More

    ಇಂದು ಒಕ್ಕಲಿಗರ ಸಂಘದಿಂದ ಪರಿಹಾರ, ವಿದ್ಯಾರ್ಥಿ ವೇತನ ವಿತರಣೆ

    ಚಿಕ್ಕಮಗಳೂರು: ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 76ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಒಕ್ಕಲಿಗರ ಸಂಘದಿಂದ ಜ.18 ರಂದು ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ತಿಳಿಸಿದರು.

    ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ನೆರೆ ಸಂತ್ರಸ್ತರಿಗೆ 9.64 ರೂ. ಪರಿಹಾರ ಹಾಗೂ 37.67 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಒಟ್ಟು ಮೊತ್ತದಲ್ಲಿ 11.49 ಲಕ್ಷ ರೂ. ಸಿಜೆವಿಎಸ್ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ಮತ್ತು ಅಂಕಗಳ ಆಧಾರದ ಮೇಲೆ 8ನೇ ತರಗತಿಯಿಂದ ಪದವಿವರೆಗೆ ವಿದ್ಯಾರ್ಥಿಗಳನ್ನು ಪರಿಗಣಿಸಲಾಗಿದೆ. ಪ್ರೌಢಶಾಲೆಯ 249, ಪಪೂ ಕಾಲೇಜಿನ 267, ಪದವಿಯ 311, ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 9 ಮತ್ತು ವೈದ್ಯಕೀಯ ಶಿಕ್ಷಣದ 6 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಿಳಿಸಿದರು.

    ಲಕ್ಷ್ಮೀ ಕಡಿದಾಳ್ ಮಂಜಪ್ಪ ನೀಡಿದ ಠೇವಣಿಯ ಬಡ್ಡಿಯನ್ನು ಜೆವಿಎಸ್ ಶಾಲೆಯ 8 ಹೆಣ್ಣು ಮಕ್ಕಳಿಗೆ, ಜೆವಿಎಸ್ ಶಾಲೆಯಲ್ಲಿ 7ನೇ ತರಗತಿ ಓದಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳು ಹಾಗೂ ಯಂಗ್ ಸೈಂಟಿಸ್ಟ್ ಅವಾರ್ಡ್ ಪಡೆದ ಡಾ. ನಿಖಿಲ್ ಕೆ. ಲೋಕೇಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

    ಜೆವಿಎಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಗಳಿಸಿದ ಶಾಲೆಯ 6 ಹಾಗೂ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಈ ವೆಚ್ಚವನ್ನು ದಾನಿಗಳ ನೆರವು ಹಾಗೂ ಸಂಸ್ಥೆಯಿಂದ ಭರಿಸಲಾಗುತ್ತಿದೆ ಎಂದರು.

    ದಿ.ವಿ.ಜಿ.ಸಿದ್ಧಾರ್ಥ ನೆನಪಿನಲ್ಲಿ ಠೇವಣಿ ಇರಿಸಿರುವ 15 ಲಕ್ಷ ರೂ.ನ ಬಡ್ಡಿಯಲ್ಲಿ ಜೆವಿಎಸ್ ಶಾಲೆಯ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಜೆವಿಎಸ್​ನ ಹಿಂದುಳಿದ ಹಾಗೂ ಬಡ 269 ವಿದ್ಯಾರ್ಥಿಗಳಿಗೆ 6.67 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಜೆವಿಎಸ್ ಪಪೂ ಕಾಲೇಜಿನ 93 ವಿದ್ಯಾರ್ಥಿಗಳಿಗೆ 6.67 ಲಕ್ಷ ಪ್ರೋತ್ಸಾಹ ಧನ ವಿತರಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts