ಅಥಣಿ: ನೆರೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

Latest News

ಮನವಿಗಾರರ ಜತೆ ಪ್ರಧಾನಿ ಮಾತುಕತೆ ಅವಧಿ 20 ನಿಮಿಷ: ಕೃಷಿಕರ ಸಮಸ್ಯೆ ಕೊಂಡೊಯ್ದ ಪವಾರ್ ಜತೆಗೆ 50 ನಿಮಿಷದ ಮಾತುಕತೆ ಯಾಕೆ?

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್​ಸಿಪಿ ನಾಯಕ ಶರದ್ ಪವಾರ್ ನಡುವಿನ...

ಗವಿಸಿದ್ಧೇಶ್ವರ ಶ್ರೀಗಳ ಸದ್ಭಾವನಾ ಯಾತ್ರೆಗೆ ಸ್ವಾಗತ, ಸಹಬಾಳ್ವೆ, ಸಾಮರಸ್ಯ ಸಂದೇಶ ಸಾರಿದ ಶ್ರೀಗಳು

ಸಿಂಧನೂರು: ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಬುಧವಾರ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ 6ನೇ ದಿನದ ಸದ್ಭಾವನಾ ಯಾತ್ರೆ ನಡೆಸಿ ಸಹಬಾಳ್ವೆ, ಸಾಮರಸ್ಯದ ಸಂದೇಶ...

ಬಾಗೂರು, ಕರ್ಕಿಹಳ್ಳಿಯಲ್ಲಿ ಪೊಲೀಸರ ದಾಳಿ, 9 ಲಕ್ಷ ರೂ. ಮೌಲ್ಯದ ಅಕ್ರಮ ಮರಳು ವಶ

ದೇವದುರ್ಗ ಗ್ರಾಮೀಣ: ತಾಲೂಕಿನ ನದಿದಂಡೆ ಗ್ರಾಮಗಳಲ್ಲಿ ನಡೆಯುತ್ತಿದ್ದ ಮರಳು ಅಕ್ರಮ ದಂಧೆ ವಿರುದ್ಧ ಪೊಲೀಸರು ದಾಳಿ ಮುಂದುವರಿಸಿದ್ದು, ಮಂಗಳವಾರ ಸಂಜೆ ದೇವದುರ್ಗ ಹಾಗೂ...

ಹೆಬ್ಬಾಳ ಶ್ರೀಬೋಳೋಡಿ ಬಸವೇಶ್ವರ ರಥೋತ್ಸವ ಡಿ.10 ರಂದು

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಯೋಗಿಗಳ ಮಾಹಿತಿ | ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯ ಕಂಪ್ಲಿ: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ, ಡಿ.10ರಂದು ಸಂಜೆ...

ಸಾರ್ವಜನಿಕ ಸಮಸ್ಯೆ ನಿರ್ಲಕ್ಷಿಸದಿರಿ- ಅಧಿಕಾರಿಗಳಿಗೆ ಲೋಕಾಯುಕ್ತ ಸಿಪಿಐ ವಸಂತ ಅಸೋದೆ ತಾಕೀತು

ಹೂವಿನಹಡಗಲಿ: ಸಾರ್ವಜನಿಕರ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಪರಿಹರಿಸುವುದರ ಜತೆಗೆ ಸೂಕ್ತ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹೊಸಪೇಟೆ ಲೋಕಾಯುಕ್ತ ಸಿಪಿಐ ವಸಂತ ಅಸೋದೆ ಸೂಚಿಸಿದರು. ಪಟ್ಟಣದ ತಾಪಂ...

|ಶಿವಕುಮಾರ ಅಪರಾಜ್ ಅಥಣಿ

ತಾಲೂಕಿನ ನೆರೆ ಪೀಡಿತ 22 ಗ್ರಾಮಗಳ ಶಾಲಾ ಮಕ್ಕಳು ನಮಗೆ ಅಕ್ಕಿ ಬೇಡ, ಪುಸ್ತಕ ಕೊಡಿ, ಅನ್ನ ಬೇಡ-ಪೆನ್ನು ಕೊಡಿ ಎಂದು ಶಿಕ್ಷಣಕ್ಕಾಗಿ ಪರಾದುಡುವ ಸ್ಥಿತಿ ಬಂದಿದೆ.

ತಾಲೂಕಿನ 54 ಶಾಲೆಗಳು ಪ್ರವಾಹದಿಂದ ಹಾನಿಯಾಗಿವೆ. 6,900 ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕರಿ ನೆರಳು ಆವರಿಸಿದೆ. 172 ಶಾಲೆ ಕೊಠಡಿಗಳಿಗೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. 11 ಶಾಲೆಗಳು ಕಲಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿವೆ. 76 ಸಾವಿರ ಪಠ್ಯ ಪುಸ್ತಕಗಳು ನೀರಿಗಾಹುತಿಯಾಗಿವೆ. ಶಿಕ್ಷಣ ಇಲಾಖೆಗೆ ಅಂದಾಜು 33 ಕೋಟಿ ರೂ. ಹಾನಿಯಾಗಿದೆ ಎಂದು ಅಥಣಿ ಬಿಇಒ ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಸುರಿದ ಮಳೆ, ಕೃಷ್ಣಾ ನದಿ ಪ್ರವಾಹದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಗ್ರಿಗಳು ನಾಶವಾಗಿವೆ. ಅವರಖೋಡ ಗ್ರಾಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಎರಡನೇ ಹಂತದಲ್ಲಿ ವಿತರಿಸಬೇಕಿದ್ದ ಪುಸ್ತಕಗಳು ನೆನೆದು ಹಾಳಾಗಿವೆ. ಇನ್ನೂ ಮಕ್ಕಳ ಶೈಕ್ಷಣಿಕ ದಾಖಲಾತಿಗಳು, ಗ್ರಂಥಾಲಯದಲ್ಲಿ ಸಂಗ್ರಹಿಸಲಾದ ಸಾವಿರಾರು ಪುಸ್ತಕಗಳು ನೀರು ಪಾಲಾಗಿವೆ.

ತಾಲೂಕಿನ ಹುಲಗಬಾಳ, ದರೂರ, ಸಪ್ತಸಾಗರ, ತೀರ್ಥ ಗ್ರಾಮಗಳು ಸೇರಿ ಅಥಣಿ ತಾಲೂಕು ಒಂದರಲ್ಲೇ ಐವತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಮಳೆ ಹಾಗೂ ಪ್ರವಾಹದ ಪರಿಣಾಮ ಹಲವು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಅಂತಹ ಕೊಠಡಿಗಳನ್ನು ಗುರುತಿಸಿ ಬೇರೆ ವ್ಯವಸ್ಥೆ ಮಾಡಲಾಗಿದೆ. ನೆರೆ ಇಳಿಮುಖವಾಗುತ್ತಿದ್ದು ಸದ್ಯ ನಿರಾಶ್ರಿತ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿ ಪೂರೈಕೆ ಮಾಡುವುದು ಅಗತ್ಯವಾಗಿದೆ. ದಾನಿಗಳು ಸಂಘ, ಸಂಸ್ಥೆಗಳು ಮಕ್ಕಳ ಕನುಸುಗಳಿಗೆ ನೆರವಾಗುವುದು ಅವಶ್ಯವಾಗಿದೆ.

ನಮ್ಮ ಎಲ್ಲ ಪುಸ್ತಗಳು ತೋಯ್ದ ರಾಡಿ ಆಗ್ಯಾವರ‌್ರಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಟ್ಸ್ ಮಾಡಿದ್ದೀವಿ. ಎಲ್ಲಾ ಹಾಳಾಗೈತಿ. ಸರ್ಕಾರ ನಮ್ಮಗೆ ಸಹಾಯ ಮಾಡಿಬೇಕ್ರಿ.. 14 ದಿನದಿಂದ ನಾವು ಸಾಲಿಗೆ ಹೋಗಿಲ್ಲ. ನಾವು ಬಡವರೀ.. ಇದ್ದ ಪುಸ್ತಕ, ಬಟ್ಟೆ, ಎಲ್ಲ ಹಾಳಾಗ್ಯಾವರೀ.
ವಿದ್ಯಾ ಪಾಟೀಲ ಅವರಖೋಡ ಗ್ರಾಮದ ವಿದ್ಯಾರ್ಥಿನಿ

ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ವರದಿ ಸಿದ್ಧ ಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. 11 ಶಾಲೆಗಳು ನೆಲ ಸಮವಾಗಿರುವ ಕಾರಣ ಸ್ಥಳೀಯ ಸಮುದಾಯ ಭವನಗಳಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದು ವಾರದಲ್ಲಿ ಸಮುವಸ್ತ್ರ ಹಾಗೂ ಪಠ್ಯ ಪುಸ್ತಕರಗಳನ್ನು ಪೂರೈಸಲಾಗುವುದು.

| ಸಿ.ಎಂ.ನೇಮಗೌಡ ಕ್ಷೇತ್ರ ಶಿಕ್ಷಣಾಕಾರಿ ಅಥಣಿ

- Advertisement -

Stay connected

278,627FansLike
573FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​ ಪಿಸಿ ThinkPadX1: ಚೀನಾದಲ್ಲಿ ಲೆನೊವೊ ಟೆಕ್...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....