23 ಬಾರಿ ಎವರೆಸ್ಟ್ ಶಿಖರ ಏರಿದ ಧೀರ!

ಕಠ್ಮಂಡು: ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್​ನ್ನು ನೇಪಾಳದ ಕಾಮಿ ರಿಟಾ ಶೆರ್ಪಾ (49) ಎಂಬುವವರು 23 ಬಾರಿ ಏರುವ ಮೂಲಕ ದಾಖಲೆ ನಿರ್ವಿುಸಿದ್ದಾರೆ.

ಶೆರ್ಪಾ ಆಗಿರುವ ಇವರು, 8 ಪರ್ವತಾರೋಹಿಗಳ ಜತೆ ಚೀನಾ ಮಾರ್ಗದ ಮೂಲಕ ಮಂಗಳವಾರ ಎವರೆಸ್ಟ್ ಶಿಖರ ಏರಲು ಪ್ರಾರಂಭಿಸಿದ್ದರು.

ಬುಧವಾರ ಬೆಳಗ್ಗೆ 7.50ರ ವೇಳೆಗೆ ಶಿಖರದ ತುದಿ ತಲುಪಿದ್ದಾರೆ. ಕಳೆದ ಬಾರಿ ಅವರು 22ನೇ ಬಾರಿ ಶಿಖರ ಏರಿ ತಮ್ಮದೇ ದಾಖಲೆಯನ್ನು ಮುರಿದಿದ್ದರು. 1994ರಲ್ಲಿ ಇವರು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದ್ದರು. ಪಾಕಿಸ್ತಾನದ ಕೆ2 ಪರ್ವತ ಸೇರಿ ಸಾವಿರಾರು ಅಡಿ ಎತ್ತರದ ಅನೇಕ ಪರ್ವತಗಳನ್ನು ಏರಿದ್ದಾರೆ. ‘ನನ್ನ ಜೀವನದಲ್ಲಿ ಕನಿಷ್ಠ 25

ಬಾರಿ ಮೌಂಟ್ ಎವರೆಸ್ಟ್ ಶಿಖರ ಹತ್ತಬೇಕೆಂದುಕೊಂಡಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *