ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದವರ ಕಾರ್ಯ ಸ್ಮರಣೀಯ

ಮೂಡಲಗಿ: ನೆರೆಯಿಂದ ಸಮಸ್ಯೆ ಅನುಭವಿಸುತ್ತಿದ್ದವರ ನೆರವಿಗೆ ಬಂದ ಪ್ರತಿಯೊಬ್ಬರ ಸೇವೆ ಸ್ಮರಣೀಯ ಎಂದು ಬಿಇಒ ಅಜೀತ ಮನ್ನಿಕೇರಿ ದಾನಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಸಮೀಪದ ಮಸಗುಪ್ಪಿ ಮತ್ತು ತಿಗಡಿ ಶಾಲೆಗಳಿಗೆ ಬೆಂಗಳೂರಿನ ರಾಜಾಜಿ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲಾ ಪರಿಕರಗಳನ್ನು ನೀಡಿದ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.

ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಶ್ರೀಧರ ಮಾತನಾಡಿ, ನೆರೆಗೆ ತುತ್ತಾದ ಈ ಭಾಗದ ಜನರಿಗೆ ಸಹಾಯ ಮಾಡಬೇಕು ಎಂಬ ಇಚ್ಚೆ ಹೊಂದಿದ್ದ ರಾಜಾಜಿನಗರ ನಿವಾಸಿಗಳ ಆಸೆ ಈಡೇರಿಸುದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ, ಜಂಟಿ ಕಾರ್ಯದರ್ಶಿ ಡಾ.ಮಂಜುನಾಥ ಸ್ವಾಮಿ ಮಾತನಾಡಿದರು. ರಾಜಾಜಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ರವೀಂದ್ರ, ವಿಠ್ಠಲ ಮುಸೆಪ್ಪಗೋಳ, ಗಂಗಾಧರ ಕೆ., ಮಧನ ಕುಮಾರ, ಎನ್.ಬಾಬು, ಗಂಗಾಧರ, ಸುದರ್ಶನ, ಸಿಆರ್‌ಪಿ ಟಿ.ಬಿ.ಜೋರಾಪುರೆ, ಶಿಕ್ಷಕರಾದ ಕೆ.ಆರ್.ಡೊಳ್ಳಿ, ಗಿಡ್ಡಗೌಡರ ಮತ್ತಿತರರಿದ್ದರು.

Leave a Reply

Your email address will not be published. Required fields are marked *