೆಗೆ ಕ್ರಮ

    ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿ ಪವನ್​ ಕುಮಾರ್​ ಗುಪ್ತಾ ಪರ ವಕೀಲ ಎ.ಪಿ. ಸಿಂಗ್​ಗೆ ನಕಲಿ ದಾಖಲೆ ಸಲ್ಲಿಸಿದ್ದಕ್ಕಾಗಿ ದೆಹಲಿ ಬಾರ್​ ಕೌನ್ಸಿಲ್​ ನೋಟಿಸ್​ ನೀಡಿದೆ.

    ವಕೀಲ ಎ.ಪಿ. ಸಿಂಗ್​ಗೆ ನೀಡಿರುವ ನೋಟಿಸ್​ ಎರಡು ವಾರಗಳಲ್ಲಿ ಉತ್ತರಿಸಲು ಸೂಚಿಸಲಾಗಿದೆ.

    ಪವನ್​ ಗುಪ್ತಾ ಪ್ರಕರಣ ನಡೆದ ಸಮಯದಲ್ಲಿ ಅಪ್ರಾಪ್ತ ಎಂಬ ಹೇಳಿಕೆಯನ್ನು ದೆಹಲಿ ಹೈಕೋರ್ಟ್​ ತಳ್ಳಿ ಹಾಕಿತ್ತು. ಅಲ್ಲದೆ ಈ ಸಂಬಂಧ ನಕಲಿ ದಾಖಲೆ ಸಲ್ಲಿಸಿದ್ದ ವಕೀಲ ಎ.ಪಿ. ಸಿಂಗ್​ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಜತೆಗೆ ಕೋರ್ಟ್​ಗೆ ಗೈರಾಗುವ ವಕೀಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

    ವಕೀಲರ ಈ ನಡೆಯನ್ನು ನ್ಯಾಯಾಧೀಶ ಸುರೇಶ್​ಕುಮಾರ್​ ಕೈತ್​, ದೆಹಲಿ ಬಾರ್​ ಕೌನ್ಸಿಲ್​ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಕೀಲ ಎ.ಪಿ. ಸಿಂಗ್​ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೆ ಉದ್ದೇಶ ಪೂರ್ವಕವಾಗಿ ನಕಲಿ ಅಫಿಡವಿಟ್​ನ್ನು ಸಲ್ಲಿಸಿದ್ದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದಿತ್ತು.

    ಅಪರಾಧಿ ಪವನ್​ ಗುಪ್ತಾ ಇದೇ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದಾನೆ. ಪ್ರಕರಣ ನಡೆದ ಸಮಯದಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂದು ವಾದಿಸಿದ್ದಾನೆ. ಇದರ ವಿಚಾರಣೆಯನ್ನು ಸುಪ್ರೀಂ ನಾಳೆ ( ಜನವರಿ 20) ಕೈಗೆತ್ತಿಕೊಳ್ಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts