ಬೆಂಗಳೂರಿನಲ್ಲಿ ಇಳಿಮುಖವಾದ ಕೋವಿಡ್​ ಕೇಸ್​; ಮರಣ ಪ್ರಮಾಣವೂ ಕುಸಿತ

blank

ಬೆಂಗಳೂರು: ಹೊಸ ಕರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಸಾಗಿದೆ. ರಾಜ್ಯದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯವರೆಗೆ ಒಟ್ಟು 3,648 ಜನರಲ್ಲಿ ಸೋಂಕು ಕಂಡು ಬಂದಿದೆ.

ರಾಜ್ಯದಲ್ಲಿ ಒಟ್ಟಾರೆ ಕೋವಿಡ್​ ರೋಗಿಗಳ ಪ್ರಮಾಣ ನಿನ್ನೆಯಿದ್ದ 63,772 ರಿಂದ 67,420ಕ್ಕೆ ಏರಿದ್ದು, 70 ಸಾವಿರ ತಲುಪುವ ಸನ್ನಾಹದಲ್ಲಿದೆ. ಸದ್ಯ ಸಕ್ರಿಯ ರೋಗಿಗಳ ಸಂಖ್ಯೆ 42,216 ಆಗಿದೆ. ಇಂದು 72 ಜನರು ಮೃತಪಡುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,403ಕ್ಕೆ ತಲುಪಿದೆ.

ಕಳವಳದ ಸಂಗತಿ ಎಂದರೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕಳೆದ 24 ತಾಸುಗಳಲ್ಲಿ ಗುಣವಾದವರು ಕೇವಲ 730. ನಿನ್ನೆ ಈ ಸಂಖ್ಯೆ 1,290 ಆಗಿತ್ತು. ಈವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರು 23,795 ಮಂದಿ.

ಇದನ್ನೂ ಓದಿ; ಮೂರು ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕರೊನಾ ಕೇಸ್​; ಅಚ್ಚರಿಯ ಸುಧಾರಣೆ ಎಲ್ಲಿ?

ಸಮಾಧಾನದ ವಿಷಯವೆಂದರೆ, ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಕಳೆದ ಒಂದು ವಾರಕ್ಕೆ ಹೋಲಿಸಿದಲ್ಲಿ ಕಡಿಮೆಯಾಗಿದೆ. ಎರಡು ಸಾವಿರಕ್ಕಿಂತ ಕೆಳಗಿಳಿದಿದ್ದು, 1,452ಕ್ಕೆ ಇಳಿದಿದೆ. ಒಟ್ಟು ಸೋಂಕಿತರ ಸಂಖ್ಯೆ 33,229 ಕ್ಕೆ ತಲುಪಿದಂತಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 25,574. ಜತೆಗೆ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿ 31 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿಗೀಡಾದವರು 698 ಜನರು.

ಜಿಲ್ಲಾವಾರು ಕೋವಿಡ್​ ವಿವರ ಇಂತಿದೆ.

ಬೆಂಗಳೂರಿನಲ್ಲಿ ಇಳಿಮುಖವಾದ ಕೋವಿಡ್​ ಕೇಸ್​; ಮರಣ ಪ್ರಮಾಣವೂ ಕುಸಿತ

ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…