ಬೀಳುವ ಮಂಜುವಿನಿಂದ ವಿದ್ಯುತ್ ಉತ್ಪಾದಿಸುವ ವಿನೂತನ ಸಾಧನ ಕಂಡು ಹಿಡಿದ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು

ಲಾಸ್​​ಏಂಜಲೀಸ್​​: ಬೀಳುವ ಮಂಜುವಿನ ಸಹಾಯದಿಂದ ವಿದ್ಯುತ್​​​ ಉತ್ಪಾದನೆ ಮಾಡುವ 3ಡಿ ಪ್ರಿಟಿಂಗ್ ಬಳಕೆಯ ವೈಜ್ಞಾನಿಕ​​​​​​​ ಸಾಧನವನ್ನು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ಮತ್ತು ಲಾಸ್​​ ಏಂಜಲೀಸ್​​​​ ವಿಜ್ಞಾನಿಗಳು ಸಂಶೋಧಿಸಿದ್ದಾರೆ.


ಇದೊಂದು ವಿನೂತನ ಸಂಶೋಧನೆಯಾಗಿದ್ದು, ಬೀಳುವ ಮಂಜು ಸಿಲಿಕಾನ್​ ಅನ್ನು ಸ್ಪರ್ಶಿಸಿದ ನಂತರ ವಿದ್ಯುತ್​ ಶಕ್ತಿ ಬಿಡುಗಡೆಯಾಗಲಿದ್ದು, ವಿಶಿಷ್ಟ ಉಪಕರಣ ಅದನ್ನು ಸೆರೆಹಿಡಿದು ವಿದ್ಯುತ್​ ಆಗಿ ಪರಿವರ್ತಿಸಲಿದೆ. ಇದನ್ನು ಅಥ್ಲೀಟ್​ಗಳ ಸಾಮರ್ಥ್ಯವನ್ನು ಅಳೆಯಲು ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಶೂಗಳಿಗೆ ಪ್ರಾಯೋಗಿಕವಾಗಿ ಅಳವಡಿಸಿ ಯಶಸ್ವಿಯಾಗಿದ್ದಾರೆ.