ಪಿಸಿ ಹುದ್ದೆ ಪರೀಕ್ಷೆಗೆ 1836 ಮಂದಿ ಗೈರು

ಚಿಕ್ಕಮಗಳೂರು: ಮೂರು ಬಾರಿ ಮುಂದೂಡಿದ್ದ ಸಿವಿಲ್ ಕಾನ್​ಸ್ಟೇಬಲ್ ನೇಮಕಾತಿ ಲಿಖಿತ ಪ್ರವೇಶ ಪರೀಕ್ಷೆ ಭಾನುವಾರ ಗೊಂದಲವಿಲ್ಲದೆ ನಡೆಯಿತು.

ನಗರದ ಒಂಭತ್ತು ಕೇಂದ್ರಗಳಲ್ಲಿ ಏರ್ಪಡಿಸಿದ್ದ ಪರೀಕ್ಷೆಗೆ 4802 ಆಕಾಂಕ್ಷಿಗಳಿದ್ದರು. ಈ ಪೈಕಿ 2966 ಪರೀಕ್ಷೆ ಬರೆದರು. ಬೆಳಗ್ಗೆ 11.30ಕ್ಕೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1ಕ್ಕೆ ಪೂರ್ಣಗೊಂಡಿತು. ಹೊರ ಜಿಲ್ಲೆಗಳ ಅಭ್ಯರ್ಥಿಗಳು ಪರೀಕ್ಷೆ ಬರೆದರು.

ನಗರದ ಎಐಟಿ ಕಾಲೇಜು, ಐಡಿಎಸ್​ಜಿ ಸರ್ಕಾರಿ ಪದವಿ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು, ಸೇಂಟ್ ಜೋಸೆಫ್ ಹೈಸ್ಕೂಲ್, ಎಂಇಎಸ್ ಕಾಲೇಜು ಮತ್ತಿತರೆ ಕಡೆ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು.

ಬಿಗಿ ಬಂದೋಬಸ್ತ್:ಪರೀಕ್ಷೆ ಆರಂಭದ ಐದು ನಿಮಿಷ ಮೊದಲು ನಿಗದಿತ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರ ಸಮ್ಮುಖದಲ್ಲಿ ಪ್ರಶ್ನೆ ಪತ್ರಿಕೆ ಬಂಡ್ ಬಿಚ್ಚಿ ಪರಿಶೀಲಿಸಲಾಯಿತು. ಬೆಳಗ್ಗೆ 11.30ಕ್ಕೆ ಸರಿಯಾಗಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್​ಗಳನ್ನು ಕೊಡಲಾಯಿತು. ಬಂದೋಬಸ್ತ್​ಗೆ ಒಬ್ಬರು ಎಸ್ಪಿ, 10 ಡಿಎಸ್ಪಿ, 15 ಸಿಪಿಐ, 25 ಪಿಎಸ್​ಐ ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿ