ಮರಡಿಮಠಕ್ಕೆ ನೂತನ ರಥ ಆಗಮನ

New chariot arrives at Maradimatha

ಗುಳೇದಗುಡ್ಡ: ಪಟ್ಟಣದ ಮರಡಿಮಠಲ್ಲಿ 10ನೇ ಕಾಡಸಿದ್ಧೇಶ್ವರರ ಪುಣ್ಯಸ್ಮರಣೋತ್ಸವದ ನಿಮಿತ್ತ ಏ.26ರಂದು ರಥೋತ್ಸವ ಜರುಗಲಿದೆ.
ಬಾಗಲಕೋಟೆಯ ಮಾಯಾಚಾರಿ ಕುಟುಂಬದವರು ಕೊಡಮಾಡಿದ ನೂತನ ರಥವನ್ನು ಪಟ್ಟಣದ ಶರಣಮಠದ ಹತ್ತಿರ ಭಾನುವಾರ ಸಂಜೆ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಸ್ವಾಗತಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

blank

ಸುಮಗಂಲೆಯರ ಕಳಸದಾರತಿ, ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ಮಠಕ್ಕೆ ರಥ ಆಗಮಿಸಿತು. 10ನೇ ಕಾಡಸಿದ್ಧೇಶ್ವರ ಶ್ರೀಗಳ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಗಪ್ಪ ಜವಳಿ, ಪ್ರಕಾಶ ಅಂಕದ, ಚಿನ್ಮಯ ಬಾರಾಟಕ್ಕೆ, ಪ್ರಶಾಂತ ಜವಳಿ, ನಾಗೇಶಪ್ಪ ಪಾಗಿ, ಶಿವಾನಂದ ಜವಳಿ, ಸಾಗರ ಶೀಲವಂತ, ನವೀನ ಶೀಲವಂತ, ವೀರಣ್ಣ ಕುರಹಟ್ಟಿ, ಬಸವರಾಜ ಸಿಂದಗಿಮಠ, ಶಿವಯ್ಯ ಕಕ್ಕಯ್ಯನಮಠ, ವೀರಯ್ಯ ಚನ್ನಸಂಗಯ್ಯನಮಠ, ಅಮರ ತಾಂಡೂರ, ಪಿ.ಎಸ್. ಮೊಖಾಶಿ, ಆರ್.ಎಸ್. ದೇಸಾಯಿ, ಉಮೇಶ ತೆಗ್ಗಿ, ಸಿದ್ದಯ್ಯ ಮಠಪತಿ, ವಿ.ಎಸ್. ಹಿರೇಮಠ, ಸಿದ್ದನಗೌಡ ಪಾಟೀಲ, ಮುತ್ತನಗೌಡ ಕಾಳನ್ನವರ, ಪಾಂಡು ಕಟಗೇರಿ, ಮಂಜುನಾಥ ನೀಲವಾನಿ, ಮಹಾಂತೇಶ ಸೋಮನಗೌಡ, ಪ್ರಭುಲಿಂಗಯ್ಯ ಹಿರೇಮಠ, ಮಂಜುನಾಥ ಚಲವಾದಿ ಮತ್ತಿತರರಿದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank