16 C
Bangalore
Thursday, December 12, 2019

ಹಾವು, ಪಕ್ಷಿಗಳಿಗೆ ಬಲೆ ಕಂಟಕ

Latest News

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ...

ಡಿಸೆಂಬರ್ 14 ರಂದು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯಿಂದ ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಕೊಡಮಾಡುವ ಪ್ರಸಕ್ತ ಸಾಲಿನ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯು...

ಹರೀಶ್ ಮೋಟುಕಾನ, ಮಂಗಳೂರು
ಭೂಮಿಯ ಮೇಲೆ ಪ್ರತಿಯೊಂದು ಪ್ರಾಣಿ, ಪಕ್ಷಿ, ಸರಿಸೃಪಗಳಿಗೆ ಬದುಕುವ ಹಕ್ಕಿದೆ. ಆದರೆ ಮಾನವನ ನಿರ್ಲಕ್ಷೃದಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ.
ಮನೆ, ಜಾಗದ ಸುತ್ತ ಬೇಲಿಯಾಗಿ ಬಲೆಯನ್ನು ಬಳಸುವುದು, ಎಲ್ಲೆಂದರಲ್ಲಿ ಮೀನಿನ ಬಲೆಗಳನ್ನು ಎಸೆಯುವುದು, ಬಾವಿ, ಟ್ಯಾಂಕ್‌ಗಳಿಗೆ ಅಳವಡಿಸುವುದರಿಂದ ಹಾವು, ಪಕ್ಷಿಗಳು ಅದರಲ್ಲಿ ಸಿಲುಕಿ ಸಾಯುತ್ತಿವೆ. ಮಂಗಳೂರು ನಗರದಲ್ಲಿ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಐದು ಹಾವುಗಳನ್ನು ಒಂದೇ ವಾರದಲ್ಲಿ ಪ್ರಾಣಿ ಪ್ರೇಮಿ ತೌಸಿಫ್ ಅಹಮ್ಮದ್ ರಕ್ಷಿಸಿ, ಉಪಚರಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ.
ಜನವಸತಿ ಇರುವಲ್ಲಿ ಹಾವುಗಳು ಬಲೆಗೆ ಸಿಲುಕಿ ಒದ್ದಾಡುವುದು ಗಮನಕ್ಕೆ ಬರುತ್ತದೆ. ಮೈದಾನ, ಚರಂಡಿ ಮೊದಲಾದ ಕಡೆ ಬಲೆಗೆ ಹಾವುಗಳು ಸಿಲುಕಿಕೊಂಡರೆ ಯಾರಿಗೂ ತಿಳಿಯುವುದಿಲ್ಲ. ವಾರದ ತನಕ ಒದ್ದಾಡಿ ಕೊನೆಗೆ ಸಾಯುತ್ತವೆ. ಗಮನಕ್ಕೆ ಬಂದರೆ ಅವುಗಳನ್ನು ರಕ್ಷಿಸಬಹುದು. ಆದರೆ, ಇದು ಸವಾಲಿನ ಕೆಲಸ. ಹಲವು ದಿನಗಳಿಂದ ಒದ್ದಾಡಿ ಗಾಯ ಮಾಡಿಕೊಂಡು, ಆಹಾರ ಸೇವಿಸದೆ ಬಹಳಷ್ಟು ಸಿಟ್ಟಿನಲ್ಲಿರುತ್ತವೆ. ತುಂಬಾ ಎಚ್ಚರಿಕೆಯಿಂದ ಅವುಗಳನ್ನು ಬಲೆಯಿಂದ ಬಿಡಿಸಬೇಕಾಗುತ್ತದೆ.

ಪಕ್ಷಿಗಳಿಗೂ ಕಂಟಕ: ಬಲೆಗಳು ಹಾವುಗಳಿಗೆ ಮಾತ್ರವಲ್ಲ, ಗುಬ್ಬಚ್ಚಿ, ಪಾರಿವಾಳ, ಗಿಡುಗ, ಹದ್ದುಗಳ ಪ್ರಾಣಕ್ಕೂ ಕಂಟಕವಾಗುತ್ತಿದೆ. ಪಕ್ಷಿಗಳ ಕಾಲಿಗೆ ಬಲೆ ಸಿಲುಕಿಕೊಂಡು ಅವು ಹಾರುವಾಗ ಮರದ ಕೊಂಬೆಗೆ ಸಿಲುಕುತ್ತದೆ. ಬಿಡಿಸಿಕೊಳ್ಳಲಾಗದೆ ನೇತಾಡಿ ಸಾಯುತ್ತವೆ. ಬಂದರು ಪ್ರದೇಶ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ, ಮೀನುಗಾರರು ವಾಸ ಮಾಡುವಲ್ಲಿ ಹೆಚ್ಚಾಗಿ ಇಂತಹ ನಿರುಪಯುಕ್ತ ಬಲೆಗಳನ್ನು ಎಸೆದಿರುತ್ತಾರೆ. ಆದ್ದರಿಂದ ಯಾರು ಕೂಡ ಬಲೆಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹಾವು, ಪಕ್ಷಿಗಳ ಪ್ರಾಣಕ್ಕೆ ಕಂಟಕ ಉಂಟು ಮಾಡದೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತೌಸಿಫ್ ಮನವಿ ಮಾಡಿದ್ದಾರೆ.
ಕೆಲದಿನಗಳ ಹಿಂದೆ ತಣ್ಣೀರುಬಾವಿಯಲ್ಲಿ ಆಮೆಯೊಂದು ಸಮುದ್ರ ಕಿನಾರೆಗೆ ಬಂದು ಬಿದ್ದಿದ್ದು, ಅದು ಗಮನಕ್ಕೆ ಬರುವಾಗ ಸತ್ತು ಹೋಗಿತ್ತು. ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದಾಗ ಮೀನಿನ ಬಲೆಗೆ ಸಿಲುಕಿ ಮೃತಪಟ್ಟಿರುವುದು ದೃಢಪಟ್ಟಿತ್ತು.

ರಕ್ಷಣೆ ಎಲ್ಲೆಲ್ಲಿ?: ಪ್ರಾಣಿ ಪ್ರೇಮಿ ತೌಸಿಫ್ ಅಹಮ್ಮದ್ ಕಳೆದೊಂದು ವಾರದ ಅವಧಿಯಲ್ಲಿ ಕದ್ರಿಯಲ್ಲಿ ಹೆಬ್ಬಾವು, ಲ್ಯಾಂಡ್ಸ್‌ಲಿಂಕ್ಸ್‌ನಲ್ಲಿ ನಾಗರ ಹಾವು, ಕೊಡಿಯಾಲಗುತ್ತು ಹಾಗೂ ಲಾಲ್‌ಭಾಗ್‌ನಲ್ಲಿ ಕೇರೆ ಹಾವು, ಕನ್ನಡಿ ಹಾವುಗಳನ್ನು ರಕ್ಷಿಸಿದ್ದಾರೆ. ಕೊಡಿಯಾಲಗುತ್ತುನಲ್ಲಿ ನೆಟ್‌ಗೆ ಸಿಲುಕಿದ್ದ ಕೇರೆಯನ್ನು ಬಿಡಿಸಲು ತೌಸಿಫ್ 20 ನಿಮಿಷ ಕಾರ್ಯಾಚರಣೆ ನಡೆಸಿದ್ದಾರೆ. ಅದರ ಹಲ್ಲಿಗೂ ಬಲೆ ಸಿಲುಕಿಕೊಂಡಿತ್ತು. ದೇಹದ ತುಂಬೆಲ್ಲಾ ಗಾಯವಾಗಿತ್ತು. ಹೆಬ್ಬಾವು ಕೂಡ ಎರಡು ದಿನಗಳ ಹಿಂದೆ ನೆಟ್‌ನೊಳಗೆ ಸಿಲುಕಿಕೊಂಡು ಒದ್ದಾಡಿ ಗಾಯವಾಗಿತ್ತು. ತೌಸಿಫ್ ಬಲೆಯಿಂದ ಬಿಡಿಸಿ ಗಾಯವನ್ನು ಶುಚಿಗೊಳಿಸಿ ಔಷಧ ಹಚ್ಚಿ, ಬ್ಯಾಂಡೇಜ್ ಮಾಡಿ ಉಪಚರಿಸಿ ಬಿಟ್ಟಿದ್ದಾರೆ.

ಮಂಗಳೂರು ನಗರದಲ್ಲಿ ಬಲೆಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಹಾವು, ಪಕ್ಷಿಗಳ ಪ್ರಾಣಕ್ಕೆ ಕಂಟಕವನ್ನುಂಟು ಮಾಡುತ್ತಿದೆ. ಒಂದೇ ವಾರದಲ್ಲಿ ವಿವಿಧ ಜಾತಿಯ 5 ಹಾವುಗಳನ್ನು ರಕ್ಷಣೆ ಮಾಡಿದ್ದೇನೆ. ಅವುಗಳನ್ನು ಉಪಚರಿಸಿ ಇದ್ದ ಸ್ಥಳದಲ್ಲಿಯೇ ಬಿಟ್ಟರೆ ಮಾತ್ರ ಬದುಕುತ್ತವೆ. ಸಾರ್ವಜನಿಕರು ಉಪಯೋಗವಿಲ್ಲದ ಬಲೆಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕುವುದೇ ಇದಕ್ಕೆ ಸೂಕ್ತ ಪರಿಹಾರ.
ತೌಸಿಫ್ ಅಹಮ್ಮದ್, ಪ್ರಾಣಿ ಪ್ರೇಮಿ

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...