ಮಿನಿ ಟ್ರಕ್​ ನದಿಗುರುಳಿ 18 ಪ್ರಯಾಣಿಕರ ಸಾವು

ನೇಪಾಳ: ಮಿನಿ ಟ್ರಕ್​ವೊಂದು 400 ಮೀಟರ್​ ಎತ್ತರದಿಂದ ನದಿಗೆ ಬಿದ್ದು, 18 ಪ್ರಯಾಣಿಕರು ಮೃತಪಟ್ಟಿದ್ದಾರೆ. 16 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ನೇಪಾಳದ ಶಿಖಾರ್​ಬೇಸಿಯಿಂದ ಘ್ಯಾಂಗ್​ಫೆದಿ ಮಾರ್ಗದಲ್ಲಿ ತೆರಳುತ್ತಿದ್ದ ಮಿನಿ ಟ್ರಕ್​ ದುಪ್ಚೇಶ್ವರ್ ಪುರಸಭೆ ಬಳಿ ಚಾಲಕನ ನಿಯಂತ್ರಣ ತಪ್ಪಿ 400 ಮೀಟರ್​ ಎತ್ತರದಿಂದ ನದಿಗೆ ಬಿದ್ದು ಈ ದುರಂತ ಸಂಭವಿಸಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶುಕ್ರವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಾದ 30-40 ನಿಮಿಷಕ್ಕೆ ನಮಗೆ ಮಾಹಿತಿ ಲಭಿಸಿತು ಎಂದು ಜಿಲ್ಲಾ ಪೊಲೀಸ್​ ಅಧಿಕಾರಿ ಭೀಮ್​ಲಾಲ್​ ಭಟ್ಟಾರೈ ತಿಳಿಸಿದ್ದಾರೆ. (ಏಜೆನ್ಸೀಸ್)