ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್

ಉಮದಿ (ಮಹಾರಾಷ್ಟ್ರ): ಸಮೀಪದ ಬಾಲಗಾವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿದ ಯೋಗ ಸಾಧನೆಯನ್ನು ಗುರುತಿಸಿ ‘ಯೋಗ ಯುನಿವರ್ಸಿಟಿ ಆ್ ದಿ ಅಮೆರಿಕಾಸ್’ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ನೇಪಾಳದ ಕಠ್ಮಂಡುವಿನಲ್ಲಿರುವ ಅಮೆರಿಕದ ಯುನಿವರ್ಸಿಟಿಯ ಬ್ಯಾಂಚ್‌ನಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ವಿವಿ ಕುಲಪತಿ ಡಾ. ಯೋಗಿ ದೇವರಾಜ ಅವರು ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.
ಸಂಕ್ಷಿಪ್ತ ಪರಿಚಯ : ಅಮೃತಾನಂದ ಸ್ವಾಮೀಜಿ ನಡೆದಾಡುವ ದೇವರಾದ ಸಿದ್ಧೇಶ್ವರ ಸ್ವಾಮೀಜಿ ಅವರ ಶಿಷ್ಯರಾಗಿದ್ದಾರೆ. ಕಳೆದ 3 ವರ್ಷಗಳಿಂದ ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಲಕ್ಷಕ್ಕೂ ಅಧಿಕ ಜನರನ್ನು ಒಗ್ಗೂಡಿಸಿ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಯೋಗ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರಿಗೂ ಯೋಗದ ಮಹತ್ವ ಕುರಿತು ಅರಿವು ಮೂಡಿಸಿದ್ದಾರೆ.
ಕಳೆದ ವರ್ಷ ಗ್ರಾಮೀಣ ಯೋಗ ಮಹೋತ್ಸವದಲ್ಲಿ 1.10 ಲಕ್ಷ ಜನರನ್ನು ಸೇರಿಸಿ ‘ಲಿಮ್ಕಾ ಬುಕ್ ಆ್ ರೆಕಾರ್ಡ್ಸ್’ ನಲ್ಲಿ ಬಾಲಗಾವ ಯೋಗ ಕಾರ್ಯಕ್ರಮ ಸೇರುವಂತೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶ್ವ ದಾಖಲೆಯ 4 ಪ್ರಶಸ್ತಿಗಳು ದೊರೆತಿವೆ.
ಅಮೃತಾನಂದ ಸ್ವಾಮೀಜಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,

ಅಮೆರಿಕದ ಯೋಗ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಕೇವಲ ನನಗೆ ಮಾತ್ರ ಸೀಮಿತವಲ್ಲ. ಇದು ಬಾಲಗಾವ ಗುರುದೇವಾಶ್ರಮ ಹಾಗೂ ಯೋಗ ಕಾರ್ಯಕ್ರಮದಲ್ಲಿ ಶ್ರಮಿಸಿದ ಎಲ್ಲರಿಗೂ ಸಂದ ಗೌರವವಾಗಿದೆ.
ಅಮೃತಾನಂದ ಸ್ವಾಮೀಜಿ
ನೇಪಾಳದ ಕಠ್ಮಂಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಹೇಳಿದ್ದು.

Leave a Reply

Your email address will not be published. Required fields are marked *