ಮಂಡ್ಯ: ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜತೆಗೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವ ಎಂಟು ಮಹಿಳೆಯರನ್ನು ನೆಲತಾಯಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಿ.3ರಂದು ಬೆಳಗ್ಗೆ 11ಗಂಟೆಗೆ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವರಾಜ್ ಸಂಘಟನೆಯ ರಾಜ್ಯ ಸಂಯೋಜಕಿ ಅನುಸೂಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನ ನೀಲಮ್ಮ, ರಾಯಚೂರಿನ ಹನುಮಮ್ಮ, ಬೆಂಗಳೂರು ನಗರ ಜಿಲ್ಲೆಯ ಕೋಕಿಲಾ, ಮಂಡ್ಯ ಜಿಲ್ಲೆಯ ಜಿ.ಸರಸ್ವತಿ, ಚೈತ್ರಾ, ಮಂಜುಳಾ, ಚಿಕ್ಕೋಳಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ರೇಷ್ಮಾ, ದೇವರಾಜು ಕೊಪ್ಪ, ಅಶ್ವಥ್‌ನಾರಾಯಣ, ಮಹೇಶ್ ಚಂದ್ರ ಗುರು, ಲಕ್ಷ್ಮಣಸ್ವಾಮಿ ಇದ್ದರು.
TAGGED:ನೆಲದನಿ ಪ್ರಶಸ್ತಿ