ನೇತಾಜಿ ಕೊಡಗರಹಳ್ಳಿ-ಇಕೆಎನ್‌ಎಫ್.ಸಿ.ಕೋಳಿಕಡಾವು ಇರಟಿ ತಂಡಗಳಿಗೆ ಮುನ್ನಡೆ

blank

ಸುಂಟಿಕೊಪ್ಪ: ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 4ನೇ ದಿನವಾದ ಸೋಮವಾರ ನಡೆದ ಪಂದ್ಯಾವಳಿಯಲ್ಲಿ ನೇತಾಜಿ ಕೊಡಗರಹಳ್ಳಿ ಹಾಗೂ ಇಕೆಎನ್‌ಎಫ್.ಸಿ.ಕೋಳಿಕಡಾವು ಇರಟಿ ತಂಡಗಳು ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.

blank

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ ಯೂತ್ ಕ್ಲಬ್ ವತಿಯಿಂದ ಆಯೋಜಿಸಿರುವ 39ನೇ ವರ್ಷದ ಫುಟ್ಬಾಲ್ ಮೊದಲನೇ ಪಂದ್ಯಾವಳಿ ಆತಿಥೇಯ ಬ್ಲೂ ಬಾಯ್ಸ ಯೂತ್ ಕ್ಲಬ್ ಹಾಗೂ ಕೊಡಗರಹಳ್ಳಿ ನೇತಾಜಿ ತಂಡಗಳ ನಡುವೆ ನಡೆದ ಕೊಡಗರಹಳ್ಳಿ ನೇತಾಜಿ ತಂಡದ ಮೊದಲಾರ್ಧದಲ್ಲಿ 12ನೇ ನಿಮಿಷದಲ್ಲಿ ನಾಗೇಶ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.

ದ್ವೀತಿಯಾರ್ಧದಲ್ಲಿ 2ನೇ ನಿಮಿಷದಲ್ಲಿ ಕೊಡಗರಹಳ್ಳಿ ನೇತಾಜಿ ತಂಡದ ನಾಗೇಶ್ ಮತ್ತೊಂದು ಗೋಲು ಗಳಿಸುವ ಮೂಲಕ ಆತಿಥೇಯ ಬ್ಲೂಬಾಯ್ಸ ತಂಡಕ್ಕೆ ಒತ್ತಡವನ್ನು ಹೆಚ್ಚಿಸುತ್ತಿದ್ದಂತೆ ಎದುರಾಳಿ ಬ್ಲೂಬಾಯ್ಸ ತಂಡವು ಆಕ್ರಮಣ ಆಟಕ್ಕೆ ಮುಂದಾಗಿ 4ನೇ ನಿಮಿಷದಲ್ಲಿ 1 ಗೋಲುಗಳಿಸುವ ಮೂಲಕ ಗೋಲಿನ ಅಂತರವನ್ನು ಕಡಿಮೆಗೊಳಿಸಿಕೊಂಡರು.

ಆದರೆ ನೇತಾಜಿ ಉತ್ತಮ ಆಟವನ್ನು ಪ್ರದರ್ಶಿಸುತ್ತಿರುವ ಸಂದರ್ಭ ಬ್ಲೂ ಬಾಯ್ಸ ತಂಡದವರು ಎಸಗಿದ ತಪ್ಪಿನಿಂದ ನೇತಾಜಿ ಟ್ರೈಬ್ರೆಕರ್ ಅವಕಾಶ ದೊರೆತಿದ್ದು ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಚೇತನ್ ವಿಫಲಗೊಂಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು. 2-1 ಗೋಲುಗಳಿಂದ ನೇತಾಜಿ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ದ್ವಿತೀಯ ಪಂದ್ಯಾವಳಿಯು ಶೀತಲ್ ಎಫ್.ಸಿ ಮೈಸೂರು ಹಾಗೂ ಇಕೆಎನ್‌ಎಫ್.ಸಿ.ಕೋಳಿಕಡಾವು, ಇರಿಟಿ ತಂಡಗಳ ನಡುವೆ ನಡೆದು ಪ್ರಥಮಾರ್ಧದ ಇಕೆಎನ್‌ಎಫ್‌ಸಿ ಕೋಳಿಕಡಾವು 5ನೇ ನಿಮಿಷದಲ್ಲಿ ವಿಷ್ಣು 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ಹೇರಿದರು. ದ್ವೀತಿಯಾರ್ಧದಲ್ಲಿ ಇಕೆಎನ್‌ಎಫ್‌ಸಿ ಕೋಳಿಕಡಾವು ತಂಡದ ಮುನ್ನಡೆ ಆಟಗಾರ ಸುದೀಫ್ 13 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಒದಗಿಸಿದರು. ಎದುರಾಳಿ ಶೀತಲ್ ತಂಡವನ್ನು 2-0 ಗೋಲುಗಳಿಂದ ಸೋಲಿಸುವ ಮೂಲಕ ಇಕೆಎನ್‌ಎಫ್‌ಸಿ ಕೋಳಿಕಡಾವು ಇರಟಿ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಪಂದ್ಯಾವಳಿಯನ್ನು ಕೊಡಗು ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಚೆಂಡು ಒದೆಯುವ ಮೂಲಕ ಚಾಲನೆ ನೀಡಿದರು. ಕೆ.ಐ.ಶರೀಫ್, ಗ್ರಾ.ಪಂ.ಸದಸ್ಯ ಶಬ್ಬಿರ್ ಮತ್ತಿತರರು ಇದ್ದರು.

ಇಂದಿನ ಪಂದ್ಯಗಳು
ಮೊದಲ ಪಂದ್ಯ 3 ಗಂಟೆಗೆ
ನೇತಾಜಿ ಎಫ್.ಸಿ ಮಂಡ್ಯ / ಸಿಟಿಜನ್ ಉಪ್ಪಳ
ದ್ವಿತೀಯ ಪಂದ್ಯಾವಳಿ 4.30 ಗಂಟೆಗೆ
ಆಶೋಕ ಎಫ್‌ಸಿ ಮೈಸೂರು / ಪೈಟರ್ಸ್‌ ಎಫ್.ಸಿ. ಕುತೂಪರಂಬು

 

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank