More

    ಸೈನಾ, ಶ್ರೀಕಾಂತ್​ಗೆ ಮೊದಲ ಸುತ್ತಿನಲ್ಲೇ ಶಾಕ್

    ಜಕಾರ್ತ: ವಿಶ್ವ ಚಾಂಪಿಯನ್ ಪಿವಿ ಸಿಂಧು ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದರೆ, ಭಾರತದ ಇತರ ಸ್ಟಾರ್ ಷಟ್ಲರ್​ಗಳಾದ ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್, ಬಿ. ಸಾಯಿ ಪ್ರಣೀತ್ ಮತ್ತು ಸೌರಭ್ ವರ್ಮ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಸೈನಾ ಸೋಲಿನಿಂದಾಗಿ ಟೂರ್ನಿಯ 2ನೇ ಸುತ್ತಿನಲ್ಲಿ ಸಿಂಧು ವಿರುದ್ಧದ ಮುಖಾಮುಖಿ ತಪ್ಪಿದೆ.

    5ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್​ನ ಅಯಾ ಒಹೊರಿ ವಿರುದ್ಧ 14-21, 21-15, 21-11 ಗೇಮ್ಳಿಂದ ಹೋರಾಟಯುತ ಗೆಲುವು ಕಂಡರು. ಸಿಂಧು ಮೊದಲ ಗೇಮ್ಲ್ಲೇ ಎಡವಿದಾಗ ಭಾರತದ ಇತರ ಷಟ್ಲರ್​ಗಳಂತೆ ಸೋಲಿನ ಹಾದಿ ಹಿಡಿಯುವ ಭೀತಿ ಕಾಣಿಸಿದರೂ, ಒಟ್ಟಾರೆ 59 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಳ್ಳುವಲ್ಲಿ ಸಫಲರಾದರು. ಈ ಮೂಲಕ ವಿಶ್ವ ನಂ. 20 ಆಟಗಾರ್ತಿ ಒಹೊರಿ ವಿರುದ್ದದ ಎಲ್ಲ 10 ಪಂದ್ಯಗಳಲ್ಲಿ ಗೆದ್ದ ಅಜೇಯ ದಾಖಲೆ ಉಳಿಸಿಕೊಂಡರು. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್​ನಲ್ಲೂ ಸಿಂಧು, 2ನೇ ಸುತ್ತಿನಲ್ಲಿ ಒಹೊರಿಗೆ ಸೋಲುಣಿಸಿದ್ದರು. 24 ವರ್ಷದ ಸಿಂಧು 2ನೇ ಸುತ್ತಿನಲ್ಲಿ ಜಪಾನ್​ನ ಸಯಕಾ ಟಕಹಶಿ ವಿರುದ್ಧ ಸೆಣಸಲಿದ್ದಾರೆ. ಟಕಹಶಿ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಸೈನಾಗೆ 19-21, 21-13, 21-5ರಿಂದ ಸೋಲುಣಿಸಿದರು. ಸೈನಾ ಮೊದಲ ಗೇಮ್ ಗೆದ್ದರೂ, ಮತ್ತೆರಡು ಗೇಮ್ಳಲ್ಲಿ ತಿರುಗೇಟು ಎದುರಿಸಿದರು. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಸೈನಾ ಕ್ವಾರ್ಟರ್​ಫೈನಲ್​ಗೇರಿದ್ದರು. ಸೈನಾರ ಪತಿ ಪಿ. ಕಶ್ಯಪ್ ಕೂಡ ಮೊದಲ ಸುತ್ತಿನಲ್ಲೇ ಸೋಲು ಕಂಡರು. ಕಶ್ಯಪ್ 7ನೇ ಶ್ರೇಯಾಂಕಿತ ಸ್ಥಳೀಯ ಆಟಗಾರ ಆಂಟೊನಿ ಸಿನಿಸುಕ ವಿರುದ್ಧ 14-21, 12-21 ನೇರಗೇಮ್ಳಿಂದ ಶರಣಾದರು.

    ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಜೆರ್ರಿ-ಸಿಕ್ಕಿರೆಡ್ಡಿ ಜೋಡಿ ಕೊರಿಯಾದ ಕೊ ಸಂಗ್-ಯುಮ್ ಹೀ ವಿರುದ್ಧ ಸೋಲು ಕಂಡಿತು. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಕೂಡ ಮೊದಲ ಸುತ್ತಿನಲ್ಲೇ ಸವಾಲು ಮುಗಿಸಿತು. -ಏಜೆನ್ಸೀಸ್

    ಶ್ರೀಕಾಂತ್, ಪ್ರಣೀತ್​ಗೆ ಮತ್ತೆ ನಿರಾಸೆ

    ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ. 12 ಕೆ. ಶ್ರೀಕಾಂತ್ ಸ್ಥಳೀಯ ಫೇವರಿಟ್ ಆಟಗಾರ ಶೆಸರ್ ಹಿರೆನ್ ರುಸ್ತವಿಟೊ ವಿರುದ್ಧ 21-18, 12-21, 14-21ರಿಂದ ಶರಣಾದರು. 1 ಗಂಟೆ 3 ನಿಮಿಷದ ಹೋರಾಟದಲ್ಲಿ ಶ್ರೀಕಾಂತ್ ಮೊದಲ ಗೇಮ್ ಗೆದ್ದಿದ್ದರೂ, ಮತ್ತೆರಡು ಗೇಮ್ಳಲ್ಲಿ ಎಡವಿದರು. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್​ನಲ್ಲೂ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತಿದ್ದರು. ಪ್ರಣೀತ್ ಕೂಡ ಸತತ 2ನೇ ವಾರ ಮೊದಲ ಸುತ್ತಿನಲ್ಲೇ ಎಡವಿದರು. ಅವರು ಚೀನಾದ ಶಿ ಯು ಕ್ವಿ ವಿರುದ್ಧ 21-16, 18-21, 10-21ರಿಂದ ಸೋಲು ಕಂಡರು. ಸೌರಭ್ ವರ್ಮ, ಸಮೀರ್ ವರ್ಮ ಸಹೋದರರೂ ಮೊದಲ ಸುತ್ತಿನಲ್ಲೇ ಮಣಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts