More

    ಭಾರತಕ್ಕೆ ನೆದರ್ಲೆಂಡ್ ಎದುರಾಳಿ

    ಭುವನೇಶ್ವರ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯಲ್ಲಿರುವ ಭಾರತದ ಪುರುಷರ ಹಾಕಿ ತಂಡ ಶನಿವಾರ ಮತ್ತು ಭಾನುವಾರ ನಡೆಯಲಿರುವ ಎಫ್​ಐಎಚ್ ಪ್ರೊ ಲೀಗ್ ಟೂರ್ನಿಯ ಮೊದಲ ಚರಣದಲ್ಲಿ ವಿಶ್ವ ನಂ.3 ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಆವೃತ್ತಿಯ ಎಫ್​ಐಎಚ್ ಪ್ರೊ ಲೀಗ್​ನಿಂದ ಹೊರಗುಳಿದಿದ್ದ ಭಾರತ, ಬಲಿಷ್ಠ ತಂಡಗಳ ಎದುರು ಸೆಣಸಾಟಕ್ಕೆ ಸಿದ್ಧತೆ ನಡೆಸಿದೆ.

    ಕಳಿಂಗಾ ಸ್ಟೇಡಿಯಂನಲ್ಲಿ 2019ರ ಚಾಂಪಿಯನ್ ಹಾಗೂ ಯುರೋಪಿಯನ್ ಕಂಚಿನ ಪದಕ ವಿಜೇತ ನೆದರ್ಲೆಂಡ್ ಎದುರು ಆರಂಭಿಕ ಎರಡು ಪಂದ್ಯಗಳನ್ನಾಡಲಿದೆ. ವಿಶ್ವದ ಅಗ್ರ ತಂಡಗಳು ಲೀಗ್​ನಲ್ಲಿ ಆಡುತ್ತಿದ್ದು, ವಿವಿಧ ಚರಣಗಳಲ್ಲಿ ತವರು ಹಾಗೂ ಎದುರಾಳಿ ತವರಿನಲ್ಲಿ ಪಂದ್ಯಗಳು ನಡೆಯಲಿವೆ.

    2018ರ ವಿಶ್ವಕಪ್ ಎಂಟರ ಘಟ್ಟದ ಪಂದ್ಯದಲ್ಲಿ ನೆದರ್ಲೆಂಡ್ ಎದುರು ಅನುಭವಿಸಿದ ಸೋಲಿಗೂ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಉಭಯ ತಂಡಗಳ ಹಿಂದಿನ 10 ಪಂದ್ಯಗಳಲ್ಲಿ ಸಮಬಲದ ಹೋರಾಟ ನಡೆಸಿವೆ. ಭಾರತ 4, ನೆದರ್ಲೆಂಡ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಒಂದು ಪಂದ್ಯ ಡ್ರಾಗೊಂಡಿದೆ.

    ಭಾರತ ಪೂರ್ಣಬಲದ ತಂಡ: ಆತಿಥೇಯ ಭಾರತ ಪೂರ್ಣ ಪ್ರಮಾಣದ ತಂಡವನ್ನು ಕಣಕ್ಕಿಳಿಸುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲ ಸಮಯದಿಂದ ತಂಡದಿಂದ ಹೊರಗುಳಿದಿದ್ದ ಮಿಡ್

    ಫೀಲ್ಡರ್​ಗಳಾದ ಚಿಂಗ್ಲೇನ್​ಸನಾ ಸಿಂಗ್ ಹಾಗೂ ಸುಮಿತ್ ಮರಳಿರುವುದು ತಂಡದ ಬಲ ಹೆಚ್ಚಿ ಸಿದೆ. ಇದರಿಂದ ವಿಶ್ವ ನಂ. 5 ಭಾರತ ತಂಡ ಬಹುತೇಕ

    ಅನುಭವಿ ಪಡೆ ಹೊಂದಿದೆ. ಭಾರತ ತಂಡ ನೆದರ್ಲೆಂಡ್ ಬಳಿಕ, ವಿಶ್ವ ಚಾಂಪಿಯನ್ ಬೆಲ್ಜಿಯಂ (ಫೆ. 8-9), ಆಸ್ಟ್ರೇಲಿಯಾ (ಫೆ.22-23) ತಂಡಗಳನ್ನು ಎದುರಿಸಲಿದೆ. ಬಳಿಕ ಎದುರಾಳಿ ತಂಡಗಳ ತವರಿನಲ್ಲಿ ಆಡಲು ಪ್ರಯಾಣ ಬೆಳೆಸಲಿದೆ. -ಪಿಟಿಐ

    ಒಲಿಂಪಿಕ್ಸ್ ಸಿದ್ಧತೆಗೆ ಪ್ರೊ ಲೀಗ್ ಉತ್ತಮ ವೇದಿಕೆ. ಆರಂಭಿಕ ಹಂತದಲ್ಲಿ ಬಲಿಷ್ಠ ತಂಡಗಳೇ ಎದುರಾಗಿವೆ. ತಂಡದ ಸಂಯೋಜನೆಗೆ ಈ ಟೂರ್ನಿ ಉಪಯುಕ್ತವಾಗಲಿದೆ.

    | ಗ್ರಹಾಂ ರೀಡ್ ಭಾರತ ತಂಡದ ಮುಖ್ಯ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts