ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!

ವಿಜಯವಾಡ: ಪರಸ್ಪರ ಪ್ರೀತಿಸಿ, ಹಿರಿಯ ಒಪ್ಪಿಗೆ ಪಡೆದು ಮದುವೆಯಾಗಿ ಸುಂದರ ಸಂಸಾರದ ನಡೆಸುತ್ತಿದ್ದ ನವದಂಪತಿಯ ಬಾಳಲ್ಲಿ ಕ್ರೂರ ವಿಧಿಯ ಪ್ರವೇಶದಿಂದ ಇಬ್ಬರ ಕನಸುಗಳು ನುಚ್ಚುನೂರಾಗಿ, ಪ್ರೇಮ ವಿವಾಹ ದುರಂತದಲ್ಲಿ ಅಂತ್ಯಗೊಂಡ ಕರುಣಾಜನಕ ಕತೆ ಇದು.

ಕೇವಲ ಮೂರು ತಿಂಗಳ ಹಿಂದಷ್ಟೇ ಪ್ರೇಮಿಗಳಿಬ್ಬರು ಮದುವೆಯಾಗಿದ್ದರು. ಇಷ್ಟಪಟ್ಟವರನ್ನೇ ಮದುವೆಯಾದ ಖುಷಿ ಇಬ್ಬರಲಿತ್ತು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿದ್ದ. ಇದೇ ದುಃಖದಲ್ಲಿದ್ದ ವಧು ಜ. 7ರ ಗುರುವಾರದಂದು ಆತ್ಮಹತ್ಯೆ ಶರಣಾಗಿದ್ದಾಳೆ. ಈ ಮೂಲಕ ಪ್ರೇಮಿಗಳಿಬ್ಬರ ಬದುಕು ವಿಧಿಯಾಟದಿಂದ ಘೋರ ಅಂತ್ಯಕಂಡಿದೆ.

ಇದನ್ನೂ ಓದಿರಿ: ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ವಿವರಣೆಗೆ ಬರುವುದಾದರೆ, ಆಂಧ್ರ ಪ್ರದೇಶದ ನೆಲ್ಲೂರ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ರಾಪೂರ್​ ವಲಯದ ಮಿತ್ತಪಲ್ಲಿ ಗ್ರಾಮದ ನಿವಾಸಿ ಶಿರಿಷಾ (30) ಜಿಜಿಎಸ್​ ಸ್ಥಳೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡುತ್ತಿದ್ದರು. ಶಿರಿಷಾಗೆ ಗುಡುರು ಅಯ್ಯವರಿ ಪಲೇನಿ ಮೂಲದ ಜಗದೀಶ್ ಎಂಬಾತನ ಪರಿಚಯವಾಗಿತ್ತು. ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಹಿರಿಯರ ಒಪ್ಪಿಗೆ ಪಡದೇ ಕಳೆದ ಅಕ್ಟೋಬರ್​ 29ರಲ್ಲಿ ಸಪ್ತಪದಿ ತುಳಿದಿದ್ದರು. ​

ಮದುವೆಯಾದ ಎರಡು ತಿಂಗಳವರೆಗೂ ದಂಪತಿ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದರು. ಆದರೆ, ಇಬ್ಬರ ಖುಷಿ ಹೆಚ್ಚು ದಿನ ಉಳಿಯಲೇ ಇಲ್ಲ. ಕೇವಲ ಎರಡೇ ತಿಂಗಳಲ್ಲಿ ಅಂದರೆ ಡಿಸೆಂಬರ್​ನಲ್ಲಿ ಜಗದೀಶ್​ ಹೃದಯಾಘಾತದಿಂದ ಸಾವಿಗೀಡಾಗಿದ್ದ. ಇದರಿಂದ ಶಿರಿಷಾ ಖಿನ್ನತೆಗೆ ಒಳಗಾಗಿದ್ದಳು. ತುಂಬಾ ಪ್ರೀತಿಸುತ್ತಿದ್ದ ಪತಿ ಹಾಗೂ ಕುಟುಂಬದ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ ವ್ಯಕ್ತಿ ಇನ್ನಿಲ್ಲವೆಂಬ ಚಿಂತೆಯಲ್ಲಿ ಶಿರಿಷಾ ಮುಳುಗಿದ್ದಳು. ಆಕೆಯನ್ನು ಸರಿಪಡಿಸಲು ಆಪ್ತರು ಮಾಡಬಾರದ ಪ್ರಯತ್ನವೆಲ್ಲ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ.

ಇದನ್ನೂ ಓದಿರಿ: ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಜನವರಿ 6ರಂದು ಶಿರಿಷಾಳನ್ನು ಆಕೆಯ ಜತೆಗಾತಿ ರಾಮದೇವಿ ತನ್ನ ಮನೆಗೆ ಕರೆದೊಯ್ದಿದ್ದಳು. ಮಾರನೇ ದಿನ ಅಂದರೆ ಜ. 7ರ ಸಂಜೆ ತನ್ನ ಕಣ್ಣುಗಳೆರಡು ಸುತ್ತತ್ತಿರುವಂತೆ ಭಾಸವಾಗುತ್ತಿದೆ ಎಂದು ಸ್ನೇಹಿತೆ ಹೇಳಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಆಕೆ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ತಕ್ಷಣ ಈ ವಿಚಾರವನ್ನು ಸ್ನೇಹಿತರು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಪರೀಕ್ಷೆಯನ್ನು ನಡೆಸಿದರು. ನಂತರವಷ್ಟೇ ಗೊತ್ತಾಗಿದ್ದು, ಶಿರಿಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು. ಕೈಗಳಿಂದ ವಿಷವನ್ನು ಇಂಜೆಕ್ಟ್​ ಮಾಡಿರುವ ಗುರುತು ಪತ್ತೆಯಾಗಿತ್ತು. ಶವಪರೀಕ್ಷೆಯ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆಯಾದ ಕೇವಲ ಮೂರೇ ತಿಂಗಳಿಂದ ಎರಡು ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. (ಏಜೆನ್ಸೀಸ್​)

ಇದನ್ನೂ ಓದಿರಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…