Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಒಲಿಯುತಿದೆ ನೇಪಾಳ…

Sunday, 13.05.2018, 3:04 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ನೆರೆರಾಷ್ಟ್ರಗಳಿಗೆ ಪ್ರಥಮ ಆದ್ಯತೆ ನೀತಿ ಅನುಸರಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ (ಮೇ 11,12) ನೇಪಾಳ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ. ‘ರಾಮಾಯಣ ಸರ್ಕ್ಯೂಟ್’ ಯೋಜನೆ ಪ್ರಕಾರ ಜನಕಪುರಿ-ಅಯೋಧ್ಯಾ ವಿಶೇಷ ಬಸ್ ಸಂಚಾರಕ್ಕೂ ಚಾಲನೆ ನೀಡಲಾಗಿದೆ. ಮೋದಿಯವರು ಜನಕಪುರಿ, ಮುಕ್ತಿನಾಥ ಮುಂತಾದ ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಧಾರ್ವಿುಕ ಮಹತ್ವದ ಪ್ರವಾಸದಂತೆ ಕಂಡುಬಂದರೂ ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ರೂಪುಕೊಡುವ ಕೆಲಸ ಮತ್ತೆ ಚುರುಕಾಗಿದೆ.

ಉಭಯ ದೇಶಗಳ ನಡುವಿನ ತಪು್ಪಗ್ರಹಿಕೆಗಳು ನಿವಾರಣೆಯಾಗಿವೆ ಎಂದು ಮೋದಿಯವರು ಹೇಳಿದ್ದು ದ್ವಿಪಕ್ಷೀಯ ಬಾಂಧವ್ಯದ ನೆಲೆಗಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ. ‘ನೇಪಾಳದ ನೆಲವನ್ನು ಭಾರತ-ವಿರೋಧಿ ಚಟುವಟಿಕೆಗೆ ಬಿಟ್ಟುಕೊಡುವುದಿಲ್ಲ’ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ವ ಒಲಿ ಸ್ಪಷ್ಟವಾಗಿ ಹೇಳಿದ್ದು ಅಲ್ಲಿನ ಕಮ್ಯೂನಿಸ್ಟ್ ಸರ್ಕಾರದ ಬದಲಾದ ನಿಲುವನ್ನು ಬಿಂಬಿಸಿದೆ.

ಇದಕ್ಕೂ ಮುನ್ನ, ನೇಪಾಳ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿ(15.02.2018ರಿಂದ) ಹಿಡಿದಿರುವ ಖಡ್ಗ ಪ್ರಸಾದ್ ಶರ್ಮಾ ಒಲಿ(ಕೆ.ಪಿ.ಶರ್ವ ಒಲಿ) ಕಳೆದ ತಿಂಗಳ ಮಧ್ಯಭಾಗದಲ್ಲಿ ಭಾರತಕ್ಕೆ ಭೇಟಿ ನೀಡಿದ ಬಳಿಕ, ಭೇಟಿ ಫಲಪ್ರದ ಎಂಬ ಆಶಾದಾಯಕ ಮಾತುಗಳನ್ನಾಡಿದ್ದರು. ಈ ಎಲ್ಲ ಬೆಳವಣಿಗೆ ನೋಡಿದರೆ, ಒಲಿ ನೇತೃತ್ವದ ಸರ್ಕಾರದ ಚೀನಾ ಒಲವು ಕಡಿಮೆಯಾಯಿತೇ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಾಗಿ, ಕಳೆದ ಅವಧಿಯಲ್ಲಿ(12.10.2015-04.08.2016) ಒಲಿ ನಿಲುವು ಹೇಗಿತ್ತು ಎಂಬುದರ ಅವಲೋಕನವೂ ಅವಶ್ಯ. ನೇಪಾಳದಲ್ಲಿ ತರಾಯ್- ಮದೇಶಿ ಸಮುದಾಯದವರನ್ನು ಕಡೆಗಣಿಸಿ 2015ರಲ್ಲಿ ಅಂಗೀಕರಿಸಲಾದ ಹೊಸ ಸಂವಿಧಾನ ಪ್ರಕಾರ ಪ್ರಧಾನಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ನಾಯಕ ಕೆ.ಪಿ.ಶರ್ವ ಒಲಿ 587 ಮತಗಳ ಪೈಕಿ 338 ಮತ ಪಡೆದು ಗೆಲುವು ಸಾಧಿಸಿದರು. ಒಲಿ ಕಮ್ಯೂನಿಸ್ಟ್ ಪಕ್ಷದ ನಾಯಕ ಎಂಬುದಕ್ಕಿಂತಲೂ, ‘ಸಂಪ್ರದಾಯವಾದಿ ಸಿದ್ಧಾಂತ’ದ ಕಡೆಗೆ ಒಲವುಳ್ಳವರು. ಆ ವಿವಾದಾತ್ಮಕ ಸಂವಿಧಾನ ರಚನೆಯಲ್ಲಿ ಒಲಿಯದ್ದೂ ಪಾತ್ರವಿತ್ತು. ಇಲ್ಲವರು ಸಾಂಪ್ರದಾಯಿಕ ಸಿದ್ಧಾಂತವಾದಿಯ ಪಾತ್ರವನ್ನು ನಿಭಾಯಿಸಿದ್ದರು. ಮದೇಶಿಗಳನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸುವ ವಿಷಯವನ್ನು ನಿರ್ಲಕ್ಷಿಸಿದ್ದರಲ್ಲಿ ಇವರ ಪಾಲೇ ಹೆಚ್ಚು.

ಅದೊಂದು ಕಾಲದಲ್ಲಿ ಭಾರತೀಯ ಸಂಸ್ಥೆಗಳು, ಭಾರತದ ಬಗ್ಗೆ ಒಲಿ ಇನ್ನಿಲ್ಲದ ಒಲವು ವ್ಯಕ್ತಪಡಿಸಿದ್ದರು. ರಾಷ್ಟ್ರೀಯವಾದವನ್ನು ಬಲವಾಗಿ ಪ್ರತಿಪಾದಿಸಿದ್ದರು. ತರಾಯ್ ಪ್ರಾಂತ್ಯವನ್ನು ವಿಭಜಿಸಿ ಎರಡು ಪ್ರಾಂತ್ಯವನ್ನಾಗಿ ರೂಪಿಸುವುದರ ವಿರುದ್ಧ ಧ್ವನಿ ಎತ್ತಿದ್ದ ಒಲಿ, ಒಂದೊಮ್ಮೆ ವಿಭಜಿಸಿದರೆ ಭಾರತ ಈ ಪ್ರಾಂತ್ಯಗಳ ಮೇಲೆ ಪ್ರಾಬಲ್ಯ ಸಾಧಿಸಲಿದೆ ಎಂದು ಮಧ್ಯಸ್ಥಿಕೆದಾರರ ಬಳಿ ಗುಟ್ಟಾಗಿ ಹೇಳಿಕೊಂಡಿದ್ದೂ ವರದಿಯಾಗಿತ್ತು. ಒಲಿ ತಮ್ಮ ರಾಜಕೀಯ ಸಾಧನೆಗಾಗಿ ತೀರಾ ಎಡಪಂಥೀಯ ಚಿಂತನೆ ಹೊಂದಿದ ಪಕ್ಷ ಹಾಗೂ ತೀರಾ ಬಲಪಂಥೀಯವಾದದ ಪಕ್ಷಗಳನ್ನು ಒಟ್ಟು ಸೇರಿಸಿ ಮೈತ್ರಿ ರಚನೆಯಾಗುವಂತೆ ನೋಡಿಕೊಂಡರು. ನೇಪಾಳದ ರಾಜಕೀಯದಲ್ಲಿ ಇಂಥದ್ದೊಂದು ಸಾಧನೆ ಅಪರೂಪದ್ದಾಗಿದ್ದು, ಮಾವೋವಾದಿಗಳ ಮುಖಂಡ ಪ್ರಚಂಡ ಹಾಗೂ ಪ್ರಭುತ್ವ ಪರವಾಗಿರುವ ಬಲಪಂಥೀಯ ನಾಯಕ ಕಮಲ್ ಥಾಪಾ ಜತೆ ಸೇರುವಂತಾಗಿದೆ. ಈ ಮೈತ್ರಿ ಹಿಂದಣ ಉದ್ದೇಶ ಮದೇಶಿವಿರೋಧಿ ಹಾಗೂ ಭಾರತ ವಿರೋಧಿ ಚಿಂತನೆಯಾಗಿತ್ತು.

2015ರ ಸೆಪ್ಟೆಂಬರ್ 20ರಂದು ನೇಪಾಳ ಜಾತ್ಯತೀತ ರಾಷ್ಟ್ರ ಎಂದು ಘೊಷಿಸುವ ಸಂವಿಧಾನವನ್ನು ಒಲಿ ಸರ್ಕಾರ ಅಂಗೀಕರಿಸಿತು. 2007ರಿಂದ ಜಾರಿಯಲ್ಲಿದ್ದ ತಾತ್ಕಾಲಿಕ ಸಂವಿಧಾನ ಅಲ್ಲಿಗೆ ಅನೂರ್ಜಿತಗೊಂಡಿತು. ಆಗ, ಹಿಂದು ರಾಷ್ಟ್ರ ಎಂದು ಘೊಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಹಿಂದುವಾದಿಗಳು ಕೂಡ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಭಾರತೀಯ ಮೂಲದವರು ಎನ್ನಲಾದ ನೇಪಾಳೀಯರೇ ಆದ ಮದೇಶಿ ಸಮುದಾಯದವರನ್ನು ಪ್ರಗತಿಪರ ಎನಿಸಿಕೊಂಡಿರುವ ಸಂವಿಧಾನದಲ್ಲಿ ಕಡೆಗಣಿಸಲಾಗಿದೆ. ಇದರಿಂದ ಆ ಸಮುದಾಯದವರು ಬೀದಿಗಿಳಿದು ಪ್ರತಿಭಟಿಸಿದ್ದರು. ಇದು ಅಲ್ಲಿ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದಲ್ಲದೇ, ನೆರೆಯ ಭಾರತದ ಜತೆಗೆ ರಾಜತಾಂತ್ರಿಕ ವಿರಸಕ್ಕೂ ನಿಮಿತ್ತವಾಗಿಬಿಟ್ಟಿತ್ತು. ಆ ಸಂದರ್ಭದಲ್ಲಿ ಒಲಿ ಅನೇಕ ವಿಚಾರಗಳಲ್ಲಿ ಚೀನಾ ನೆರವು ಪಡೆದುಕೊಂಡಿದ್ದರು. ಈಗ ಪ್ರಧಾನಿ ಹುದ್ದೆಯ ಎರಡನೇ ಅವಧಿಯಲ್ಲಿ ಅದನ್ನು ತಿದ್ದಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ನೇಪಾಳ ಎಂಬ ಪುಟ್ಟ ನೆರೆಯ ದೇಶದ ಜತೆಗಿನ ಸ್ನೇಹ-ಬಾಂಧವ್ಯ ಎರಡೂ ಭಾರತದ ಮಟ್ಟಿಗೆ ರಾಜತಾಂತ್ರಿಕ, ರಕ್ಷಣಾತ್ಮಕವಾಗಿ ಅತ್ಯಂತ ಮಹತ್ವದ್ದು. ಉಭಯ ದೇಶಗಳ ನಡುವೆ ದಶಕಗಳ ಅವಿನಾಭಾವ ಸಂಬಂಧವಿದ್ದು, 1950ರಲ್ಲಿ ಶಾಂತಿ ಹಾಗೂ ಗೆಳೆತನದ ಒಪ್ಪಂದ ಏರ್ಪಟ್ಟಿದೆ. 1952ರಲ್ಲಿ ಚೀನಾ ಬೆಂಬಲಿತ ನೇಪಾಳದ ಕಮ್ಯೂನಿಸ್ಟ್ ಪಕ್ಷ ಅಧಿಕಾರ ಹಿಡಿದಿದ್ದರಿಂದ ನೇಪಾಳ ಈ ಒಪ್ಪಂದವನ್ನು ಕಡೆಗಣಿಸಿತು. ಕೆಲವರು ಈ ಒಪ್ಪಂದ ‘ಅಸಮಾನತೆಯದ್ದು’, ನೇಪಾಳದ ಪ್ರಜಾಪ್ರಭುತ್ವಕ್ಕೆ ವಿರೋಧವಾದುದು ಎಂದು ಆರೋಪಿ ಸಿದ್ದರ ಪರಿಣಾಮ ಒಪ್ಪಂದ ನನೆಗುದಿಗೆ ಬಿತ್ತು. ಭಾರತದ ಪ್ರಧಾನಿ ಮೋದಿಯವರ ಮೊದಲ ಭೇಟಿಯಲ್ಲಿ ಈ ಒಪ್ಪಂದ ನವೀಕರಿಸುವ ಬಗ್ಗೆ ಸುಳಿವು ನೀಡಿದ್ದರು. ಆದರೆ, ಅದಕ್ಕೆ ನೇಪಾಳ ದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ಗಡಿ ವಿಚಾರ ಸೇರಿ ಎಲ್ಲ ವಿಷಯಗಳನ್ನೂ ಮತ್ತೊಮ್ಮೆ ರ್ಚಚಿಸಿ ಹೊಸದಾಗಿ ಸ್ನೇಹ ಒಪ್ಪಂದಕ್ಕೆ ಸಹಿ ಹಾಕುವ ವಿಚಾರ ಮುನ್ನೆಲೆಗೆ ಬಂದಿದೆ.

ಒಲಿ ವೈಯಕ್ತಿಕ ವಿಚಾರಕ್ಕೆ ಬಂದರೆ, ತೆರಾತುಮ್ಲ್ಲಿ 1952ರ ಫೆ.22ರಂದು ಜನನ. ತಂದೆ ಮೋಹನ್ ಪ್ರಸಾದ್, ತಾಯಿ ಮಧುಮಾಯಾ. ಧ್ರುವ ಎಂಬುದು ಬಾಲ್ಯದ ಹೆಸರು. ಅವರಿಗೆ ನಾಲ್ಕು ವರ್ಷ ಪ್ರಾಯವಿದ್ದಾಗ ತಾಯಿ ಸಿಡುಬಿನ ಕಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡರು. ಬಳಿಕ ಅಜ್ಜಿ ರಾಮ್ಮಯ ಆರೈಕೆಯಲ್ಲಿ ಬೆಳೆದರು. ಶಾಲೆಗೆ ಸೇರಿಸುವಾಗ ಖಡ್ಗ ಪ್ರಸಾದ್ ಎಂದು ಪಾಲಕರು ಹೆಸರು ಬದಲಾಯಿಸಿದರು. ಪ್ರಾಥಮಿಕ ಶಿಕ್ಷಣ ತೆರಾತುಮ್ಲ್ಲಿ ಪಡೆದುಕೊಂಡರು. ಬಳಿಕ ಕುಟುಂಬ ಝಾಪಾಕ್ಕೆ ಬಂದು ನೆಲೆಸಿದ ಕಾರಣ ಮುಂದಿನ ಬದುಕೆಲ್ಲ ಅಲ್ಲೇ ಆಯಿತು. ಒಂಭತ್ತನೇ ತರಗತಿಯಲ್ಲಿ ಕಲಿಕೆ ನಿಲ್ಲಿಸಿದ ಒಲಿ, ಹದಿನೈದನೇ ವರ್ಷಕ್ಕೆ ಕಮ್ಯೂನಿಸ್ಟ್ ಪಕ್ಷದ ರಾಜಕೀಯದತ್ತ ಒಲವು ಬೆಳೆಸಿಕೊಂಡು ಅದರ ಕೆಲಸಗಳಲ್ಲಿ ನಿರತರಾದರು. 1970ರಲ್ಲಿ ನೇಪಾಳಿ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ಸ್ವೀಕರಿಸಿದರು. ಅದೇ ವರ್ಷ ಮೊದಲ ಬಾರಿ ಸೆರೆವಾಸ ಅನುಭವಿಸಿದರು. 1971ರಲ್ಲಿ ಝಾಪ ಬಂಡುಕೋರರ ಗುಂಪಿನ ನಾಯಕತ್ವ ವಹಿಸಿದ ಅವರು, ಅನೇಕ ಜಮೀನುದಾರರ ಹತ್ಯೆ ಮಾಡಿದರು. 1973ರಿಂದ 1987ರ ತನಕ ಸೆರೆವಾಸ ಅನುಭವಿಸಿದರು. ಅಲ್ಲಿಂದ ಹೊರಬಂದು ಕಮ್ಯೂನಿಸ್ಟ್ ನಾಯಕಿ ರಾಧಿಕಾ ಶಾಖ್ಯಾರನ್ನು ವಿವಾಹವಾದರು. ರಾಜಕೀಯ ಕಾರ್ಯಸಾಧನೆಗಾಗಿ ಪಕ್ಷದ ಸಿದ್ಧಾಂತ ಮೀರಿದ ಹಲವು ಕಸರತ್ತುಗಳನ್ನು ಮಾಡಿರುವ ಒಲಿ, ‘ಈ ಅವಧಿಯಲ್ಲಿ ಏನೇನು ಮಾಡಲಿದ್ದಾರೆ?’ ಎಂಬ ಕುತೂಹಲವಂತೂ ಇದ್ದೇ ಇದೆ.

Leave a Reply

Your email address will not be published. Required fields are marked *

Back To Top