RBI: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಬದಲಾಗಿದ್ದೇ ತಡ ಹೊಚ್ಚ ಹೊಸ ಬದಲಾವಣೆಗಳು ಜಾರಿಗೆ ಬರಲು ಸಜ್ಜಾಗಿವೆ. ಇತ್ತೀಚೆಗಷ್ಟೇ ಐದು ವರ್ಷಗಳ ಬಳಿಕ ರೆಪೋ ದರ ಕಡಿತಗೊಂಡಿದ್ದು, ಇದೀಗ ಹೊಸ 50 ರೂ. ನೋಟುಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ. ಈಗಾಗಲೇ ನೂತನ ಗರ್ವನರ್ ಸಹಿ ಹಾಕಿರುವ ನೋಟುಗಳು ಮುದ್ರಣಗೊಂಡಿದ್ದು, ಮಾರುಕಟ್ಟೆಗೆ ಲಗ್ಗೆಯಿಡಲು ಎದುರುನೋಡುತ್ತಿವೆ.
ಇದನ್ನೂ ಓದಿ: ಈ ಚಿತ್ರಕ್ಕೆ ಪ್ರಭಾಸ್ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ; ಸಿನಿಮಾ ಯಾವುದು ಗೊತ್ತೆ?: ಕಾರಣ ಹೀಗಿದೆ.. | Prabhas
ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ 50 ರೂ. ಕರೆನ್ಸಿ ನೋಟನ್ನು ಹೊಸದಾಗಿ ನೇಮಕಗೊಂಡ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಮಾಡಿದ್ದಾರೆ. 13 ಡಿಸೆಂಬರ್ 2024ರಲ್ಲಿ ಶಕ್ತಿಕಾಂತ ದಾಸ್ ಅವರ ನಿವೃತ್ತಿ ಬಳಿಕ ಮಲ್ಹೋತ್ರಾ ನೂತನ ಆರ್‌ಬಿಐ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಅದಾಗಿ ಕೆಲವೇ ತಿಂಗಳಲ್ಲಿ ರೆಪೋ ಹಾಗೂ ಹೊಸ 50 ರೂ. ನೋಟುಗಳ ವಿಚಾರ ಮುನ್ನೆಲೆಗೆ ಬಂದಿದೆ.
ಆರ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ನೋಟುಗಳ ಕುರಿತು ಘೋಷಣೆ ದೃಢಪಡಿಸಿದೆ. ಹೊಸದಾಗಿ ಬಿಡುಗಡೆಯಾದ 50 ರೂ. ಕರೆನ್ಸಿ ನೋಟುಗಳಲ್ಲಿ ಸಂಜಯ್ ಮಲ್ಹೋತ್ರಾ ಅವರ ಸಹಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮಹಾತ್ಮ ಗಾಂಧಿಯವರ ಭಾವಚಿತ್ರವು ಈ ಹಿಂದೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹಳೆಯ 50 ರೂ. ನೋಟುಗಳ ವಿನ್ಯಾಸಕ್ಕೆ ಅನುಗುಣವಾಗಿ ಮುಂದುವರಿಯಲಿದೆ. ಈ ಹಿಂದೆ ಜಾರಿಗೊಳಿಸಲಾದ 50 ರೂ. ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ಮೂಲಕ ಹಳೆಯ ನೋಟುಗಳು ಅಮಾನ್ಯ ಎಂಬ ವದಂತಿಗಳಿಗೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ.
ಇದನ್ನೂ ಓದಿ: S. Harish Press Meet | ಭಾರತೀಯ ಜನತಾ ಪಾರ್ಟಿ ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತದೆ
ಯಾರು ಈ ಸಂಜಯ್ ಮಲ್ಹೋತ್ರಾ?
ತಮ್ಮ ಆರು ವರ್ಷಗಳ ಸುದೀರ್ಘ ಅವಧಿಯನ್ನು ಪೂರ್ಣಗೊಳಿಸಿದ ಶಕ್ತಿಕಾಂತ ದಾಸ್, ಕಳೆದ ವರ್ಷ ಡಿಸೆಂಬರ್ 13ರಂದು ತಮ್ಮ ಸ್ಥಾನಕ್ಕೆ ಗುಡ್ಬೈ ಹೇಳಿದರು. ಅವರ ಬಳಿಕ ಸಂಜಯ್ ಮಲ್ಹೋತ್ರಾರನ್ನು ನೂತನ ಆರ್‌ಬಿಐ ಗವರ್ನರ್ ಆಗಿ ನೇಮಿಸಲಾಯಿತು. ಇದಕ್ಕೂ ಮೊದಲು, ಮಲ್ಹೋತ್ರಾ ಹಣಕಾಸು ಸೇವೆಗಳ ಇಲಾಖೆಯ (DFS) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1990ರ ರಾಜಸ್ಥಾನ ಕೇಡರ್‌ನ ಹಿರಿಯ ಅಧಿಕಾರಿಯಾಗಿದ್ದ ಮಲ್ಹೋತ್ರಾ ಅವರನ್ನು ನವೆಂಬರ್ 2020ರಲ್ಲಿ (REC) ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಯಿತು. ಅವರು ವಿದ್ಯುತ್ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಲ್ಹೋತ್ರಾ ಅವರನ್ನು 2022ರಲ್ಲಿ ಕೇಂದ್ರ ಸರ್ಕಾರವು ಆರ್‌ಬಿಐ ಗವರ್ನರ್ ಹುದ್ದೆಗೆ ನಾಮನಿರ್ದೇಶನ ಮಾಡಿತು. ಮೂರು ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್ ಆಗಿ ಅವರ ನೇಮಕವು ದೇಶದ ಹಣಕಾಸು ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಆರ್‌ಬಿಐ ಗವರ್ನರ್ ಆಗಿ ಅವರ ಮೊದಲ ಸಭೆಯಲ್ಲೇ, ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದರು. ಇದು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತು. ಇದರೊಂದಿಗೆ, ರೆಪೊ ದರವು ಶೇ.6.5ರಿಂದ ಶೇ.6.25ಕ್ಕೆ ಇಳಿದಿದೆ. 12ನೇ ನೀತಿ ಪರಿಶೀಲನೆಯ ನಂತರ ಇದು ಮೊದಲ ರೆಪೊ ದರ ಕಡಿತ ಎಂಬುದು ಗಮನಾರ್ಹ,(ಏಜೆನ್ಸೀಸ್).